coronavirus : ಕೊರೋನಾ ವೈರಸ್ ಹರಡದಂತೆ ಈ ಮುಜಾಂಗ್ರತಾ ಕ್ರಮಗಳನ್ನು ಪಾಲಿಸಿ
ಕನ್ನಡ ನ್ಯೂಸ್ ಟುಡೇ – Health Tips
ಆರೋಗ್ಯ : ಕೊರೋನಾ ವೈರಸ್ ರೋಗವು ಪ್ರಥಮವಾಗಿ ಚೀನಾ ದೇಶದಲ್ಲಿ ಕಂಡು ಬಂದಿದ್ದು ಈ ರೋಗವು ಅತೀ ವೇಗವಾಗಿ ಹರಡುತ್ತಿದೆ. ವೈರಸ್ ತಜ್ಞರು ಇದು ಪ್ರಾಣಿ ಪ್ರಭೇಧದಲ್ಲಿ ಹುಟ್ಟಿದ್ದು ನಂತರ ಮನುಷ್ಯನಿಂದ ಮನುಷ್ಯನಿಗೆ ಹರಡುವುದಾಗಿದೆ ಎಂದು ಖಚಿತ ಪಡಿಸಿದ್ದಾರೆ.
ಈ ಮಾರಣಾಂತಿಕ ಕೊರೋನಾ ವೈರಸ್ ಕಾಣಿಸಿದ್ದು ಎಲ್ಲಿ ?
ಈ ವೈರಸ್ ೨೦೧೯ರ ಡಿಸೆಂಬರ್ ೧೨ ರಂದು ಚೀನಾದ ವುಹಾನ್ ನಗರದಲ್ಲಿ ಪ್ರಥಮವಾಗಿ ವರದಿಯಾಗಿದ್ದು ಸದ್ಯ ಭಾರತ ಸೇರಿದಂತೆ ಸುಮಾರು ೨೩ ರಾಷ್ಟ್ರಗಳಲ್ಲಿ ಈಗಾಗಲೇ ದೃಢಪಟ್ಟಿರುತ್ತದೆ.
ಈ ವೈರಸ್ ಸೋಂಕಿತ ವ್ಯಕ್ತಿಯಲ್ಲಿ ನೆಗಡಿಯಿಂದ ನಿಮೋನಿಯಾದಂತಹ ರೋಗ ಲಕ್ಷಣಗಳನ್ನು ಉಂಟು ಮಾಡುತ್ತದೆ. ಆದರೆ ಪ್ರಾರಂಭದಲ್ಲಿ ಲಕ್ಷಣ ಆಧಾರಿತ ಚಿಕಿತ್ಸೆ ಪ್ರಾರಂಭಿಸಿದಲ್ಲಿ ಈ ರೋಗಕ್ಕೆ ಹೆದರಬೇಕಾದ ಅವಶ್ಯಕತೆ ಇರುವುದಿಲ್ಲ.
ಜನವರಿ ೨೦೧೯ ರ ನಂತರ ಚೀನಾದ ವುಹಾನ್ ನಗರ ಹಾಗೂ ಸೋಂಕು ದೃಢ ಪಟ್ಟಿರುವ ನೆರೆ ರಾಷ್ಟ್ರಗಳಿಗೆ ಪ್ರಯಾಣಿಸಿ ಹಿಂತಿರುಗಿದವರು, ನೆಗಡಿ, ಕೆಮ್ಮು ಹಾಗೂ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ತುರ್ತಾಗಿ ಆಸ್ಪತ್ರೆಗೆ ಸಂಪರ್ಕಿಸಬೇಕು.
ಕೊರೋನಾ ವೈರಸ್ ರೋಗ ಹರಡುವ ರೀತಿ :
ಸೋಂಕಿತ ವ್ಯಕ್ತಿಯು ಸೀನಿದಾಗ ಮತ್ತು ಕೆಮ್ಮಿದಾಗ, ಸೋಂಕಿತ ವ್ಯಕ್ತಿಯ ಜೊತೆ ನಿಕಟ ಸಂಪರ್ಕ ಹೊಂದಿದಾಗ
ಸೋಂಕಿತ ವ್ಯಕ್ತಿಯ ಜೊತೆಗೆ ಹಸ್ತ ಲಾಘವ ಮತ್ತು ಅಪ್ಪುಗೆ, ಸೋಂಕಿತ ವ್ಯಕ್ತಿಯು ಬಳಸಿದ ವಸ್ತುವನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದಾಗ ಕೊರೋನಾ ವೈರಸ್ ರೋಗ ಹರಡುವ ಸಾಧ್ಯತೆ ಇದೆ.
ಮಾರಕ “ಕೊರೋನಾ ವೈರಸ್ “ರೋಗ ಲಕ್ಷಣಗಳು :
ತೀವ್ರಜ್ವರ, ಕೆಮ್ಮು, ನೆಗಡಿ ಮತ್ತು ಬೇಧಿ, ಗಂಟಲು ನೋವು ಹಾಗೂ ಉಸಿರಾಟದ ತೊಂದರೆ, ರೋಗದ ತೀವ್ರತೆಯು ರೋಗಿಯ ಪ್ರತಿರೋಧಕ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ.
ಕೊರೋನಾ ವೈರಸ್ ತಡೆಯಲು ಮುಂಜಾಗ್ರತಾ ಕ್ರಮಗಳು :
ಕೆಮ್ಮುವಾಗ, ಸೀನುವಾಗ ಬಾಯಿಗೆ ಕರವಸ್ತ್ರ ಅಡ್ಡ ಹಿಡಿಯುವುದು, ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ದೂರವಿರುವುದು, ಸೋಂಕಿತ ವ್ಯಕ್ತಿಯನ್ನು ಮನೆಯಲ್ಲಿಯೇ ಪ್ರತ್ಯೇಕಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗಳದಿರುವುದು, ವೈಯಕ್ತಿಕ ಸ್ವಚ್ಚತೆ ಕಾಪಾಡಿಕೊಳ್ಳುವುದು ವಿಶೇಷವಾಗಿ ಮೇಲಿಂದ ಮೇಲೆ ಸಾಬೂನಿನಿಂದ ಕೈಗಳನ್ನು ತೊಳೆದುಕೊಳ್ಳುವುದು, ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನುವುದು, ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಕೊರೋನಾ ವೈರಸ್ ತಡೆಯಲು ಇರುವ ಮುಂಜಾಗ್ರತಾ ಕ್ರಮಗಳು.
ಕೊರೋನಾ ವೈರಸ್ : ನೆಗಡಿ, ಕೆಮ್ಮು ಹಾಗೂ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ತುರ್ತಾಗಿ ಆಸ್ಪತ್ರೆಗೆ ಭೇಟಿ ನೀಡಿ.
Web Title : Follow these precautions to prevent the spread of coronavirus
Quick Links : Kannada Health Tips | Kannada Home Remedies
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ Facebook | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.