ಪ್ರತಿ ದಿನ ಅನ್ನ (ವೈಟ್ ರೈಸ್) ತಿಂದ್ರೆ ಅಪಾಯ ಗ್ಯಾರಂಟಿ

side effects of white rice

ಪ್ರತಿ ದಿನ ಅನ್ನ (ವೈಟ್ ರೈಸ್) ತಿಂದ್ರೆ ಅಪಾಯ ಗ್ಯಾರಂಟಿ

” ಅನ್ನ ” ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರ ಪ್ರಧಾನ ಆಹಾರವಾಗಿದೆ – ಚೀನಾ, ಭಾರತ, ಮತ್ತು ಜಪಾನ್ನಲ್ಲಿ ವಾಸಿಸುವ ಜನರಿಗೆ ಮಾತ್ರವಲ್ಲದೆ, ಅನೇಕ ಅಮೇರಿಕನ್ನರೂ ಸಹ ಈ ಅನ್ನವನ್ನು ಸೇವಿಸುತ್ತಾರೆ. ಪ್ರತಿ ದಿವಸ ಅನ್ನ ತಿನ್ನುವ ಜನರಿಗೆ ಟೈಪ್ 2 ಡಯಾಬಿಟಿಸ್ನ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸುತ್ತದೆ.

ಹೆಚ್ಚಿನ ಅಕ್ಕಿ ಪ್ರಮಾಣವು ನಮ್ಮ ದೇಹಕ್ಕೆ ತಲುಪಿದಾಗ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳು ಸೂಚಿಸಿವೆ, ಬಿಳಿ ಅಕ್ಕಿ ಶೀಘ್ರವಾಗಿ ಸಕ್ಕರೆಯಾಗಿ ಪರಿವರ್ತನೆಯಾಗಿರುವುದರಿಂದ ಆನ್ನ ತಿನ್ನುವವರು ಮಧುಮೇಹದ ಸಮಸ್ಯೆಗೆ ಗುರಿಯಾಗುತ್ತಾರೆ.

ಅನ್ನ ಸೇವನೆಯ ದುಷ್ಪರಿಣಾಮಗಳುಪ್ರತಿ ದಿನ ಅನ್ನ (ವೈಟ್ ರೈಸ್) ತಿಂದ್ರೆ ಅಪಾಯ ಗ್ಯಾರಂಟಿ

ಬಿಳಿ ಅನ್ನವನ್ನು ತಿನ್ನುವುದು ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು, ವಿಶೇಷವಾಗಿ ನೀವು ಡಯಾಬಿಟಿಕ್ ಆಗಿದ್ದರೆ.

ಪ್ರತಿ ದಿನ ಅನ್ನ (ವೈಟ್ ರೈಸ್) ತಿಂದ್ರೆ ಅಪಾಯ ಗ್ಯಾರಂಟಿ - Kannada News

ಅಕ್ಕಿಯಲ್ಲಿ ಯಾವುದೇ ಕ್ಯಾಲ್ಸಿಯಂ ಇಲ್ಲವಾದುದರಿಂದ, ಪ್ರತಿ ದಿನ ಕೇವಲ ಅನ್ನ ಮಾತ್ರ ಸೇವಿಸುವುದರಿಂದ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುತ್ತದೆ. ಈ ಕ್ಯಾಲ್ಸಿಯಂ ಕೊರತೆಯು ಸ್ನಾಯು, ಹೃದಯ ಮತ್ತು ನರಮಂಡಲದ ಕಾರ್ಯದಲ್ಲಿ ತೊಂದರೆಯನ್ನು ಉಂಟುಮಾಡುತ್ತದೆ.

ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಬೇಕೇ ಬೇಕು, ಸ್ನಾಯುಗಳ ಕಾರ್ಯಕ್ಕೆ ಇದು ಪ್ರಮುಖ ಪಾತ್ರವಹಿಸುತ್ತದೆ, ಇದಿಲ್ಲವಾದರೆ ರಕ್ತವು ಹೆಪ್ಪುಗಟ್ಟುವುದಿಲ್ಲ. ಪ್ರತಿ ದಿನ ನಾವು ಅನ್ನ ಸೇವನೆಯಿಂದ ಕ್ಯಾಲ್ಸಿಯಂ ಅನ್ನು ಕಳೆದುಕೊಳ್ಳುತ್ತೇವೆ.

ಅನ್ನ ಸೇವನೆಯಿಂದ ಇಷ್ಟೆಲ್ಲಾ ಸಮಸ್ಯೆಗಳು ಹಾಗೂ ನಮ್ಮ ದೇಹದ ಮೇಲೆ ಅನೇಕ ಪರಿಣಾಮಗಳನ್ನು ಎದುರಿಸಬೇಕಾದಾಗ, ನಾವೇಕೆ ಸೇವಿಸುವ ಅನ್ನದ ಪ್ರಮಾಣವನ್ನು ಮಿತ ಗೊಳಿಸಬಾರದು ?

ನಿಮ್ಮ ಬಲಿಷ್ಠ ಆರೋಗ್ಯಕ್ಕೆ ಇಂದಿನಿಂದಲೇ ವೈಟ್ ರೈಸ್ ಸೇವನೆಯನ್ನು ಮಿತಗೊಳಿಸಿ.////

Web Title : side effects of white rice
(Kannada News Live Alerts @ kannadanews.today)

Follow us On

FaceBook Google News

Read More News Today