ತುಂಬಾ ಕಾಲ ಶೂ ಹಾಕೋರು ಈ ಟಿಪ್ಸ್ ಬಳಸಿ ಪಾದಗಳ ವಾಸನೆ ದೂರ ಮಾಡಿ.
ಬ್ಯಾಕ್ಟೀರಿಯಾ, ಬೆವರು ಹಾಗು ಹಾಗೂ ಇನ್ನಿತರ ಕಾರಣಗಳಿಗೆ ನಾವು ಶೂ ಧರಿಸಿದಾಗ ಕೆಟ್ಟ ವಾಸನೆ ಬರುವಂತೆ ಮಾಡುತ್ತದೆ, ಸಧಾಕಾಲ ಶೂ ಧರಿಸಿಯೂ ವಾಸನೆ ಬಾರದಂತೆ ತಡೆಯಲು ಇಲ್ಲಿವೆ ಕೆಲವು ಸರಳ ಟಿಪ್ಸ್.
ಕೆಲವು ಜನರಿಗೆ ಶೂ ಅಥವಾ ಚಪ್ಪಲಿಗಳನ್ನು ಹೆಚ್ಚು ಕಾಲ ಹಾಕಿಕೊಂಡಾಗ ಕೆಟ್ಟ ವಾಸನೆ ಬರುವುದು ಸಹಜ ಅದರಿಂದ ಕೆಲವು ಬಾರಿ ಮುಜುಗರಕ್ಕೆ ಈಡಾಗುತ್ತಾರೆ, ಹಾಗಾದ್ರೆ ಯಾವುದೇ ರಾಸಾಯನಿಕಗಳನ್ನು ಬಳಸದೇ ಈ ಸಿಂಪಲ್ ಟಿಪ್ಸ್ ಗಳನ್ನು ಬಳಸುವುದರಿಂದ ವಾಸನೆಯನ್ನು ತಪ್ಪಿಸಬಹುದು ಅವುಗಳು ಹೀಗಿವೆ.
ಶೂ ವಾಸನೆ ಅಥವಾ ಪಾದದ ವಾಸನೆ ತಪ್ಪಿಸಲು ಈ ಟಿಪ್ಸ್ ಅನುಸರಿಸಿ.
ನೀಲಗಿರಿ ಎಣ್ಣೆ ಯಿಂದ ನಿಮ್ಮ ಪಾದಗಳನ್ನು ಮಸಾಜ್ ಮಾಡಿಕೊಳ್ಳುವುದರಿಂದ ವಾಸನೆ ಕಡಿಮೆಯಾಗಿ ಘಮಘಮ ವಾಸನೆ ಬರುತ್ತದೆ, ನೀಲಗಿರಿ ಎಣ್ಣೆಯನ್ನು ಬಳಸುವುದರಿಂದ ಪಾದಗಳಿಗೂ ಸಹ ಯಾವುದೇ ಇನ್ಫೆಕ್ಷನ್ ಗಳು ಆಗುವುದಿಲ್ಲ
ನೀವು ಸದಾ ಕಾಲ ಧರಿಸುವ ಶೂ ಚಪ್ಪಲಿಗಳನ್ನು ಬಿಸಿ ನೀರಿನಲ್ಲಿ ಸ್ವಲ್ಪ ಅಡುಗೆ ಸೋಡಾ ಬೆರೆಸಿ ನೆನೆಯಿಟ್ಟು ತೊಳೆಯುವುದರಿಂದ ವಾಸನೆ ಬರುವುದು ತಪ್ಪುತ್ತದೆ
ನಿಮ್ಮ ಕಾಲುಗಳು ಸದಾ ಬೆವರುತ್ತಿದ್ದರೆ ಶೂ ಹಾಕಿಕೊಳ್ಳುವ ಮುನ್ನ ಟಾಲ್ಕಂ ಪೌಡರ್ ಅನ್ನು ಹಾಕಿ ನಂತರ ಶೂ ಅಥವಾ ಚಪ್ಪಲಿ ಹಾಕಿಕೊಳ್ಳಿ
ಸಾಕ್ಸ್ ಗಳನ್ನು ಆದಷ್ಟು ಎರಡು ದಿನಗಳಿಗೊಮ್ಮೆ ಬದಲಾಯಿಸಿ ಅವುಗಳನ್ನು ತೊಳೆಯುವಾಗ ಉಲ್ಟಾ ಮಾಡಿ ತೊಳೆಯಿರಿ ಇದರಿಂದ ಕೊಳೆಯಲ್ಲ ಸಂಪೂರ್ಣವಾಗಿ ಹೋಗಿ ಹಾಕಿಕೊಂಡಾಗ ವಾಸನೆ ಬರುವುದಿಲ್ಲ. ಹಾಗೂ ಪ್ರತಿ ದಿನ ಶುಭ್ರವಾಗಿ ಪಾದಗಳನ್ನು ತೊಳೆಯಿರಿ.
ಅತ್ಯಂತ ಪರಿಣಾಮಕಾರಿ ಪರಿಹಾರವೆಂದರೆ , ಸರಿಯಾದ ಬೂಟುಗಳನ್ನು ಧರಿಸಿರಿ. ಗಾಳಿಯಾಡಬಲ್ಲ ಶೂಗಳನ್ನು ಬಳಸಿ. ಪ್ರತಿದಿನ ದಿನಗಳಲ್ಲಿ ಒಂದೇ ಜೋಡಿಯನ್ನು ಧರಿಸದೆ ನಿಮ್ಮ ಬೂಟುಗಳನ್ನು ಪರ್ಯಾಯಗೊಳಿಸಿ.////
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019