ಆಯಸ್ಸು ಯಾರಿಗೆ ಬೇಡ ? ನಿಮ್ಮ ಆಯಸ್ಸನ್ನು ಹೆಚ್ಚಿಸುವ ಅದ್ಬುತ ಆಹಾರಗಳಿವು..

wonderful foods that can increase your life span

ಆಯಸ್ಸು ಯಾರಿಗೆ ಬೇಡ ? ನಿಮ್ಮ ಆಯಸ್ಸನ್ನು ಹೆಚ್ಚಿಸುವ ಅದ್ಬುತ ಆಹಾರಗಳಿವು – wonderful foods that can increase your life span

ಆಯಸ್ಸು ಯಾರಿಗೆ ಬೇಡ ? ನಿಮ್ಮ ಆಯಸ್ಸನ್ನು ಹೆಚ್ಚಿಸುವ ಅದ್ಬುತ ಆಹಾರಗಳಿವು.!

ದೇವಾನುದೇವತೆಗಳೇ ತಮ್ಮ ಆಯಸ್ಸನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಚಿರಂಜೀವಿಯಾಗಿ ಬದುಕಲು ಸಮುದ್ರ ಮಂಥನ ಮಾಡಿ ಅಮೃತವನ್ನು ಸ್ವೀಕರಿಸಿ ತಮ್ಮ ಆಯುಷ್ಯವನ್ನು ಹೆಚ್ಚಿಸಿಕೊಂಡರು ಚಿರಂಜೀವಿ ಗಳಾದರು.ಆದರೆ ಸಾಮಾನ್ಯ ಮನುಷ್ಯರು ದೇವರಂತೆ ಅಮೃತವನ್ನು ಸ್ವೀಕರಿಸಿ ಚಿರಂಜೀವಿಗಳ ಆಗಲು ಸಾಧ್ಯವಿಲ್ಲ ಆದರೆ ಆಯಸ್ಸನ್ನು ಹೆಚ್ಚಿಸಿಕೊಳ್ಳುವ ಮಾರ್ಗೋಪಾಯಗಳು ಇಲ್ಲಿವೆ…

ನಮ್ಮ ಪೂರ್ವಿಕರು ಧೀರ್ಗಯುಷಿಗಳು, ವೃದ್ದಾಪ್ಯ ಬಂದರು ಸಾಕಷ್ಟು ದೃಢವಾಗಿ, ಆರೋಗ್ಯವಾಗಿ ಇರುತ್ತಿದ್ದರು. ಅದಕ್ಕೆ ಅವರು ನಿತ್ಯ ಔಷದ ಗುಣಗಳನ್ನು ಹೊಂದಿರುವ ಆಹಾರ ತೆಗೆದುಕೊಳ್ಳುತ್ತಿದ್ದ ಕಾರಣ ಅವರು ಹೆಚ್ಚಿನ ಕಾಲ ಜೀವಿಸುತಿದ್ದರೆಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಆಯಸ್ಸನ್ನು ಹೆಚ್ಚಿಸುವ ಆಹಾರಗಳನ್ನು ಇಲ್ಲಿ ನೀಡಿದ್ದೇವೆ. ಇವನ್ನು ಆಹಾರದಲ್ಲಿ ಹಿತಮಿತವಾಗಿ ಬಳಸಿದರೆ ಉತ್ತಮ. ಅವು ಏನು ಎಂದು ತಿಳಿದುಕೊಂಡು ಇತರರಿಗೂ ತಿಳಿಸಿ.

* ಬೆಟ್ಟದ ನೆಲ್ಲಿಕಾಯಿ

ಇದರಲ್ಲಿ ವಿಟಮಿನ್ ಸಿ ಇದೆ. ದೇಹವನ್ನು ಸೋಂಕುಗಳಿಂದ, ರೋಗಗಳಿಗೆ ತುತ್ತಾಗದಂತೆ ಕಾಪಾಡುವಲ್ಲಿ ಇದು ಪ್ರಮುಖ ಪಾತ್ರ ಪೋಷಿಸುತ್ತದೆ. ಇದರಲ್ಲಿ ಸಮೃದ್ಧವಾಗಿ ಇರುವ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚು ಕಾಲ ಜೀವಿಸಲು ಉಪಯೋಗಕ್ಕೆ ಬರುತ್ತವೆ.

* ಜೇನುತುಪ್ಪ

ಜೀನಿನಲ್ಲಿ ಸಹಜಸಿದ್ದವಾದ ಖನಿಜ ಲವಣಗಳು ಹೇರಳವಾಗಿ ಇರುತ್ತವೆ. ಅವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನಿತ್ಯ ಒಂದು ಚಮಚ ಜೇನು ತೆಗೆದುಕೊಂಡರೆ ದೇಹ ದೃಢವಾಗಿ ಶಕ್ತಿಯುತವಾಗಿ ಇರುತ್ತದೆ.

* ಲವಂಗ

ಲವಂಗ ಆಂಟಿ ಪಂಗಲ್, ಆಂಟಿ ಬ್ಯಾಕ್ಟೀರಿಯಲ್, ಆಂಟಿ ಸೆಪ್ಟಿಕ್, ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಸಾಕಷ್ಟು ಔಷಧಿ ಗುಣಗಳಿವೆ.

* ಓಂ ಕಾಳು

ಓಂ ಕಾಳಿನಲ್ಲಿ ಇರುವ ನಿಯಾಸಿನ್ ಥಾಮೋಲ್ ಹೃದ್ರೋಗಗಳಿಂದ ರಕ್ಷಿಸುತ್ತದೆ. ಇದು ಸಹಜ ಆಂಟಿ ಬಯೋಟಿಕ್ ಆಗಿ ಕೆಲಸ ಮಾಡುತ್ತದೆ.

* ಶುಂಠಿ

ಶುಂಠಿ ಒಂದು ಶಕ್ತಿ ವರ್ದಕವಾಗಿದೆ. ಇದು ಕಫ ಮತ್ತು ವಾತ ದೋಷಗಳನ್ನು ನಾಶ ಮಾಡುತ್ತದೆ, ಹಾಗೂ ಶ್ವಾಶಕೋಶ, ಅರುಚಿ, ರಕ್ತಹೀನತೆ, ಅತಿಸಾರ, ಜ್ವರ ಕೆಮ್ಮು ಮುಂತಾದ ರೋಗಗಳಲ್ಲಿ ಉಪಯೋಗಿಸಲ್ಪಡುವ ಇದು ಒಂದು ಶ್ರೇಷ್ಠ ದೀಪನ ಹಾಗೂ ಪಚನ ಔಷಧವಾಗಿದೆ.////

Web Title : wonderful foods that can increase your life span
Update with Latest Kannada News Today at kannadanews.today including Health Tips.