Welcome To Kannada News Today

28 ದಿನದ ಮಗುವಿಗೆ ಕೊರೋನಾ ಪಾಸಿಟಿವ್, ನಿಲ್ಲುತ್ತಿಲ್ಲ COVID-19 ಹಟ್ಟಹಾಸ

28-day-old baby from Mahabubnagar tests positive for COVID-19

🌐 Kannada News :

ಹೈದರಾಬಾದ್:  ಮೆಹಬೂಬ್ ನಗರದ 28 ದಿನಗಳ ಮಗುವಿನಲ್ಲಿ ಮಹಾಮಾರಿ ಕರೋನವೈರಸ್ ಮಹಾಮಾರಿ ಆವರಿಸಿದೆ, ಇದು ತೆಲಂಗಾಣ ರಾಜ್ಯದ ಅತ್ಯಂತ ಕಿರಿಯ COVID-19 ಪ್ರಕರಣ.

ಆರೋಗ್ಯ ಅಧಿಕಾರಿಗಳ ಪ್ರಕಾರ, ಮಾರ್ಚ್ 13-15 ರಿಂದ ನಿಜಾಮುದ್ದೀನ್ ಪ್ರದೇಶದ ಬಳಿ ದೆಹಲಿಯಲ್ಲಿ ನಡೆದ ಜಮಾಅತ್ ಸಭೆಯಲ್ಲಿ ಶಿಶುವಿನ ಅಜ್ಜ ಭಾಗವಹಿಸಿದ್ದರು. ಅಜ್ಜ ಮಾರ್ಚ್ 19 ರಂದು ಮೆಹಬೂಬ್ ನಗರ ಕ್ಕೆ ಮರಳಿದ್ದರು ಎಂದು ಮೂಲಗಳು ತಿಳಿಸಿವೆ. ಈ ವ್ಯಕ್ತಿ ಆಂಧ್ರಪ್ರದೇಶದ ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್ ಮೂಲಕ ಹಜರತ್ ನಿಜಾಮುದ್ದೀನ್‌ನಿಂದ ಕಾಚಿಗೂಡಕ್ಕೆ ಪ್ರಯಾಣಿಸಿದ್ದರು. ಕಾಚಿಗೂಡಾದಿಂದ ಅವರು ಮೆಹಬೂಬ್ ನಗರಕ್ಕೆ ತೆರಳಿದ್ದರು.

ಸಭೆಗೆ ಪಾಲ್ಗೊಂಡು ಮರಳಿದ ಅಜ್ಜ ಜೊತೆಗೆ ಸೋಂಕನ್ನು ಹೊತ್ತು ಬಂದು, ಈಗ ಏನೂ ಅರಿಯದ ಕಂದಮ್ಮ ಮಹಾಮಾರಿ ಕೊರಾನಾಗೆ ತುತ್ತಾಗಿದೆ. ವಿಪರ್ಯಾಸ ಎಂದರೆ ಇನ್ನೂ ತಾಯಿ ಮಡಿಲಲ್ಲಿ ಆಟವಾಡುತ್ತಾ, ಹಾಲು ಕುಡಿಯ ಬೇಕಿದ್ದ ಮಗು ಬಂದಿಯಾಗಿದೆ.

ಮಗುವನ್ನು ನೋಡಲು ಹಾಗೂ ಸ್ಪರ್ಶಿಸಲು ಹೆತ್ತವರಿಗೂ ನಿರ್ಬಂಧಿಸಲಾಗಿದೆ, ವಿಧಿ ಎಷ್ಟು ಕ್ರೂರ ಅಲ್ಲವೇ, ಆಸ್ಪತ್ರೆಯಲ್ಲಿ ಪಾಪ ಆ ಮಗು, ” ಏಕೆ ನನ್ನಮ್ಮ ನನ್ನನ್ನು ಅಪ್ಪಿಕೊಳ್ಳುತ್ತಿಲ್ಲ, ನಂಗೆ ಹಸಿವಾಗಿದೆ ಅಮ್ಮ ಯಾಕೆ ನನಗೆ ಹಾಲುಣಿಸುತ್ತಿಲ್ಲ, ಅಮ್ಮನ ಬೆಚ್ಚನೆಯ ಮಡಿಲಲ್ಲಿ ಮಲಗುವ ನನ್ನನ್ನು ಇವರೇಕೆ ಬೇರ್ಪಡಿಸಿದ್ದಾರೆ” ಎಂದು ಮರುಗದೆ ಇರದು…..

Web Title : 28-day-old baby from Mahabubnagar tests positive for COVID-19

 

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.