Welcome To Kannada News Today

ವಿದ್ಯಾರ್ಥಿ ಜೀವ ತೆಗೆದ ಪಬ್ಜಿ ಗೇಮ್ (Pubg Game) ?

A student commits suicide after his parents advised not to use PubG Game

🌐 Kannada News :

ಕನ್ನಡ ನ್ಯೂಸ್ ಟುಡೇ

ಹೈದರಾಬಾದ್ :  ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ತನ್ನ ಸೆಲ್‌ಫೋನ್‌ನಲ್ಲಿರುವ ಪಬ್ಜಿ ಆಟದಿಂದ ದೂರವಿರಬೇಕೆಂದು ಪೋಷಕರು ಎಚ್ಚರಿಸಿದ್ದರಿಂದ ವಿದ್ಯಾರ್ಥಿಯು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೃಷ್ಣ ಜಿಲ್ಲೆಯ ಘಂಟಸಾಲಾದ ಶ್ರೀಕಾಕುಲಂ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸ್ಥಳೀಯರ ಪ್ರಕಾರ, ಶ್ರೀಕಾಕುಲಂ ಗ್ರಾಮದ ಭೀಮರಾಜು ಮತ್ತು ವಿಜಯನಾಗಿಣಿ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಮಗ ದೀಪಕ್  (15) ಶ್ರೀಕಾಕುಲಂ ಪ್ರೌಡ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದರೆ, ಎರಡನೇ ಮಗ ಕಲ್ಯಾಣ್ 8 ನೇ ತರಗತಿಯಲ್ಲಿ ಅದೇ ಶಾಲೆಯಲ್ಲಿ ಓದುತ್ತಿದ್ದಾನೆ.

ದೀಪಕ್ ಶಾಲೆಯಲ್ಲಿ ಸಾಕಷ್ಟು ಬುದ್ದಿವಂತ ಎಂದೆನಿಸಿಕೊಂಡಿದ್ದ, ಅಂತೆಯೇ ಚನ್ನಾಗಿ ಓದುತ್ತಿದ್ದ. ಆದರೆ ತನ್ನ ಮೊಬೈಲ್ ನಲ್ಲಿದ್ದ ಪಬ್ಜಿ ಗೇಮ್ ( PubG Game )ಅನ್ನು ಸಾಕಷ್ಟು ಆಡುತ್ತಿದ್ದನು. ಸಮಯ ಸಿಕ್ಕಾಗಲೆಲ್ಲಾ ಅವನು ಅದೇ ಕೆಲಸದಲ್ಲಿದ್ದನು.

ಹತ್ತನೇ ತರಗತಿ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಸೆಲ್‌ಫೋನ್ ಬಳಸದಂತೆ ಪೋಷಕರು ಸೂಚಿಸಿದ್ದರು. ಸ್ವಲ್ಪ ದಿನಗಳಿಂದ ಬೇಸರದಲ್ಲಿದ್ದ ದೀಪಕ್ ಶುಕ್ರವಾರ ಸಂಜೆ ಟ್ಯೂಷನ್‌ಗೆ ಹೋಗಿ ಬಂದು ರಾತ್ರಿ 9 ಗಂಟೆಗೆ ಊಟ ಮಾಡಿ ಮತ್ತೆ ಟ್ಯೂಷನ್‌ಗೆ ಹೋಗುತ್ತಿದ್ದೇನೆ ಎಂದು ಹೇಳಿ ಹೊರಟನು. 

ಅಂದೇ ರಾತ್ರಿ ಶಾಲೆಯ ಹಿಂಭಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶನಿವಾರ ಬೆಳಿಗ್ಗೆ ಶಾಲೆಯನ್ನ ಸ್ವಚ್ಚ ಗೊಳಿಸಲು ಬಂದ ವ್ಯಕ್ತಿಯೊಬ್ಬರು .. ವಿದ್ಯಾರ್ಥಿಯನ್ನು ಕಂಡು ಭಯದಿಂದ ಪೊಲೀಸರಿಗೆ ಮಾಹಿತಿ ನೀಡಿದರು. ಪ್ರಕರಣವನ್ನು ನೋಂದಾಯಿಸಿ ಅನುಮಾನಾಸ್ಪದ ಸಾವು ಎಂದು ತನಿಖೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ////


 

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.