ಡ್ರಾಪ್ ಕೊಡೋ ನೆಪದಲ್ಲಿ ಸಾಮೂಹಿಕ ಅತ್ಯಾಚಾರ

17 year old girl gang raped in ranga reddy district telangana

ಡ್ರಾಪ್ ಕೊಡೋ ನೆಪದಲ್ಲಿ ಸಾಮೂಹಿಕ ಅತ್ಯಾಚಾರ – 17 year old girl gang raped in ranga reddy district telangana

ಡ್ರಾಪ್ ಕೊಡೋ ನೆಪದಲ್ಲಿ ಸಾಮೂಹಿಕ ಅತ್ಯಾಚಾರ

ಕನ್ನಡ ನ್ಯೂಸ್ ಟುಡೇ – ತೆಲಂಗಾಣ : 17 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರದ ಆರೋಪದ ಮೇಲೆ ಇಬ್ಬರು ಯುವಕರ ಮೇಲೆ ಪ್ರಕರಣ ದಾಖಲಾಗಿದೆ. ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಆರೋಪಿಗಳ ಪತ್ಯೇಗಾಗಿ ಪೊಲೀಸ್ ತಂಡಗಳನ್ನು ರಚಿಸಲಾಗಿದೆ..

ಅತ್ಯಾಚಾರ ಸಂತ್ರಸ್ತೆ, ಮಹೇಶ್ವರಂ ಮಂಡಲ್ ನ ದನ್ನಾರಾಮ್ ಗ್ರಾಮದಲ್ಲಿದ್ದ ತನ್ನ ಅಜ್ಜಿಯನ್ನು ನೋಡಲು ಹೊರಟು, ಮಹೇಶ್ವರಂ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದಾಗ, ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಯುವಕರು, ಯುವತಿಯನ್ನು ಮಾತನಾಡಿಸಲು ಮುಂದಾಗಿದ್ದಾರೆ.

ಮೊದಲು ಇವರ ಮಾತಿಗೆ ಪ್ರತಿಕ್ರಿಯಸದ ಯುವತಿಗೆ ಆ ಯುವಕರು, ” ಇಷ್ಟೊತ್ತಲ್ಲಿ ಇಲ್ಲಿ ಯಾವುದೇ ಬಸ್ ಬರೋದಿಲ್ಲ, ಎಲ್ಲಿಗೆ ಹೋಗಬೇಕು’  ಅದೇ ದಾರಿಯಲ್ಲಿ ಹೋಗ್ತಾ ಇದ್ದೇವೆ, ನಿನ್ನನ್ನು ನಿನ್ನ ಅಜ್ಜಿಯ ಮನೆ ತನಕ ಡ್ರಾಪ್ ಮಾಡ್ತೀವಿ ” ಅಂತ ಪುಸಲಾಯಿಸಿ ಯುವತಿಯನ್ನು ಬೈಕ್ ಹತ್ತಿಸಿ ಕೊಂಡಿದ್ದಾರೆ.

ಬೈಕ್ ಗೆ ಹತ್ತಿಸಿಕೊಂಡ ಯುವಕರು ಮಹೇಶ್ವರಂ ನಿಂದ ಸ್ವಲ್ಪ ದೂರ ಹೋದ ನಂತರ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ, ಆಕೆಯ ಮೇಲೆ ಅತ್ಯಾಚಾರ ವೆಸಗಿ, ಆಕೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376 – ಡಿ ಮತ್ತು ಪೋಕ್ಸೋ ಕಾಯ್ದೆಯ 4 ಮತ್ತು 5 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.////

Web Title : 17 year old girl gang raped in ranga reddy district telangana