ಕಾರಿನ ಡೋರ್ ಲಾಕ್ ಮಾಡಿಕೊಂಡ ಮಕ್ಕಳು, ಉಸಿರಾಡದೆ ಧಾರುಣ ಸಾವು

2 Kids Died of Suffocation after Car Locked

ಕಾರಿನ ಡೋರ್ ಲಾಕ್ ಮಾಡಿಕೊಂಡ ಮಕ್ಕಳು, ಉಸಿರಾಡದೆ ಧಾರುಣ ಸಾವು

ಕಣ್ಣ ಮುಂದೆ ಆಟವಾಡುತ್ತಿದ್ದ ಮಕ್ಕಳು ಇದ್ದಕ್ಕಿದ್ದಂತೆ ಕಾಣೆಯಾಗಿ, ಶವವಾಗಿ ಪತ್ತೆಯಾದರೆ ಎಂಥಹ ತಂದೆತಾಯಿಗೆ ಆ ದುಃಖ ಭರಿಸುವ ಶಕ್ತಿ ಇರುತ್ತದೆ ಹೇಳಿ. ಇಂತಹ ಘಟನೆಗಳನ್ನೇ ನೋಡಿ, ನಿಜಕ್ಕೂ ದೇವರಿದ್ದಾನಾ ? ಎಂಬ ಸಂದೇಹ ಬಂದು ಬಿಡತ್ತದೆ. ಅವನೆಂತಹ ಕ್ರೂರಿ ಎನಿಸಿ ಬಿಡುತ್ತದೆ.

ನಿನ್ನೆ ಮಧ್ಯಾಹ್ನ ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳು ಕಾಣೆಯಾಗಿ ನಂತರ ಶವವಾಗಿ ಪತ್ತೆಯಾಗಿರುವ ದುರಂತ ಕಥೆ ಇದು. ನೆರೆ ರಾಜ್ಯ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಮುಜಾವುದ್ದೀನ್ ನಗರದಲ್ಲಿ ಈ ಒಂದು ಘೋರ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ ಸರಿ ಸುಮಾರು ಮೂರೂ ಘಂಟೆಗೆ ರಿಯಾಜ್ ( 10 ವರ್ಷ ) ಮತ್ತು ಮೊಹಮ್ಮದ್ ( 5 ವರ್ಷ ) ಎಂದಿನಂತೆ ಮನೆಯ ಮುಂಬಾಗದಲ್ಲಿ ಆಟವಾಡುತ್ತಿದ್ದರು.

ಮನೆಯ ಮುಂದೆಯೇ ಇದ್ದಾರಲ್ಲ ಎಂದು ಅವರ ಪೋಷಕರೂ ಸಹ ಅವರ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳಲಿಲ್ಲ. ಆಟವಾಡುತ್ತಾ ಇಬ್ಬರು ಮಕ್ಕಳು ಪಕ್ಕದ ಮನೆಯ ಬಳಿಗೆ ಹೋಗಿದ್ದಾರೆ, ಅಲ್ಲಿಯೂ ಸ್ವಲ್ಪ ತಾಸು ಆಟವಾಡಿದ ಮಕ್ಕಳ ಕಣ್ಣಿಗೆ ಅಲ್ಲೇ ಬದಿಯಲ್ಲಿ ನಿಂತಿದ್ದ ಕಾರು ಕಣ್ಣಿಗೆ ಬಿದ್ದಿದೆ, ಅದರಲ್ಲೂ ಕಾರಿನ ಡೋರ್ ಎಳೆಯುತ್ತಿದ್ದಂತೆ ತೆರೆದು ಕೊಂಡಿದೆ.2 Kids Died of Suffocation after Car Locked - Kannada News Today

ಡೋರ್ ತೆರೆಯುತ್ತಿದ್ದಂತೆ ಮಕ್ಕಳು ಸಂತೋಷದಿಂದ ಕಾರ್ ಒಳಕ್ಕೆ ಹೋಗಿ ಆಟವಾಡಲು ಶುರು ಮಾಡಿದ್ದಾರೆ, ಆದರೆ ಅವರ ಪಾಲಿನ ಜವರಾಯ ಅದೇ ಕಾರಿನಲ್ಲಿದ್ದಾನೆ ಎಂದು ಅವರಿಗೆ ಹೇಗೆ ತಾನೆ ತಿಳಿಯಲು ಸಾಧ್ಯ. ಆಟವಾಡುತ್ತಿದ್ದ ಮಕ್ಕಳು ಡೋರ್ ಲಾಕ್ ಮಾಡಿದ್ದಾರೆ ಆದರೆ ಅದನ್ನು ತೆರೆಯಲು ಗೊತ್ತಾಗದೆ ಅಲ್ಲಿಯೇ ನಿದ್ರೆಗೆ ಜಾರಿದ್ದಾರೆ.

ಇತ್ತ ಮಕ್ಕಳು ಕಾಣದೆ ಕಂಗಾಲಾದ ಪೋಷಕರು ಹುಡುಕಾಟ ನಡೆಸಿದ್ದಾರೆ. ಎಲ್ಲಿ ಹುಡುಕಿದರೂ ಮಕ್ಕಳ ಸುಳಿವೇ ಇಲ್ಲ. ಇತ್ತ ಕಾರಿನಲ್ಲಿದ್ದ ಮಕ್ಕಳಿಗೆ ಉಸಿರಾಟದ ಸಮಸ್ಯೆ ಉಂಟಾಗಿ ನಿದ್ದೆಯಿಂದ ಚಿರನಿದ್ದೆಗೆ ಜಾರಿದ್ದಾರೆ. ಮರುದಿನ ಬೆಳಿಗ್ಗೆ ತಂದೆತಾಯಿಗೆ ತಮ್ಮ ಪ್ರೀತಿಯ ಮಕ್ಕಳು ಸಿಕ್ಕಿದ್ದು ಶವವಾಗಿ.

ಈ ಘಟನೆ ನಿಜಾಮಾಬಾದ್ ನಲ್ಲಿಯೇ ತೀವ್ರ ದುಃಖಕ್ಕೆ ಕಾರಣವಾಗಿದೆ. ಪೋಷಕರೇ ನಿಮ್ಮ ಮಕ್ಕಳ ಚಲವಲನದ ಮೇಲೆ ನಿಗಾಯಿರಿಸಿ. ಹಾಗಂತ ಅವರನ್ನ ಆಡಲು ಬಿಡಬೇಡಿ ಅಂದೇನೂ ಇಲ್ಲ. ಆದರೆ ಅವರು ಆಡುವಾಗ ನೀವು ಜೊತೆಯಲ್ಲಿ ಇರಲು ಹಾಗೂ ಎಲ್ಲಿ ಆಟವಾಡಬೇಕು, ಏನು ಮಾಡಬೇಕು , ಏನು ಮಾಡಬಾರದು ಎಂಬುದರ ಬಗ್ಗೆ ತಿಳಿಸಿ ಹೇಳಿ. ಮುಖ್ಯವಾಗಿ ಅಪಾಯದ ವಸ್ತುಗಳ ಜೊತೆ ಚೆಲ್ಲಾಟ ಬೇಡವೆಂಬ ಸಂಗತಿ ಅವರಿಗೆ ಅರಿವು ಮೂಡಿಸಿ.////

Web Title : 2 Kids Died of Suffocation after Car Locked
Read News at Leading Kannada online news website Kannada News Today

Stay updated with us for all News in Kannada at Facebook | Twitter
Scroll Down To More News Today