Welcome To Kannada News Today

ಬಾಯ್ಸ್ ಲಾಕರ್ ರೂಮ್ ಪ್ರಕರಣ : 15 ವರ್ಷದ ಅಪ್ರಾಪ್ತನ ಬಂಧನ, ಚುರುಕುಗೊಂಡ ತನಿಖೆ

ಬಾಯ್ಸ್‌ಲಾಕರ್‌ರೂಮ್ ಎಂಬ ಸಮಾಜ ಘಾತುಕ ಚಾಟ್ ಗ್ರೂಪ್ ವೈರಲ್, ಹೆಣ್ಣಿನ ಅವಹೇಳನವೇ ಅದರ ಗುರಿ, ಸದಸ್ಯರೆಲ್ಲರೂ ಅಪ್ರಾಪ್ತರು

🌐 Kannada News :

ಬಾಯ್ಸ್ ಲಾಕರ್ ರೂಮ್ ಚಾಟ್ ಗ್ರೂಪ್ ಪ್ರಕರಣದ ಸಂಬಂಧ ದೆಹಲಿ ಪೊಲೀಸರು 15 ವರ್ಷದ ಅಪ್ರಾಪ್ತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದೆ ಎಂದು ವರದಿಯಾಗಿದೆ, ಬಾಯ್ಸ್ ಲಾಕರ್ ರೂಮ್ ಎಂಬ ಚಾಟ್ ಗ್ರೂಪ್ ಕ್ರಿಯೇಟ್ ಮಾಡಿದ್ದ ಅಪ್ರಾಪ್ತ ಯುವಕರು, ಆ ಗ್ರೂಪ್ ನಲ್ಲಿ ಮಹಿಳೆಯರ ನಗ್ನ ಚಿತ್ರಗಳನ್ನು ಹಂಚಿಕೊಳ್ಳುವುದು ಮತ್ತು ಅವರ ಖಾಸಗಿ ಭಾಗಗಳ ಬಗ್ಗೆ ಚರ್ಚಿಸುವುದು ಸೇರಿದಂತೆ ಸಾಮೂಹಿಕ ಅತ್ಯಾಚಾರದ ಬಗ್ಗೆ ಚರ್ಚೆ ನಡೆಸುತ್ತಿದ್ದರು.

ದೆಹಲಿ ಪೊಲೀಸ್ ಸೈಬರ್ ಸೆಲ್ ಎಫ್ಐಆರ್ ದಾಖಲಿಸಿದೆ,  ದಕ್ಷಿಣ ದೆಹಲಿಯ ಪ್ರಮುಖ ಶಾಲೆಗಳ ಹದಿಹರೆಯದ ಹುಡುಗರು ಬಾಲಕಿಯರ ದೇಹದ ಭಾಗಗಳ ಬಗ್ಗೆ ಚರ್ಚಿಸಿ, ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು 15 ವರ್ಷದ ಬಾಲಕನನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ವಿಪರ್ಯಾಸವೆಂದರೆ ‘ಬೋಯಿಸ್ ಲಾಕರ್ ರೂಮ್’ ನಲ್ಲಿರುವವರು ಬಹುತೇಕ ಅಪ್ರಾಪ್ತರು, ಈ ಗ್ರೂಪ್ ಹಲವಾರು ಸ್ಕ್ರೀನ್‌ಶಾಟ್‌ಗಳನ್ನು ಕಳೆದ 24 ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಾರ, ಪೋಷಕರು ಸಹ ಈ ಬಗ್ಗೆ ದಕ್ಷಿಣ ದೆಹಲಿಯ ಸಾಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ‘ಬಾಯ್ಸ್ ಲಾಕರ್ ರೂಮ್’ ಚಾಟ್ ಆಪ್ ನಲ್ಲಿ ಸಾಮೂಹಿಕ ಅತ್ಯಾಚಾರದ ಬಗ್ಗೆ ಚರ್ಚೆ, ನಗ್ನ ಚಿತ್ರಗಳು, ಇದು ದೇಶವೆ ಬೆಚ್ಚಿ ಬೀಳುವ ಸುದ್ದಿ

#ಬಾಯ್ಸ್‌ಲಾಕರ್‌ರೂಮ್ ನ ನೀಚ ಕಾರ್ಯ ವೈರಲ್ ಆಗಿದ್ದು, ಅನೇಕ ಮಹಿಳೆಯರನ್ನು, ಅಪ್ರಾಪ್ತ ಯುವತಿಯರನ್ನ, ಯುವಕರನ್ನು ಸೆಳೆದು ತನ್ನ ಗ್ರೂಪ್ ಗಳಿಗೆ ಕರೆದೊಯ್ಯುವುದು ಅದರ ಪ್ರವೃತ್ತಿ, ಇದು ಕೇವಲ ಪೋಷಕರಲ್ಲದೇ  ಸಮುದಾಯವನ್ನು ಸಹ ಆಘಾತಗೊಳಿಸಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಶಾಲಾ ಅಧಿಕಾರಿಗಳು ಕೂಡ ಈ ಬಗ್ಗೆ ವಿವರವಾದ ತನಿಖೆಗೆ ಅನುಮತಿ ನೀಡಿದ್ದಾರೆ. ಸೆಕ್ಷನ್ 465 , 471, 509 ಮತ್ತು ಸೆಕ್ಷನ್ 67 (ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಿಷಯಗಳನ್ನು ಪ್ರಕಟಿಸುವುದು ಅಥವಾ ರವಾನಿಸುವುದು) ಪ್ರಕರಣಗಳನ್ನು ನೋಂದಾಯಿಸಲಾಗಿದೆ.

ಸಾಮೂಹಿಕ ಅತ್ಯಾಚಾರವನ್ನು ಪ್ರೇರೇಪಿಸುವ ಮತ್ತು ಚರ್ಚಿಸುವ ದೆಹಲಿಯ ಯುವ ಹುಡುಗರ ಇನ್‌ಸ್ಟಾಗ್ರಾಮ್ ಗ್ರೂಪ್ ಚಾಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳಲು ಇತ್ತೀಚೆಗೆ ” ಬಾಯ್ಸ್ ಲಾಕರ್ ರೂಮ್ ” ಎಂಬ ಗ್ರೂಪ್ ಕ್ರಿಯೇಟ್ ಮಾಡಿಕೊಳ್ಳಲಾಗಿತ್ತು.

ಹದಿಹರೆಯದ ಹುಡುಗರು ಹುಡುಗಿಯರ ಚಿತ್ರಗಳನ್ನು ಹಂಚಿಕೊಳ್ಳುವುದು, ಅವರ ಬಗ್ಗೆ ಅಸಹ್ಯಕರ ಚರ್ಚೆ ನಡೆಸುವುದು ಅವರ ಚಿತ್ರಗಳನ್ನು ಮಾರ್ಫಿಂಗ್ ಮಾಡುವುದು, ನಿಂದನೀಯ ಭಾಷೆ ಬಳಸುವುದು ಮತ್ತು ‘ಸಾಮೂಹಿಕ ಅತ್ಯಾಚಾರ’ ಬಗ್ಗೆ ಮಾತನಾಡುವುದು, ಕಂಡು ಬಂದಿತ್ತು. ದೆಹಲಿ ಮಹಿಳಾ ಆಯೋಗ ಮತ್ತು ಇತರ ಗುಂಪುಗಳು ಪೊಲೀಸರ ಹಸ್ತಕ್ಷೇಪವನ್ನು ಕೋರಿತ್ತು.

15 year old held in connection with Delhi Boys Locker Room chats

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile