ಹಾಸನ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಚಿಂತನಾ ಸಭೆ

ಭಾರತ ದೇಶದ ಸಾಹಿತ್ಯವು ಅತ್ಯಂತ ಪ್ರಾಚೀನ ವಿಶಾಲ ಹಾಗೂ ವೈವಿಧ್ಯತೆಯಿಂದ ಕೂಡಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಡಾ.ಎನ್.ರಮೇಶ್ ತಿಳಿಸಿದರು.

(Kannada News) : ಹಾಸನ : ಭಾರತ ದೇಶದ ಸಾಹಿತ್ಯವು ಅತ್ಯಂತ ಪ್ರಾಚೀನ ವಿಶಾಲ ಹಾಗೂ ವೈವಿಧ್ಯತೆಯಿಂದ ಕೂಡಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಡಾ.ಎನ್.ರಮೇಶ್ ತಿಳಿಸಿದರು.

ನಗರದ ಬಿಎಂ ರಸ್ತೆ ಸೂರ್ಯ ವರ್ಧನ ಸಭಾಂಗಣದಲ್ಲಿ ಚಿಂತನ ಸಭೆಯಲ್ಲಿ ಪ್ರಾಸ್ತಾವಿಕ ಭಾಷಣ ನುಡಿಗಳನಾಡಿದ ಭಾರತ ದೇಶವು ಅನೇಕ ಭಾಷೆಗಳಿಂದ ಕೂಡಿದ್ದರೂ ಸಾಹಿತ್ಯವು ಒಂದೇ ಎಂಬ ವಿಷಯವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಹಣತೆ ಬಳಗದ ಸಾತ್ವಿಕ್ ರವರು ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಹಾಗೂ ರಾಷ್ಟ್ರೀಯ ನಾಯಕರ ಸಾಹಿತ್ಯವನ್ನು ಮಕ್ಕಳಿಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಹಕಾರ್ಯದರ್ಶಿ ಗೋವಿಂದ ಶರ್ಮಾರವರು ಮಾತನಾಡಿ ರಾಷ್ಟ್ರೀಯತೆಗಾಗಿ ಸಾಹಿತ್ಯ ಎಂಬ ಅಭಿಯಾನವನ್ನು ಜನರಿಗೆ ತಲುಪಿಸುವ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದರು.

ನಿವೃತ್ತ ತಹಶೀಲ್ದಾರ್ ಶಾರದಮ್ಮ, ನಿವೃತ್ತ ಪ್ರಾಂಶುಪಾಲರಾದ ಮಂಜಪ್ಪಗೌಡರು, ಲಕ್ಷ್ಮೀನಾರಾಯಣ ಪುಟ್ಟಪ್ಪ, ವಕೀಲ ಮಂಜುನಾಥ ಹಾಗೂ ಜಿಲ್ಲೆಯ ವಿವಿಧ ಕ್ಷೇತ್ರಗಳಿಂದ ಆಗಮಿಸಿದ ಅನೇಕ ಚಿಂತಕರು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ “ರಾಷ್ಟ್ರೀಯತೆ” ಪ್ರತಿಪಾದಿಸುವ “ಸಾಹಿತ್ಯ” ವಿಚಾರಧಾರೆಗಳು ಶ್ರೀಸಾಮಾನ್ಯನನ್ನು ತಲುಪುವಂತೆ ಮಾಡಲು ಹಲವಾರು ರೀತಿಯ ಚರ್ಚೆ ಸೂಚನೆಗಳು ಹಾಗೂ ಸಲಹೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಶ್ರೀನಿವಾಸ ಗೌಡ ಉಪಾಧ್ಯಕ್ಷ ಗುರುಪ್ರಸಾದ್ ಕಾಮತ್ ರವರು ಭಾಗವಹಿಸಿದ್ದರು. ಸಂಚಾಲಕ ನಾಗೇಂದ್ರ ಹಾಗೂ ಇತರರು ಹಾಜರಿದ್ದರು.

Web Title : akhila bharatiya sahitya parishat chintana sabhe

Scroll Down To More News Today