40 ಕೋಟಿ ಮೌಲ್ಯದ ಡ್ರಗ್ಸ್ ನಾಶ
ಅಬಕಾರಿ ಪೊಲೀಸರು ಸುಮಾರು 40 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಅಸ್ಸಾಂನ ಕರಿಂಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಗುವಾಹಟಿ: ಅಬಕಾರಿ ಪೊಲೀಸರು ಸುಮಾರು 40 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಅಸ್ಸಾಂನ ಕರಿಂಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅಬಕಾರಿ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಜುನಿಟಿಲ್ಲಾದ ಪೊಲೀಸ್ ಮೀಸಲು ಮೈದಾನದಲ್ಲಿ ಶುಕ್ರವಾರ ‘ವಿಲೇವಾರಿ ಕಾರ್ಯಕ್ರಮ’ ನಡೆಯಿತು. ದಾಳಿ ವೇಳೆ 3,162 ಕೆಜಿ ಹೆರಾಯಿನ್, 1,11,256 ಕೊಡೆನ್ ಆಧಾರಿತ ಕೆಮ್ಮಿನ ಸಿರಪ್ ಬಾಟಲಿಗಳು, 2,172 ಕೆಜಿ ಗಾಂಜಾ ಮತ್ತು 4,51,505 ಯಾಬಾ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅದನ್ನು ಬಳಿಕ ರೋಡ್ ರೋಲರ್ ನಿಂದ ನಾಶಪಡಿಸಿದ್ದಾರೆ. ನಾಶಪಡಿಸಿದ ಡ್ರಗ್ಸ್ ಮೌಲ್ಯ 40 ಕೋಟಿ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow Us on : Google News | Facebook | Twitter | YouTube