ದೆಹಲಿ ಆಸ್ಪತ್ರೆಯಲ್ಲಿ 12 ‘ಓಮಿಕ್ರಾನ್’ ಶಂಕಿತರು..!

ಎಂಟು ಓಮಿಕ್ರಾನ್ ಶಂಕಿತರು ಗುರುವಾರ LNGP ಗೆ ಸೇರಿದ್ದಾರೆ ಮತ್ತು ಇನ್ನೂ ನಾಲ್ವರು ಇಂದು ಸೇರಿದ್ದಾರೆ. ಇಂದು ಆಸ್ಪತ್ರೆಗೆ ದಾಖಲಾದ ನಾಲ್ವರಲ್ಲಿ ಇಬ್ಬರು ಯುಕೆ, ಒಬ್ಬರು ಫ್ರಾನ್ಸ್ ಮತ್ತು ಇನ್ನೊಬ್ಬರು ನೆದರ್ಲ್ಯಾಂಡ್‌ನವರು ಎಂದು ಮೂಲಗಳು ತಿಳಿಸಿವೆ.

ಹೊಸದಿಲ್ಲಿ: ಇದುವರೆಗೂ ವಿದೇಶದಲ್ಲಿ ವಿಜೃಂಭಿಸುತ್ತಿದ್ದ ಕೋವಿಡ್ ಓಮಿಕ್ರಾನ್ ವೆರಿಯಂಟ್‌ನ ಹೊಸ ವೆರಿಯಂಟ್ ಇದೀಗ ಭಾರತದಲ್ಲೂ ಸದ್ದು ಮಾಡುತ್ತಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಎರಡು ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ.

ವಿಶ್ವಾಸಾರ್ಹ ಮೂಲಗಳ ಪ್ರಕಾರ, ಎಂಟು ಓಮಿಕ್ರಾನ್ ಶಂಕಿತರು ಗುರುವಾರ LNGP ಗೆ ಸೇರಿದ್ದಾರೆ ಮತ್ತು ಇನ್ನೂ ನಾಲ್ವರು ಇಂದು ಸೇರಿದ್ದಾರೆ. ಇಂದು ಆಸ್ಪತ್ರೆಗೆ ದಾಖಲಾದ ನಾಲ್ವರಲ್ಲಿ ಇಬ್ಬರು ಯುಕೆ, ಒಬ್ಬರು ಫ್ರಾನ್ಸ್ ಮತ್ತು ಇನ್ನೊಬ್ಬರು ನೆದರ್ಲ್ಯಾಂಡ್‌ನವರು ಎಂದು ಮೂಲಗಳು ತಿಳಿಸಿವೆ. ಓಮಿಕ್ರಾನ್ ದೃಢೀಕರಣಕ್ಕಾಗಿ ಸಂತ್ರಸ್ತರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

Stay updated with us for all News in Kannada at Facebook | Twitter
Scroll Down To More News Today