ಅಟಲ್ ಸುರಂಗ ತೆರೆದ 72 ಗಂಟೆಗಳಲ್ಲಿ 3 ಅಪಘಾತಗಳು

Atal tunnel : ಅಟಲ್ ಸುರಂಗವನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಿರ್ಲಕ್ಷ್ಯದ ಚಾಲನೆಯ ಹಲವಾರು ನಿದರ್ಶನಗಳು ವರದಿಯಾಗಿವೆ.

ಮನಾಲಿ ಮತ್ತು ಲೇಹ್ ನಡುವಿನ ಅಟಲ್ ಸುರಂಗವನ್ನು ಈ ತಿಂಗಳ 3 ರಂದು ಸಾರ್ವಜನಿಕರಿಗೆ ತೆರೆಯಲಾಯಿತು. ಇದನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಅಟಲ್ ಸುರಂಗ ಉದ್ಘಾಟಿಸಿದ 72 ಗಂಟೆಗಳಲ್ಲಿ 3 ಅಪಘಾತಗಳು ಸಂಭವಿಸಿವೆ.

( Kannada News ) ನವದೆಹಲಿ : ಸಾವಿರಾರು ಜನರಿಗೆ ಅನುಕೂಲವಾಗುವ ಉದ್ದೇಶದಿಂದ ನಿರ್ಮಿಸಲಾದ ಅಟಲ್ ಸುರಂಗವನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ವಾಹನಗಳನ್ನು ಯದ್ವಾತದ್ವಾ ಓಡಿಸುವುದು ಮತ್ತು ಸೆಲ್ಫಿಗಳಿಗಾಗಿ ಸ್ಪರ್ಧಿಸುವುದು. ಇದು ಪ್ರಾರಂಭವಾದ 72 ಗಂಟೆಗಳಲ್ಲಿ 3 ಅಪಘಾತಗಳಿಗೆ ಕಾರಣವಾಯಿತು.

ಸಾರ್ವಜನಿಕರಿಗೆ ಭದ್ರತೆ ಒದಗಿಸಲು ಟ್ರಾಫಿಕ್ ಪೊಲೀಸರನ್ನು ನಿಯೋಜಿಸುವಂತೆ ಗಡಿ ರಸ್ತೆಗಳ ಸಂಸ್ಥೆ ಸರ್ಕಾರವನ್ನು ಕೋರಿದೆ. ಮನಾಲಿ ಮತ್ತು ಲೇಹ್ ನಡುವಿನ ಅಟಲ್ ಸುರಂಗವನ್ನು ಈ ತಿಂಗಳ 3 ರಂದು ಸಾರ್ವಜನಿಕರಿಗೆ ತೆರೆಯಲಾಯಿತು. ಇದನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಎಲ್ಲಾ ಕಾಲಗಳಲ್ಲಿ ಪ್ರಯಾಣಿಸಲು ಇದು ಸೂಕ್ತವಾಗಿದೆ.

ಅಷ್ಟೇ ಅಲ್ಲದೆ ಈ ಮಾರ್ಗದಲ್ಲಿ ಪ್ರಯಾಣಿಸುವುದರಿಂದ 46 ಕಿ.ಮೀ ದೂರವನ್ನು ಕಡಿಮೆ ಮಾಡುತ್ತದೆ, ಇದರ ಪರಿಣಾಮವಾಗಿ ಸುಮಾರು ನಾಲ್ಕರಿಂದ ಐದು ಗಂಟೆಗಳಷ್ಟು ಕಡಿಮೆಯಾಗುತ್ತದೆ. ಇದಲ್ಲದೆ ಈ ಸುರಂಗ ಮಾರ್ಗದಲ್ಲಿ ದೂರವಾಣಿಯಂತಹ ಸೌಲಭ್ಯಗಳು ಸಹ ಲಭ್ಯವಿದೆ. ಈ ಸುಸಜ್ಜಿತ ಮಾರ್ಗದಲ್ಲಿ ವಾಹನ ಚಾಲಕರು ಬೇಕಾಬಿಟ್ಟಿ ಚಾಲನೆ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ : ಭಾರತವು ವಿಶ್ವದ ಕೇಂದ್ರವಾಗಬೇಕು : ಪ್ರಧಾನಿ ನರೇಂದ್ರ ಮೋದಿ ಕರೆ

ವಾಹನಗಳನ್ನು ಯದ್ವಾತದ್ವಾ ಓಡಿಸುವ ಮೂಲಕ ಭಯವನ್ನು ಸೃಷ್ಟಿಸುತ್ತಿದ್ದಾರೆ. ಪ್ರಾರಂಭವಾದ ಮೂರು ದಿನಗಳಲ್ಲಿ ಮೂರು ಅಪಘಾತಗಳು ಸಂಭವಿಸಿವೆ. ವಾಹನ ಚಾಲಕರು ವೇಗವಾಗಿ ವಾಹನ ಚಲಾಯಿಸುತ್ತಿದ್ದಾರೆ ಮತ್ತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಇಂತಹ ವರ್ತನೆಯಿಂದ ಅಪಘಾತಗಳು ಸಂಭವಿಸುತ್ತಿವೆ.

ಸುರಂಗವು ಹಿಮಾಚಲ ಪ್ರದೇಶದ ಹೊಸ ಪ್ರವಾಸಿ ತಾಣವಾಗಿದೆ. ಪಂಜಾಬ್, ಹರಿಯಾಣ ಮತ್ತು ಚಂಡೀಗಡದಿಂದ ಪ್ರವಾಸಿಗರು ಸೇರುತ್ತಿದ್ದಾರೆ. ಈಗಾಗಲೇ ಮೂರು ಅಪಘಾತಗಳು ವರದಿಯಾಗಿವೆ ಎಂದು ಅಟಲ್ ಸುರಂಗದಲ್ಲಿ ಕರ್ತವ್ಯದಲ್ಲಿದ್ದ ಗಡಿ ರಸ್ತೆಗಳ ಸಂಘಟನೆಯ ಮುಖ್ಯ ಎಂಜಿನಿಯರ್ ಬ್ರಿಗೇಡಿಯರ್ ಕೆ.ಪಿ.ಪುರುಷೋಥಮನ್ ಹೇಳಿದ್ದಾರೆ.

ವಾಹನ ಚಾಲಕರು ಸಂಚಾರ ನಿಯಮಗಳನ್ನು ನಿರ್ಲಕ್ಷಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಕೆಲವರು ಚಾಲನೆ ಮಾಡುವಾಗ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಅಪಘಾತಗಳನ್ನು ತಡೆಗಟ್ಟಲು ಟ್ರಾಫಿಕ್ ಪೊಲೀಸರನ್ನು ನೇಮಿಸುವಂತೆ ಸರ್ಕಾರವನ್ನು ಕೇಳಿದ್ದೇನೆ ಎಂದು ಅವರು ಹೇಳಿದರು.

Scroll Down To More News Today