ಸ್ಮಾರ್ಟ್ ಫೋನ್ ಚಟ.. ಗತ ಮರೆತ ಯುವಕ

ಯುವಕನೋರ್ವ ಸ್ಮಾರ್ಟ್ ಫೋನ್ ಚಟಕ್ಕೆ ಬಿದ್ದು ಗತವನ್ನು ಸಂಪೂರ್ಣವಾಗಿ ಮರೆತಿದ್ದಾನೆ. ತೀವ್ರ ಮಾನಸಿಕ ಸಮಸ್ಯೆಯಿಂದ ತಂದೆ-ತಾಯಿಯನ್ನು ಗುರುತಿಸಲೂ ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾನೆ.

ಜೈಪುರ: ಯುವಕನೋರ್ವ ಸ್ಮಾರ್ಟ್ ಫೋನ್ ಚಟಕ್ಕೆ ಬಿದ್ದು ಗತವನ್ನು ಸಂಪೂರ್ಣವಾಗಿ ಮರೆತಿದ್ದಾನೆ. ತೀವ್ರ ಮಾನಸಿಕ ಸಮಸ್ಯೆಯಿಂದ ತಂದೆ-ತಾಯಿಯನ್ನು ಗುರುತಿಸಲೂ ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾನೆ.

ರಾಜಸ್ಥಾನದ ಚುರು ಜಿಲ್ಲೆಯ ಸಾಹ್ವಾ ಟೌನ್‌ನ 20 ವರ್ಷದ ಅಕ್ರಮ್, ಕಳೆದ ಕೆಲವು ದಿನಗಳಿಂದ ಸ್ಮಾರ್ಟ್‌ಫೋನ್‌ನ ಚಟಕ್ಕೆ ಸಿಲುಕಿದ ನಂತರ ತನ್ನ ಗತನವನ್ನೇ ಮರೆತು ಹೋಗಿದ್ದಾನೆ.

ಅಲ್ಲದೆ ಕಳೆದ ಐದು ದಿನಗಳಿಂದ ನಿದ್ದೆ ಸಹ ಮಾಡುತ್ತಿಲ್ಲ. ಪರಿಸ್ಥಿತಿ ಹದಗೆಟ್ಟ ನಂತರ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಸ್ತುತ ಮನೋವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಆತನ ಚಿಕ್ಕಪ್ಪ ಅರ್ಬಾಜ್, ಮಾತನಾಡಿ “ಅಕ್ರಂ ಹಳ್ಳಿಯಲ್ಲಿ ಎಲೆಕ್ಟ್ರಿಕ್ ಕೆಲಸ ಮಾಡುತ್ತಾನೆ. ಆದರೆ ಕಳೆದೊಂದು ತಿಂಗಳಿಂದ ಮೊಬೈಲ್ ಫೋನ್ ನಲ್ಲೇ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದ. ಫೋನ್ ನೋಡುತ್ತ ಕೆಲಸವನ್ನೂ ನಿಲ್ಲಿಸಿದ.

ಕುಟುಂಬಸ್ಥರು ಪದೇ ಪದೇ ಎಷ್ಟೇ ಹೇಳಿದರು ಮೊಬೈಲ್ ನೋಡುವುದನ್ನು ನಿಲ್ಲಿಸಲಿಲ್ಲ… ಕೆಲ ದಿನಗಳಿಂದ ರಾತ್ರಿಯಿಡೀ ಮೊಬೈಲ್ ನಲ್ಲಿ ಚಾಟಿಂಗ್, ಗೇಮ್ ಆಡುತ್ತಿದ್ದ. ತಾನು ತಿನ್ನುವುದು ಮತ್ತು ಕುಡಿಯುವುದನ್ನು ಸಹ ನಿಲ್ಲಿಸಿದ ಎಂದು ತಾಯಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಕುರಿತು ಮನೋವೈದ್ಯ ಡಾ.ಜಿತೇಂದ್ರ ಕುಮಾರ್ ಮಾತನಾಡಿ.. ಯುವಕನಿಗೆ ಸಿಟಿ ಸ್ಕ್ಯಾನ್ ಮಾಡಿ ಚಿಕಿತ್ಸೆ ನೀಡುತ್ತಿದ್ದೇವೆ… ಎಂದು ತಿಳಿಸಿದ್ದಾರೆ.

Stay updated with us for all News in Kannada at Facebook | Twitter
Scroll Down To More News Today