Kannada News - Kannadigas Adda

Welcome To Kannada News - Kannadigas Adda

ಜಿಲ್ಲಾ ಉಸ್ತುವಾರಿ ದೊರೆತರೆ ಮಾದರಿ ಜಿಲ್ಲೆಯಾಗಿ ಅಭಿವೃದ್ಧಿ -ಸಚಿವ ಆರ್.ಶಂಕರ್

Kannadanews.today - ಕನ್ನಡಿಗಾಸ್ ಅಡ್ಡ

ಕನ್ನಡ ನ್ಯೂಸ್ – Kannada News : Haveri : ಜಿಲ್ಲಾ ಉಸ್ತುವಾರಿ ದೊರೆತರೆ ಮಾದರಿ ಜಿಲ್ಲೆಯಾಗಿ ಅಭಿವೃದ್ಧಿ -ಸಚಿವ ಆರ್.ಶಂಕರ್

ಹಾವೇರಿ : ಅರಣ್ಯ ಪರಿಸರ ಖಾತೆಯಂತಹ ಉತ್ತಮವಾದ ಖಾತೆ ನನಗೆ ದೊರೆತಿದೆ. ಒಂದೊಮ್ಮೆ ಹಾವೇರಿ ಜಿಲ್ಲೆಯ ಉಸ್ತುವಾರಿ ದೊರೆತರೆ ಮಾದರಿ ಜಿಲ್ಲೆಯಾಗಿ ಹಾವೇರಿ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವೆ ಎಂದು ಅರಣ್ಯ ಹಾಗೂ ಪರಿಸರ ವಿಜ್ಞಾನ ಖಾತೆ ಸಚಿವ ಆರ್.ಶಂಕರ್ ಅವರು ಹೇಳಿದರು.
 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿ ಮಾತನಾಡಿದ ಅವರು ಮುಂದಿನ ಐದು ವರ್ಷಗಳಲ್ಲಿ ರಾಣೇಬೆನ್ನೂರ ವಿಧಾನಸಭಾ ಕ್ಷೇತ್ರ ಹಾಗೂ ಹಾವೇರಿ ಜಿಲ್ಲೆಯನ್ನು ಒಂದು ಮಾದರಿಯನ್ನಾಗಿ ಅಭಿವೃದ್ಧಿ ಪಡಿಸಲು ಶ್ರಮಿಸುವೆ ಎಂದು ತಿಳಿಸಿದರು.

ನನ್ನ ಕ್ಷೇತ್ರ ಹಾಗೂ ಜಿಲ್ಲೆಗೆ ಅಗತ್ಯವಾದ ಹೆಚ್ಚುವರಿ ವಿಶೇಷ ಅನುದಾನವನ್ನು ತರಲು ಪ್ರಯತ್ನಿಸುತ್ತೇನೆ.

 ಜುಲೈನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಬಜೆಟ್ ಮಂಡಿಸಲಿದ್ದಾರೆ. ಈ ಸಂದರ್ಭದಲ್ಲಿ ನನ್ನ ಕ್ಷೇತ್ರ ಹಾಗೂ ಜಿಲ್ಲೆಗೆ ಅಗತ್ಯವಾದ ಹೆಚ್ಚುವರಿ ವಿಶೇಷ ಅನುದಾನವನ್ನು ತರಲು ಪ್ರಯತ್ನಿಸುತ್ತೇನೆ. ಈ ನಿಟ್ಟಿನಲ್ಲಿ ಯಾವ ಯಾವ ಯೋಜನೆಗಳು ಅಗತ್ಯವಾಗಿವೆ ಬೇಕಾದ ಅನುದಾನ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸುವೆ ಎಂದು ಹೇಳಿದರು.
 ಅರಣ್ಯ ಇಲಾಖೆಯಲ್ಲಿ ಹೆಚ್ಚಿನ ಕೆಲಸಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ಈ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸುವೆ. ಈಗಾಗಲೇ ತಾಪಮಾನ ಹೆಚ್ಚಾಗುತ್ತಿದೆ. ಪರಿಸರ ನಾಶವಾಗುತ್ತಿದೆ. ವಾಯುಮಾಲಿನ್ಯ ವಿಪರಿತವಾಗುತ್ತಿದೆ. ಈ ಎಲ್ಲದರ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸ್ವೀಜ್ಜರ್‍ಲ್ಯಾಂಡ್  ದೇಶದಲ್ಲಿ ಮಾದರಿಯಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ಕಾರ್ಯಕ್ರಮಗಳನ್ನು ರಾಜ್ಯದಲ್ಲೂ ಜಾರಿಗೊಳಿಸುವ ನಿಟ್ಟಿನಲ್ಲಿ ಚಿಂತಿಸಲಾಗಿದೆ ಎಂದು ತಿಳಿಸಿದರು.
 ಪರಿಸರ ಕಲುಷಿತಗೊಳ್ಳಲು ಹಳೆಯದಾದ ವಾಹನಗಳ ಓಡಾಟ ಕಾರಣವಾಗಿದೆ. ಈ ನಿಟ್ಟಿನಲ್ಲಿ 15 ವರ್ಷಗಳ ಹಳೆಯ ವಾಹನಗಳ ಸಂಚಾರ ನಿರ್ಭಂಧಿಸಲು ಚಿಂತಿಸಲಾಗಿದೆ. ಹೊಸ ವಾಹನಗಳನ್ನು ಖರೀದಿಸಲು ಮಾಲೀಕರಿಗೆ ಅಗತ್ಯವಿದ್ದಲ್ಲಿ ಸಹಾಯಧನ ಸಹಿತವಾದ ಹಣಕಾಸಿನ ನೆರವು ಒದಗಿಸಲು  ಯೋಜಿಸಲಾಗುವುದು. 

ಶ್ರೀಗಂಧ, ರಕ್ತಚಂದನ ಖಾಸಗಿ ಬೆಳೆ ಕಟಾವಿಗೆ ಅನುಮತಿ ನೀಡಲು ಏಕಗವಾಕ್ಷಿ

ಏಕಗವಾಕ್ಷಿ: ಅಕೇಶಿಯಾ ಹಾಗೂ ನೀಲಗಿರಿ ಮರಗಳಿಂದ ಅಂತರ್ಜಲ ಕುಸಿತಗೊಳ್ಳುತ್ತಿದೆ. ಈ ಮರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು ಹಾಗೂ ಖಾಸಗಿ ಒಡೆತನದ ಶ್ರೀಗಂಧದ ಮರ ಹಾಗೂ ರಕ್ತಚಂದನ ಮರಗಳ ಕಟಾವಿಗೆ ಈಗಿನ ನಿಯಮಾವಳಿ ತೊಂದರೆಯಾಗಿದೆ ಎಂದು ದೂರುಗಳಿವೆ. ಈ ನಿಯಮಗಳನ್ನು ಸರಳೀಕರಿಸಿ ಏಕಗವಾಕ್ಷಿ ಪದ್ಧತಿಯಲ್ಲಿ ಅನುಮತಿ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ವಾಯು ಮಾಲಿನ್ಯದಿಂದ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳು ಅಸ್ಥಮಾ ಸಿಟಿಗಳಾಗಿ ಬದಲಾಗುತ್ತಿವೆ. ಈ ನಿಟ್ಟಿನಲ್ಲಿ ಹಸರೀಕರಣ, ಕಾರ್ಖಾನೆಗಳ ಕಲುಷಿತ ತಡೆಯಲು ಹಾಗೂ ಗಿಡ-ಮರಗಳನ್ನು ಹೆಚ್ಚು ನೆಡುವುದರ ಮೂಲಕ ಪರಿಸರ ಸಮತೋಲನ ಕಾಪಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕಾರ್ಖಾನೆಗಳ ತ್ಯಾಜ್ಯದಿಂದಾಗುವ ವಾಯು ಮಾಲಿನ್ಯವನ್ನು  ತಡೆಯುವ ನಿಟ್ಟಿನಲ್ಲಿ ನಿಯಮಾವಳಿಗಳ ಪಾಲನೆಯ ಕಠಿಣ ಷರತ್ತುಗಳನ್ನು ವಿಧಿಸಲಾಗುವುದು. ತಪಾಸಣೆಗಳನ್ನು ಕಠಿಣಗೊಳಿಸಲಾಗುವುದು. ನಿಯಮಿತವಾಗಿ ರಾಜ್ಯದ ಎಲ್ಲ ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಸರ ನಿಯಮಾಳಿಗಳ ಪಾಲನೆ ಕುರಿತಂತೆ ಪರಿಶೀಲಿಸಲಾಗುವುದೆಂದು ತಿಳಿಸಿದರು.
ಕಾಡು ಪ್ರಾಣಿಗಳ ಹಾವಳಿ ತಡೆಗೆ ರೈತರಿಗೆ ಸೋಲಾರ್ ಪೆನ್ಸಿಂಗ್ ಅಳವಡಿಸಲು ಹೆಚ್ಚಿನ ಸಹಾಯಧನ ನೀಡುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಹಾಗೂ ಹಾವೇರಿ ಜಿಲ್ಲೆ ಹಾಗೂ ರಾಣೇಬೆನ್ನೂರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. //// Haveri News Kannada

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.