ನಮಗೆ ಏಕೆ ಲಸಿಕೆ ಹಾಕಿಲ್ಲ? – ದೆಹಲಿ ನ್ಯಾಯಾಲಯದಲ್ಲಿ 12 ವರ್ಷದ ಬಾಲಕಿ ಅರ್ಜಿ
12 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವ ಯೋಜನೆ ಕುರಿತು ವರದಿ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಆದೇಶ ನೀಡುವಂತೆ ಕೋರಿ 12 ವರ್ಷದ ಬಾಲಕಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾಳೆ.
ನವದೆಹಲಿ: 12 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವ ಯೋಜನೆ ಕುರಿತು ವರದಿ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಆದೇಶ ನೀಡುವಂತೆ ಕೋರಿ 12 ವರ್ಷದ ಬಾಲಕಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾಳೆ. ಮಾರ್ಚ್ 22 ರಂದು ಅರ್ಜಿ ವಿಚಾರಣೆಗೆ ಬರಲಿದೆ.
ಖಾಸಗಿ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ 12ರ ಬಾಲಕಿ ದಿಯಾ ಗುಪ್ತಾ, ”ಪ್ರಸ್ತುತ ದೇಶದಲ್ಲಿ 15ರಿಂದ 17 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಆದರೆ ನಮಗೆ ಲಸಿಕೆ ಹಾಕುವ ಬಗ್ಗೆ ಸರಕಾರ ಏನೂ ಹೇಳಿಲ್ಲ. ಫೈಜರ್ ಲಸಿಕೆಯನ್ನು ಮಕ್ಕಳಿಗೆ ನೀಡಲಾಗುತ್ತಿದೆ. ನಮ್ಮ ವಯಸ್ಸಿನ ಮಕ್ಕಳಿಗೆ ವಿದೇಶದಲ್ಲಿ ಲಸಿಕೆ ನೀಡಲಾಗುತ್ತಿದೆ, ಆದ್ದರಿಂದ ನಾನು ಈ ಅರ್ಜಿಯನ್ನು ಸಲ್ಲಿಸಿದ್ದೇನೆ ಎಂದಳು.
ಲಸಿಕೆ ಹಾಕಿಸಿಕೊಂಡರೆ ಶಾಲೆಗೆ ಹೋಗುವ ಧೈರ್ಯವಿದೆಯೇ ಎಂದು ಕೇಳಿದಾಗ, “ಖಂಡಿತವಾಗಿಯೂ ನಾನು ಹೋಗುತ್ತೇನೆ. ಸಂಪೂರ್ಣವಾಗಿ ಲಸಿಕೆ ಹಾಕಿದ ಜನರು ಕರೋನದ ಗಂಭೀರ ಪರಿಣಾಮಗಳಿಂದ ರಕ್ಷಿಸಲ್ಪಡುತ್ತಾರೆ ಎಂಬುದಕ್ಕೆ ಪ್ರಪಂಚದಾದ್ಯಂತ ಸಾಕಷ್ಟು ವೈಜ್ಞಾನಿಕ ಪುರಾವೆಗಳಿವೆ…. ಎಂದಳಾಕೆ.
ಏಪ್ರಿಲ್ ಮತ್ತು ಮೇ 2021 ರ ನಡುವೆ ಕರೋನಾದಿಂದ ಪೀಡಿತ ಮಕ್ಕಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ದಿಯಾ ಗುಪ್ತಾ ಅವರ ಅರ್ಜಿಯಲ್ಲಿ ಉಲ್ಲೇಖಿಸಿದ್ದಾಳೆ.
Follow Us on : Google News | Facebook | Twitter | YouTube