ಪಾಕ್ ಪಂದ್ಯ ಗೆದ್ದಾಗ ಸಂಭ್ರಮಾಚರಣೆ.. ಏಳು ಮಂದಿ ವಿರುದ್ಧ ಪ್ರಕರಣ, ನಾಲ್ವರ ಬಂಧನ

T20 ವಿಶ್ವಕಪ್‌ನಲ್ಲಿ ಪ್ರತಿ ಪಂದ್ಯವೂ ರಂಗೇರುತ್ತಿದೆ. ಅದರಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯವೇ ಹೈವೋಲ್ಟೇಜ್.. ಆ ಪಂದ್ಯದಲ್ಲಿ ಭಾರತಕ್ಕೆ ಸೋಲನ್ನು ಅರಗಿಸಿಕೊಳ್ಳಲು ಸಾಮಾನ್ಯ ಭಾರತೀಯನಿಗೆ ಇನ್ನೂ ಸಾಧ್ಯವಾಗುತ್ತಿಲ್ಲ.

🌐 Kannada News :

T20 ವಿಶ್ವಕಪ್‌ನಲ್ಲಿ ಪ್ರತಿ ಪಂದ್ಯವೂ ರಂಗೇರುತ್ತಿದೆ. ಅದರಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯವೇ ಹೈವೋಲ್ಟೇಜ್.. ಆ ಪಂದ್ಯದಲ್ಲಿ ಭಾರತಕ್ಕೆ ಸೋಲನ್ನು ಅರಗಿಸಿಕೊಳ್ಳಲು ಸಾಮಾನ್ಯ ಭಾರತೀಯನಿಗೆ ಇನ್ನೂ ಸಾಧ್ಯವಾಗುತ್ತಿಲ್ಲ.

ಈ ನಡುವೆ ಪಾಕ್ ಗೆಲುವಿನ ಬಗ್ಗೆ ಸಂಭ್ರಮಾಚಾರಣೆ ಮಾಡಿದ ಬಗ್ಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಸೀರಿಯಸ್ ಆಗಿದ್ದಾರೆ. ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದ ನಂತರ ಪಟಾಕಿ ಸಿಡಿಸಿದ್ದಾರೆ.

ಯುಪಿ ಪೊಲೀಸರು ಆಗ್ರಾ, ಬರೇಲಿ, ಬಡಾಯು ಮತ್ತು ಸೀತಾಪುರದಲ್ಲಿ ಇದೇ ರೀತಿಯ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಪಟಾಕಿ ಸಿಡಿಸಿದ್ದು ಮಾತ್ರವಲ್ಲದೆ, ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಇದೇ ವೇಳೆ ಪಾಕ್ ಬೆಂಬಲಿಸಿ ಸಂಭ್ರಮಾಚರಣೆ ನಡೆಸಿದ ಇನ್ನೂ ಕೆಲವರ ವಿವರ ಸಂಗ್ರಹಿಸುವ ಕಾರ್ಯ ನಡೆಯುತ್ತಿದ್ದು ಅವರು ಸಹ ಇಷ್ಟರಲ್ಲೇ ಬಲೆಗೆ ಬೀಳಲಿದ್ದಾರೆ.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today