Welcome To Kannada News Today

ಹೆಣ್ಮಕ್ಳೇ ಸ್ಟ್ರಾಂಗ್ ಗುರೂ, ಕೊರೋನಾ ಸೋಂಕಿತರಲ್ಲಿ ಶೇ.76 ಪುರುಷರು

76% of coronavirus infections are male and only 24% are female

🌐 Kannada News :

ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಕೊರೋನಾ ಕುರಿತ ಅಂಕಿಅಂಶಗಳಲ್ಲಿ ಒಂದಿಷ್ಟು ಗಮನಿಸಬೇಕಾದ ಅಂಶಗಳಿವೆ. ಭಾರತದಲ್ಲಿ ಕೊರೋನಾ ಸೋಂಕಿತರ ಪೈಕಿ ಶೇ. 76ರಷ್ಟು ಪುರುಷರೇ ಇದ್ದಾರೆ. ಮಹಿಳಾ ಸೋಂಕಿತರ ಪ್ರಮಾಣ ಶೇ. 24 ಮಾತ್ರ.

ಇನ್ನು ಕೊರೋನಾ ಸಾವಿನ ಶೇಕಡಾವಾರು ಪ್ರಮಾಣ ನೋಡಿ. ಅದರಲ್ಲಿ ಪುರುಷರ ಪ್ರಮಾಣ ಶೇ.73ರಷ್ಟಿದೆ.
ಇನ್ನೊಂದಿಷ್ಟು ಅಂಕಿಅಂಶ, ಸೋಮವಾರ ಸಂಜೆವರೆಗೆ 4,067 ಜನರಿಗೆ ಸೋಂಕು ದೃಢಪಟ್ಟಿತ್ತು. 109 ಸಾವು ಸಂಭವಿಸಿದ್ದವು, ಅದರಲ್ಲಿ ಭಾನುವಾರ ಒಂದೇ ದಿನ 30 ಸಾವು ವರದಿಯಾಗಿದ್ದವು. ಒಟ್ಟೂ ಸೋಂಕಿತರಲ್ಲಿ ಶೇ.37 ಜನ 40 ವರ್ಷ ಕೆಳಗಿನವರು, ಶೇ.40.34 ಜನ 40-60 ವರ್ಷ ವಯಸ್ಸಿನವರು. ಶೇ.19 ಜನ 60ಕ್ಕೂ ಮೇಲ್ಪಟ್ಟವರು.

ವಯಸ್ಸು ಮತ್ತು ಸಾವಿನ ಪ್ರಮಾಣ
ಒಟ್ಟು ಕೊರೋನಾ ಸಾವುಗಳ ಪೈಕಿ ಶೇ. 63ರಷ್ಟು ಜನ 60 ಅಥವಾ ಅದಕ್ಕೂ ಹೆಚ್ಚಿನ ವಯಸ್ಸಿನ ವೃದ್ಧರು. 40-60 ವಯಸ್ಸಿನವರು ಶೇ. 30ರಷ್ಟು. 40ಕ್ಕೂ ಕೆಳಗಿನವರು ಶೇ.7 ಮಾತ್ರ ಸಾವಿಗೀಡಾಗಿದ್ದಾರೆ.

ಸತ್ತವರಲ್ಲಿ ಶೇ.86 ಜನರಿಗೆ ಅಸ್ತಮಾ, ಹೈಪರ್‌ಟೆನ್ಸನ್, ಡಯಾಬಿಟಿಸ್ ಮತ್ತು ಇತರ ಉಸಿರಾಟದ ಸಮಸ್ಯೆಗಳಿದ್ದವು.
ಇಲ್ಲಿ ಒಂದು ವಿಷಯ ಗಮನಿಸಿ, ಸೋಂಕಿತರಲ್ಲಿ 60ಕ್ಕೂ ಮೇಲ್ಪಟ್ಟವರ ಪ್ರಮಾಣ ಶೇ.19 ಮಾತ್ರ. ಆದರೆ ಸಾವಿನ ಪ್ರಮಾಣದಲ್ಲಿ 60ಕ್ಕೂ ಹೆಚ್ಚಿನ ವಯಸ್ಸಿನವರ ಪ್ರಮಾಣ ಶೇ.63. ಅಂದರೆ ವೃದ್ಧರು ಸೋಂಕಿತರಾದರೆ ಉಳಿಯುವ ಸಾಧ್ಯತೆ ಕಡಿಮೆ.

40ಕ್ಕೂ ಕೆಳಗಿನವರ ಸಾವಿನ ಪ್ರಮಾಣ ಶೇ.7 ಮಾತ್ರ. ಅಂದರೆ ಈ ವಯಸ್ಸಿನವರಲ್ಲಿ ರೋಗ ನಿರೋಧಕತೆ ಹೆಚ್ಚಿದೆ ಎಂದೇ ಅರ್ಥ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile