ಎಚ್.ಐ.ವಿ ಪೀಡಿತ ಯುವತಿ ಮೇಲೆ ನಾಲ್ವರಿಂದ ಅತ್ಯಾಚಾರ

4 Men Raped an HIV victim Girl at Maharashtra

ಎಚ್.ಐ.ವಿ ಪೀಡಿತ ಯುವತಿ ಮೇಲೆ ನಾಲ್ವರಿಂದ ಅತ್ಯಾಚಾರ – 4 Men Raped an HIV victim Girl at Maharashtra

ಎಚ್.ಐ.ವಿ ಪೀಡಿತ ಯುವತಿ ಮೇಲೆ ನಾಲ್ವರಿಂದ ಹತ್ಯಾಚಾರ

ఔರಂಗಾಬಾದ್ : ಮಹಾರಾಷ್ಟ್ರದಲ್ಲಿ ನಡೆದ ಧಾರುಣ ಘಟನೆಯಲ್ಲಿ, ಈ ಮೊದಲೇ ಎಚ್.ಐ.ವಿ ಬಾಧೆಯಿಂದ ನೊಂದಿದ್ದ ಯುವತಿಯ ಮೇಲೆ ನಾಲ್ವರು ಅತ್ಯಾಚಾರವೆಸಗಿ ವಿಕೃತಿ ಮೆರೆದಿದ್ದಾರೆ. ಪೊಲೀಸರ ಪ್ರಕಾರ, ಆಕೆ ತನ್ನ ಸಹೋದರನೊಂದಿಗೆ ನಗರದಲ್ಲಿ ವಾಸಿಸುತ್ತಿದ್ದಳು. ಸ್ಥಳೀಯ ನಿವಾಸಿಯೊಬ್ಬರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿದೆ.

ನಡೆದ ಘಟನೆಯನ್ನು ತಿಳಿದು ಬೇಸರಗೊಂಡ ಆಕೆಯ ಸಹೋದರ ಆಕೆಯನ್ನು ತಕ್ಷಣ ತನ್ನ ತಂದೆಯ ಬಳಿಗೆ ಕಳುಹಿಸಿದ್ದಾನೆ. ನಡೆದ ಘಟನೆಯನ್ನು ಆಕೆ ತನ್ನ ತಂದೆಯ ಬಳಿ ಹೇಳಿದ್ದಾಳೆ, ಆಕೆಯ ತಂದೆ ಸ್ಥಳೀಯ ಬೇಗಂಪುರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿದ ಪೊಲೀಸರು ಆಕೆಯನ್ನು ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಬುಧವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

ಪರೀಕ್ಷೆಯ ನಂತರ, ಆಕೆಯ ಮೇಲೆ ಅತ್ಯಾಚಾರ ನಡೆದಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಆಕೆ ಗಂಭೀರ ಗಾಯಗೊಂಡಿದ್ದು, ಮಾನಸಿಕ ಹಿಂಸೆಯಿಂದ ಸಧ್ಯ ಪ್ರಕರಣದ ಆರೋಪಿಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.

ಸಧ್ಯ ಪೊಲೀಸರು ಆಕೆ ಕೆಲ ದಿನಗಳು ವಿಶ್ರಾಂತಿ ಪಡೆಯಲಿ, ನಂತರ ಆರೋಪಿಗಳ ಸುಳಿವು ಪಡೆಯಲು ಕಾದಿದ್ದಾರೆ. ಅತ್ಯಾಚಾರ ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.////

Web Title : ಎಚ್.ಐ.ವಿ ಪೀಡಿತ ಯುವತಿ ಮೇಲೆ ನಾಲ್ವರಿಂದ ಅತ್ಯಾಚಾರ – 4 Men Raped an HIV victim Girl at Maharashtra