15 ವರ್ಷದ ಬಾಲಕನಿಂದ, 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ

15-year-old Boy Raped 3-year-old girl in Haryana

15 ವರ್ಷದ ಬಾಲಕನಿಂದ, 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ – 15-year-old Boy Raped 3-year-old girl in Haryana

ಕನ್ನಡ ನ್ಯೂಸ್ ಟುಡೇ, ಹರಿಯಾಣ : 

ಮನೆಯ ಹೊರಗೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿಯೊಬ್ಬಳ ಮೇಲೆ ಬಾಲಕನೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧ ನಡೆದ ಎರಡು ಗಂಟೆಗಳಲ್ಲಿ ಆರೋಪಿ 15 ವರ್ಷದ ಬಾಲಕನನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಗೂ ಪರಾರಿಯಾಗಿದ್ದ ಅವನನ್ನು ಹಿಡಿಯಲು ಸ್ಥಳೀಯರು ಸಹಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ, ಬಾಲಕಿಯೊಬ್ಬಳು ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ, ಅದೇ ಬಡಾವಣೆಯ ನಿವಾಸಿ ಹುಡುಗ ಬಾಲಕಿಯನ್ನು ಖಾಲಿ ಕೋಣೆಗೆ ಕರೆದೊಯ್ದು ತಿಂಡಿಯ ಆಮಿಷವೊಡ್ಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ . ಬಾಲಕಿಯ ಕೂಗು ಕೇಳಿ, ಖಾಲಿ ಬಂಗಲೆಯ ಕಾವಲುಗಾರ ಕೂಗು ಕೇಳಿದ ಸ್ಥಳಕ್ಕೆ ಧಾವಿಸಿದ್ದಾನೆ, ಕಾವಲುಗಾರನನ್ನು ನೋಡಿದ ಹುಡುಗ ಸ್ಥಳದಿಂದ ಪರಾರಿಯಾಗಿದ್ದಾನೆ.

ಬಾಲಕನನ್ನು ಗುರುತಿಸಿದ ಕಾವಲುಗಾರ , ಬಾಲಕಿಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದು, ಪೊಲೀಸರಿಗೆ ದೂರುನೀಡಿದ್ದಾರೆ. ಸಧ್ಯ, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬದಿಂದ ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ, ಬಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ////

Web Title : 15-year-old Boy Raped 3-year-old girl in Haryana