ತಮಿಳುನಾಡಿನಲ್ಲಿ ಕೊರೊನಾ ದಿಂದ 10 ಸಾವಿರ ಜನರ ಸಾವು

( Kannada News ) : ಚೆನ್ನೈ (ತಮಿಳುನಾಡು): ದೇಶದಲ್ಲಿ ಕೊರೊನಾ ಸೋಂಕಿನಿಂದ ಹತ್ತು ಸಾವಿರ ಜನರು ಸಾವನ್ನಪ್ಪಿದ್ದ ರಾಜ್ಯವಾಗಿ ತಮಿಳುನಾಡು ಹೊರಹೊಮ್ಮಿದೆ. ತಮಿಳುನಾಡು ರಾಜ್ಯದಲ್ಲಿ ಒಟ್ಟು 6,40,943 ಜನರಿಗೆ ಕರೋನಾ ಸೋಂಕು ತಗುಲಿದ್ದು, ಅವರಲ್ಲಿ 5,86,454 ಮಂದಿ ಚೇತರಿಸಿಕೊಂಡಿದ್ದಾರೆ.

ಇದನ್ನೂ ಓದಿ : ಕೇಂದ್ರ ಸಚಿವ ರಾಮ್‌ ವಿಲಾಸ್ ಪಾಸ್ವಾನ್‌ ನಿಧನ

ಗುರುವಾರ ತಮಿಳುನಾಡಿನಲ್ಲಿ ಕರೋನಾ ಸೋಂಕಿನಿಂದ 68 ಜನರು ಸಾವನ್ನಪ್ಪಿದ್ದಾರೆ. ಇದು ಒಟ್ಟು ಸಾವಿನ ಸಂಖ್ಯೆಯನ್ನು 10,052 ಕ್ಕೆ ಏರಿಸಿದೆ. 90% ಕರೋನಾ ರೋಗಿಗಳು ಚೇತರಿಸಿಕೊಂಡಿದ್ದಾರೆ. ಚನ್ನೈ ನಗರದಲ್ಲೇ ಒಟ್ಟಾರೆ 1,78,108 ಜನರಿಗೆ ಕರೋನಾ ಸೋಂಕು ತಗುಲಿದೆ.

ಇದನ್ನೂ ಓದಿ : ಸುಪಾರಿ ಕೊಟ್ಟು ಕೊಲೆ ಮಾಡಿಸುತ್ತೇನೆ, ಸಚಿವರಿಗೆ ಬೆದರಿಕೆ

ಹತ್ತು ಸಾವಿರ ಸಾವಿನ ಮೂಲಕ ಮಹಾರಾಷ್ಟ್ರದ ಜೊತೆಗೆ ತಮಿಳುನಾಡು ಸಹ ಅತಿ ಹೆಚ್ಚು ಸಾವು ದಾಖಲಿಸಿದೆ, ಚೆನ್ನೈ ನಗರದಲ್ಲಿ ನೆನ್ನೆ ಒಂದೇ ದಿನ 1295 ಜನರಿಗೆ ಕರೋನಾ ಸೋಂಕು ತಗುಲಿದೆ. ತಮಿಳುನಾಡಿನ 26 ಜಿಲ್ಲೆಗಳಲ್ಲಿ 66 ಸರ್ಕಾರಿ ಮತ್ತು 110 ಖಾಸಗಿ ಲ್ಯಾಬ್‌ಗಳಲ್ಲಿ ಆರ್‌ಟಿಪಿಸಿಆರ್ ಪರೀಕ್ಷಿಸಲಾಗುತ್ತಿದೆ.

Scroll Down To More News Today