ಛತ್ತೀಸ್‌ಗಡ ಗಡಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮಾವೋವಾದಿಗಳು ಸಾವು

ಛತ್ತೀಸ್‌ಗಢ ಗಡಿಯಲ್ಲಿ ಸೋಮವಾರ ಬೆಳಗ್ಗೆ ಭೀಕರ ಘರ್ಷಣೆ ನಡೆದಿದೆ. ಪೊಲೀಸರು ಮತ್ತು ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ.

ಛತ್ತೀಸ್‌ಗಢ ಗಡಿಯಲ್ಲಿ ಸೋಮವಾರ ಬೆಳಗ್ಗೆ ಭೀಕರ ಘರ್ಷಣೆ ನಡೆದಿದೆ. ಪೊಲೀಸರು ಮತ್ತು ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ.  ಮೊದಲು ಮಾವೋವಾದಿಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಇದು ಎರಡು ಬಣಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಮೂವರು ಮಾವೋವಾದಿಗಳನ್ನು ಕೊಲ್ಲಲಾಗಿದೆ. ಸ್ಥಳದಿಂದ ಮಾವೋವಾದಿಗಳ ಶವದೊಂದಿಗೆ ಎಸ್‌ಎಲ್‌ಆರ್ ಮತ್ತು ಎಕೆ -47 ರೈಫಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೆಲದಿನಗಳಿಂದ ಮಾವೋವಾದಿಗಳು ನಾಗರಿಕರ ನೆಮ್ಮದಿ ಕಸಿದಿದ್ದಾರೆ, ಅಮಾಯಾಕರನ್ನೇ ಗುರಿಯಾಗಿಸಿಕೊಂಡು ಕೊಂದು ವಿಕೃತಿ ಮೆರೆಯುತ್ತಿದ್ದಾರೆ, ನಂತರ ಕಾಡಿಗೆ ಹೋಗಿ ಅವಿತು ಕೊಳ್ಳುತ್ತಾರೆ, ಭಾರತೀಯ ಸೈನಿಕರು ಕಾಡನ್ನು ಸುತ್ತುವರೆದಿದ್ದು, ಮಾವೋವಾದಿಗಳ ಸದೆ ಬಡೆಯಲು ನಿರಂತರ ಶ್ರಮಿಸುತ್ತಿವೆ.

Stay updated with us for all News in Kannada at Facebook | Twitter
Scroll Down To More News Today