2025 ರ ವೇಳೆಗೆ 25 ವಿಮಾನ ನಿಲ್ದಾಣಗಳು ಖಾಸಗೀಕರಣ – ಕೇಂದ್ರ

ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್ ಅಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ 25 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಯೋಜಿಸಿದೆ ಎಂದು ನಾಗರಿಕ ವಿಮಾನಯಾನ ಸಹಾಯಕ ಸಚಿವ ವಿಕೆ ಸಿಂಗ್ ಲೋಕಸಭೆಗೆ ಗುರುವಾರ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

2022 ರಿಂದ 2025 ರವರೆಗಿನ ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್ (NMP) ಅಡಿಯಲ್ಲಿ ಭುವನೇಶ್ವರ, ವಾರಣಾಸಿ, ಅಮೃತಸರ, ತಿರುಚಿ, ಇಂದೋರ್, ರಾಯ್‌ಪುರ, ಕ್ಯಾಲಿಕಟ್, ಕೊಯಮತ್ತೂರು, ನಾಗ್‌ಪುರ, ಪಾಟ್ನಾ, ಮಧುರೈ, ಸೂರತ್, ರಾಂಚಿ, ಜೋಧ್‌ಪುರ, ಚೆನ್ನೈ, ವಿಜಯವಾಡ, ವಡೋದರಾ, ಇಂಫಾಲ್, ಅಗರ್ತಲಾ, ಉದಯಪುರ, ಡೆಹ್ರಾಡೂನ್ ಮತ್ತು ರಾಜಮಂಡ್ರಿ ವಿಮಾನ ನಿಲ್ದಾಣಗಳನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮಾರಾಟ ಮಾಡಲಿದೆ.

ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ ಪ್ರಕಾರ, ವಾರ್ಷಿಕ 0.4 ಮಿಲಿಯನ್‌ಗಿಂತಲೂ ಹೆಚ್ಚು ಪ್ರಯಾಣಿಕರ ದಟ್ಟಣೆಯನ್ನು ಹೊಂದಿರುವ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಕ್ಕೆ ಆಯ್ಕೆ ಮಾಡಲಾಗಿದೆ ಎಂದು ವಿಕೆ ಸಿಂಗ್ ವಿವರಿಸಿದರು.

Stay updated with us for all News in Kannada at Facebook | Twitter
Scroll Down To More News Today