ದೆಹಲಿಗೆ ಹೋಗುತ್ತಿದ್ದ ಅಕಾಸ ವಿಮಾನಕ್ಕೆ ಹಕ್ಕಿ ಡಿಕ್ಕಿ

ಇತ್ತೀಚೆಗಷ್ಟೇ ಆರಂಭವಾದ ಬಜೆಟ್ ಏರ್ ಲೈನ್ ಅಕಾಸಕ್ಕೆ ಹಿನ್ನಡೆಯಾಗಿದೆ.

ಇತ್ತೀಚೆಗಷ್ಟೇ ಆರಂಭವಾದ ಬಜೆಟ್ ಏರ್ ಲೈನ್ ಅಕಾಸಕ್ಕೆ ಹಿನ್ನಡೆಯಾಗಿದೆ. ಅಕಾಸದ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಗುರುವಾರ ಬೆಳಗ್ಗೆ ಅಹಮದಾಬಾದ್‌ನಿಂದ ದೆಹಲಿಗೆ ತೆರಳುತ್ತಿದ್ದಾಗ ಹಕ್ಕಿಗೆ ಅಪ್ಪಳಿಸಿತು. 1900 ಅಡಿ ಎತ್ತರದಲ್ಲಿ ಹಕ್ಕಿಯೊಂದು ವಿಮಾನಕ್ಕೆ ಅಪ್ಪಳಿಸಿದಾಗ ಫ್ಲೈಟ್ ರಾಡೋಮ್ ಹಾನಿಗೊಳಗಾಗಿರುವುದು ಕಂಡುಬಂದಿದೆ.

ದೆಹಲಿಯಲ್ಲಿ ಇಳಿದ ನಂತರ ಅಧಿಕಾರಿಗಳು ರೇಡೋಮ್ ಹಾನಿಯನ್ನು ಪತ್ತೆ ಮಾಡಿದರು. ಅಕಾಸ ಏರ್‌ಲೈನ್‌ನ ಮೊದಲ ವಾಣಿಜ್ಯ ವಿಮಾನ ಸೇವೆಗಳು ಈ ವರ್ಷದ ಆಗಸ್ಟ್‌ನಲ್ಲಿ ಪ್ರಾರಂಭವಾಯಿತು.

Delhi Bound Akasa Flight Hit By Bird