ಇಂದು ಸೂರ್ಯಗ್ರಹಣ, ಯಾವ ಸಮಯದಲ್ಲಿ ಸೂರ್ಯಗ್ರಹಣ, ಏನು ಮಾಡಬೇಕು? ಮಾಡಬಾರದು?
ಹೊಚ್ಚ ಹೊಸ ಡಿಜಿಟಲ್ ಡೆಸ್ಕ್:
ದೀಪಾವಳಿ ಆಚರಣೆ ಹಿನ್ನೆಲೆಯಲ್ಲಿ ಈ ಬಾರಿ ಖಂಡಗ್ರಾಸ ಸೂರ್ಯಗ್ರಹಣ ಆಗಮಿಸಿದೆ.
ನರಕ ಚತುದರ್ಶಿ ಮಾಡಿದ ಭಕ್ತರು ಇಂದು ಲಕ್ಷ್ಮೀ ಪೂಜೆ ಮಾಡುವುದಿಲ್ಲ. ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಯುವುದಿಲ್ಲ.
ಆಶ್ವಯುಜ ಅಮಾವಾಸ್ಯೆಯಂದು ಸೂರ್ಯಗ್ರಹಣ ಆಗಮಿಸಿದ್ದು, ಭಾರತ ಸೇರಿದಂತೆ ಏಷ್ಯಾ ಖಂಡದ ಮಧ್ಯ ಮತ್ತು ಪಶ್ಚಿಮ ವಲಯ, ಇಡೀ ಯುರೋಪಿಯನ್ ಖಂಡ ಮತ್ತು ಆಫ್ರಿಕಾ ಖಂಡದ ಪೂರ್ವ ಪ್ರದೇಶಗಳಲ್ಲಿ ಗ್ರಹಣ ಗೋಚರಿಸಲಿದೆ. ಗ್ರಹಣವು ಭಾರತದಲ್ಲಿ ಸಂಜೆ 4:29 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸೂರ್ಯಾಸ್ತದೊಂದಿಗೆ ಕೊನೆಗೊಳ್ಳುತ್ತದೆ. ಬೆಂಗಳೂರಿನಲ್ಲಿ ಸಂಜೆ 5:12 ರಿಂದ 5:56 ರವರೆಗೆ ಒಟ್ಟು 44 ನಿಮಿಷಗಳ ಕಾಲ ಗ್ರಹಣ ಗೋಚರಿಸಲಿದೆ.
ಗ್ರಹಣ ಕಾಲದಲ್ಲಿ ಸ್ನಾನ, ದೇವತಾರಾಧನೆ, ನಿತ್ಯಕರ್ಮಗಳು, ಜಪತಪ ಮತ್ತು ಶ್ರಾದ್ಧವನ್ನು ಮಾಡಬಹುದು. ಆಹಾರ ತಿನ್ನುವಂತಿಲ್ಲ. ಮಧ್ಯಾಹ್ನ 12 ಗಂಟೆಗೆ ಊಟ ಮಾಡಬೇಕು, ಮರುದಿನ ಸ್ನಾನ, ಪೂಜೆ, ಆಹಾರ ತಯಾರಿಸಿ ತಿನ್ನಬೇಕು.
Follow us On
Google News |