ಜಮ್ಮು ಮತ್ತು ಕಾಶ್ಮೀರ: 17 ಚಾರಣಿಗರನ್ನು ರಕ್ಷಿಸಿದ ಭಾರತೀಯ ಸೇನೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಲುಕಿದ್ದ 17 ಚಾರಣಿಗರನ್ನು ಭಾರತೀಯ ಸೇನೆ ರಕ್ಷಿಸಿದೆ.
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಲುಕಿದ್ದ 17 ಚಾರಣಿಗರನ್ನು ಭಾರತೀಯ ಸೇನೆ ರಕ್ಷಿಸಿದೆ. ಪ್ರತಿಕೂಲ ಹವಾಮಾನ ಮತ್ತು ಭಾರೀ ಹಿಮಪಾತದಿಂದಾಗಿ ಅವರು ವಿಷನ್ಸರ್ ಸರೋವರದ ಬಳಿಯ ಸೆವೆಲ್-ಲೇಕ್ ಟ್ರೆಕ್ನಲ್ಲಿ ಸಿಲುಕಿಕೊಂಡರು. ಈ ಕುರಿತು ಭಾರತೀಯ ಸೇನೆ ಹೇಳಿಕೆ ನೀಡಿದೆ.
ಸೋನಾಮಾರ್ಗ್ನಲ್ಲಿರುವ ಸೇನೆಯ ‘ಡಿಸ್ಪ್ಲೇಸ್ಡ್ ಎಕ್ವಿಪ್ಮೆಂಟ್ ಟೀಮ್’ ಸಂತ್ರಸ್ತ ಪ್ರವಾಸಿಗರನ್ನು ರಕ್ಷಿಸಿದೆ. ಈ ಪ್ರದೇಶದಲ್ಲಿ ಗಸ್ತು ತಿರುಗಿ ಸುಮಾರು 12 ಗಂಟೆಗಳ ಕಾಲ ಶ್ರಮಿಸಿ ಎಲ್ಲ ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲರನ್ನು ರಕ್ಷಿಸಿ ಸಮೀಪದ ಸೇನಾ ಶಿಬಿರಕ್ಕೆ ಕರೆದೊಯ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅವರೆಲ್ಲರೂ ಪ್ರಸಿದ್ಧ ಸೆವೆನ್-ಲೇಕ್ ಟ್ರೆಕ್ನಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಅವರು ವಿವರಿಸಿದರು. ಸಂತ್ರಸ್ತರು ತಮ್ಮನ್ನು ರಕ್ಷಿಸಿದ ಭಾರತೀಯ ಸೇನೆಗೆ ಧನ್ಯವಾದ ಅರ್ಪಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Follow Us on : Google News | Facebook | Twitter | YouTube