ಡಿಜೆ ಸೌಂಡ್‌ನಿಂದ ಹೃದಯಾಘಾತ.. 63 ಕೋಳಿ ಬಲಿ !

ಆ ಮನೆಯಲ್ಲಿ ಮದುವೆ ಸಂಭ್ರಮ.. ಒಂದೆಡೆ ಡಿಜೆ ಸೌಂಡ್... ಸಮಾರಂಭ ನಡೆಯುತ್ತಿದ್ದ ಮನೆಯ ಪಕ್ಕದಲ್ಲೇ ಕೋಳಿ ಫಾರಂ ಸಹ ಇತ್ತು. ಪಕ್ಕದಲ್ಲೇ ಇದ್ದ ಕೋಳಿ ಫಾರ್ಮ್ ಕೋಳಿಗಳು ಡಿಜೆ ಶಬ್ದ ಸಹಿಸಲಾಗದೆ ಹೃದಯಾಘಾತಕ್ಕೆ ತುತ್ತಾಗಿವೆ. ಒಟ್ಟಾರೆ 63 ಕೋಳಿಗಳು ಸಾವನ್ನಪ್ಪಿವೆ.

🌐 Kannada News :

ಭುವನೇಶ್ವರ್ : ಆ ಮನೆಯಲ್ಲಿ ಮದುವೆ ಸಂಭ್ರಮ.. ಒಂದೆಡೆ ಡಿಜೆ ಸೌಂಡ್… ಸಮಾರಂಭ ನಡೆಯುತ್ತಿದ್ದ ಮನೆಯ ಪಕ್ಕದಲ್ಲೇ ಕೋಳಿ ಫಾರಂ ಸಹ ಇತ್ತು. ಪಕ್ಕದಲ್ಲೇ ಇದ್ದ ಕೋಳಿ ಫಾರ್ಮ್ ಕೋಳಿಗಳು ಡಿಜೆ ಶಬ್ದ ಸಹಿಸಲಾಗದೆ ಹೃದಯಾಘಾತಕ್ಕೆ ತುತ್ತಾಗಿವೆ. ಒಟ್ಟಾರೆ 63 ಕೋಳಿಗಳು ಸಾವನ್ನಪ್ಪಿವೆ.

ಕೋಳಿ ಸಾವಿಗೆ ಡಿಜೆ ಶಬ್ದವೇ ಕಾರಣ ಎಂದು ಕೋಳಿ ಫಾರಂ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾನೆ. ಈ ವಿಚಿತ್ರ ಪ್ರಕರಣ ಇದೀಗ ಒಡಿಶಾದ ಬಾಲಸೋರ್ ಪೊಲೀಸರ ಮುಂದಿದೆ.

ಬಾಲಸೋರ್‌ನ ರಂಜಿತ್ ಎಂಬ ಯುವಕನೆ ಕೋಳಿ ಫಾರಂ ಮಾಲೀಕ. ಇಂಜಿನಿಯರಿಂಗ್ ಮುಗಿಸಿ, ಕೆಲಸ ಸಿಗದೆ 2 ಲಕ್ಷ ಸಾಲ ಮಾಡಿ ಕೋಳಿ ಫಾರಂ ಹಾಕಿದ್ದ. ಈ ಕ್ರಮದಲ್ಲಿ ಜಮೀನಿನ ಪಕ್ಕದ ಮನೆಯಲ್ಲಿ ಕಳೆದ ಭಾನುವಾರ ಮದುವೆ ನಡೆದಿದೆ. ರಾತ್ರಿ 11.30 ಆದರೂ ನಿಲ್ಲದ ಡಿಜೆ ಶಬ್ದದಿಂದ ಕೋಳಿಗಳು ಪಟಪಟನೆ ಒದ್ದಾಡಿ ನೆಲಕ್ಕೆ ಬಿದ್ದವು ಎಂದು ರಂಜಿತ್ ಹೇಳಿದ್ದಾರೆ.

DJ-Music
DJ-Music

ಮಾಲೀಕ ಹೇಳುವಂತೆ, ಆ ಕಿರಿಕಿರಿ ಶಬ್ದವನ್ನು ಕಡಿಮೆ ಮಾಡುವಂತೆ ಮನವಿ ಮಾಡಿದರು, ಅವರು ಕೇಳಲಿಲ್ಲ ಎಂದು ಪೋಲೀಸರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದರಿಂದ ತನ್ನ 63 ಕೋಳಿಗಳು ಸಾವನ್ನಪ್ಪಿವೆ ಎಂದು ಅಳಲು ತೋಡಿಕೊಂಡರು.

ಅಲ್ಲದೆ, ಮರುದಿನ ಅವರು ಸತ್ತ ಕೋಳಿಗಳನ್ನು ಪಶುವೈದ್ಯರಿಗೆ ಪರೀಕ್ಷೆಗೆ ನೀಡಿದ್ದು, ಅವರು ಹೃದಯಾಘಾತದಿಂದ ಸಾವನ್ನಪ್ಪಿರುವುದು ದೃಢ ಪಡಿಸಿದ್ದಾರೆ. ಹಾಗೂ ಅವುಗಳ ಸಾವಿಗೆ ಡಿಜೆ ಗದ್ದಲವೇ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವೇಳೆ ಮದುವೆ ನಡೆದ ಮನೆಯ ಮಾಲೀಕರಿಗೆ ಪರಿಹಾರ ನೀಡುವಂತೆ ಕೇಳಿದ್ದು, ಅವರು ಯಾವುದೇ ಸ್ಪಂದಿಸಿಲ್ಲ… ಎಂಬ ನೋವನ್ನು ತೋಡಿಕೊಂಡಿದ್ದಾರೆ. ಸದ್ಯ ಈ ಕುರಿತು ಪೊಲೀಸರಿಗೆ ದೂರು ನೀಡಿರುವುದಾಗಿ ರಂಜಿತ್ ಹೇಳಿದ್ದಾರೆ.

– ಸತೀಶ್ ರಾಜ್

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today