ದೆಹಲಿಯಲ್ಲಿ ಬೆಂಕಿ ಅವಘಡ, 6 ಸಾವು, ಹಲವರಿಗೆ ಗಾಯ

6 people were killed and 11 injured in Fire Accident at Delhi’s Zakir Nagar

ದೆಹಲಿಯಲ್ಲಿ ಬೆಂಕಿ ಅವಘಡ, 6 ಸಾವು, ಹಲವರಿಗೆ ಗಾಯ – 6 people were killed and 11 injured in Fire Accident at Delhi’s Zakir Nagar

ದೆಹಲಿಯಲ್ಲಿ ಬೆಂಕಿ ಅವಘಡ, 6 ಸಾವು, ಹಲವರಿಗೆ ಗಾಯ

ಕನ್ನಡ ನ್ಯೂಸ್ ಟುಡೇ – ನವದೆಹಲಿ : ಬೆಳ್ಳಂಬೆಳ್ಳಗೆ ಕಾಣಿಸಿಕೊಂಡ ಅಗ್ನಿ ಅವಘಡ ಆರು ಜನರನ್ನು ಬಲಿ ಪಡೆದಿದೆ, ಹೌದು, ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಇಂದು (ಮಂಗಳವಾರ) ಮುಂಜಾನೆ ಜಾಕಿರ್‌ನಗರದ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡಕ್ಕೆ ಆರು ಜನರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಕಿಯ ಬಗ್ಗೆ ಮಾಹಿತಿ ಪಡೆದ ನಂತರ, ಎಂಟು ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದರು. ಆದರೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಲು ಪ್ರದೇಶದ ಕಿರಿದಾದ ಹಾದಿಗಳು ಕಟ್ಟಡದ ಪ್ರದೇಶವನ್ನು ತಲುಪುವುದು ದೊಡ್ಡ ಸವಾಲಲಾಗಿತ್ತು.

ಘಟನೆಯ ನಂತರ ಸುಮಾರು 20 ಜನರನ್ನು ಕಟ್ಟಡದಿಂದ ರಕ್ಷಿಸಿ ಸ್ಥಳಾಂತರಿಸಲಾಗಿದೆ. ಭಾರೀ ಬೆಂಕಿಯೊಂದಿಗೆ ಏಳು ಕಾರುಗಳು ಮತ್ತು ಎಂಟು ಬೈಕುಗಳು ಸಹ ಸುಟ್ಟು ಭಸ್ಮವಾಗಿವೆ, ವಾಹನಗಳನ್ನು ಕಟ್ಟಡದ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಲಾಗಿತ್ತು, ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ, ಎಂದು ವರದಿಯಾಗಿದೆ. ಸಧ್ಯ ಗಾಯಾಳುಗಳಲ್ಲಿ “5 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ (ಐಸಿಯು), ಕೆಲವರು ವಾರ್ಡ್‌ನಲ್ಲಿದ್ದಾರೆ ಮತ್ತು ಒಂದು ಮಗು ಐಸಿಯುನಲ್ಲಿದೆ” ಎಂದು ಹೋಲಿ ಫ್ಯಾಮಿಲಿ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಮಾಲಾ ತಿಳಿಸಿದ್ದಾರೆ////.

Web Title : 6 people were killed and 11 injured in Fire Accident at Delhi’s Zakir Nagar