ಕಳ್ಳನನ್ನು ಹಿಡಿಯಲು ಮನೆ ಮಾಲೀಕ ಮಾಡಿದ್ದ ಸೂಪರ್ ಪ್ಲಾನ್

A super trick made by a homeowner to catch a thief

ಕಳ್ಳನನ್ನು ಹಿಡಿಯಲು ಮನೆ ಮಾಲೀಕ ಮಾಡಿದ್ದ ಸೂಪರ್ ಪ್ಲಾನ್ – A super trick made by a homeowner to catch a thief

ಕಳ್ಳನನ್ನು ಹಿಡಿಯಲು ಮನೆ ಮಾಲೀಕ ಮಾಡಿದ್ದ ಸೂಪರ್ ಪ್ಲಾನ್

ಕನ್ನಡ ನ್ಯೂಸ್ ಟುಡೇ : ಮನೆ ಯಜಮಾನ ಮನೆಯಲ್ಲಿ ಇಡುತ್ತಿದ್ದ ಹಣವು ಇದ್ದಕ್ಕಿದ್ದಂತೆ ಮಾಯವಾಗುತ್ತಿತ್ತು, ದಿನನಿತ್ಯ ಕಳುವಾಗುತ್ತಿದ್ದ ಹಣ ಯಾರು ಕದಿಯುತ್ತಿದ್ದಾರೆ ಎಂದು ಪತ್ತೆ ಹಚ್ಚುವುದು ಮನೆಯ ಮಾಲಿಕನಿಗೆ ತಲೆ ಬಿಸಿ ಮಾಡಿತ್ತು. ಆದರೆ ಈ ಬಾರಿ ಹೇಗಾದರೂ ಮಾಡಿ ಆ ಕಳ್ಳನನ್ನು ಹಿಡಿಯಲೇ ಬೇಕೆಂದು ಆ ಮನೆ ಯಜಮಾನ ಪಕ್ಕಾ ಪ್ಲಾನ್ ಮಾಡಿದ್ದ.

ಹಣ ಕದಿಯುತ್ತಿದ್ದ ಕಳ್ಳನನ್ನು ಈ ಬಾರಿ ಯಜಮಾನ ಉಪಾಯ ಮಾಡಿ ಹಿಡಿದಿದ್ದ, ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಆಂಧ್ರದ ಬಂಜಾರಾಹಿಲ್ಸ್ ನ ರೋಡ್ ನಂ. 12 ರ ಎಂ.ಎಲ್.ಎ ಕಾಲೋನಿಯ ನಿವಾಸಿ ಭೀಮ್ ರೆಡ್ಡಿ ಪಟೇಲ್ ರವರ ಮನೆಯಲ್ಲಿಯೇ ಈ ಕಳ್ಳತನ ನಡಿಯುತ್ತಿತ್ತು. ಅದೇ ಮನೆಯಲ್ಲಿ ಅಖಿಲ ( 20) ಎಂಬ ಯುವತಿ ಕೂಡ ಮನೆ ಕೆಲಸ ಮಾಡಿಕೊಂಡಿದ್ದಳು.

ಆದರೆ ನೇರವಾಗಿ ಮನೆ ಕೆಲಸದವಳನ್ನು ಕೇಳಿದರೆ ಆಕೆ ಒಪ್ಪಿಕೊಳ್ಳುತ್ತಾಳೆಯೇ, ಕಳ್ಳನನ್ನು ನೀನು ಕದ್ದೆಯಾ ಎಂದರೆ, ಒಪ್ಪಿಕೊಂಡಾರೆ ?

ಅದಕ್ಕಾಗಿ ಮನೆಯ ಮಾಲೀಕ ಒಂದು ಉಪಾಯ ಮಾಡಿದ, ಕಳ್ಳತನ ಯಾರು ಮಾಡುತ್ತಿದ್ದಾರೆ ಎಂದು ಪತ್ತೆ ಹಚ್ಚಲು ತನ್ನ ಕೋಣೆಯಲ್ಲಿ ಎಂದಿನಂತೆ 2100 ರೂ. ಗಳನ್ನು ಇಟ್ಟು ಪ್ರತಿ ನೋಟಿನ ಸಂಖ್ಯೆಗಳನ್ನು ಬರೆದು ಕೊಳ್ಳುತ್ತಾನೆ. ಸ್ವಲ್ಪ ಸಮಯದ ನಂತರ ತಾನು ಅಂದು ಕೊಂಡಂತೆ ಅಲ್ಲಿಂದ ಹಣ ಕಾಣೆಯಾಗಿರುತ್ತದೆ. ತಕ್ಷಣ ಪೊಲೀಸರಿಗೆ ಕರೆ ಮಾಡಿದ ಮನೆ ಯಜಮಾನ, ಅವರನ್ನು ಮನೆಗೆ ಕರೆಯಿಸಿ ತಾನು ಬರೆದು ಕೊಂಡಿದ್ದ ನೋಟುಗಳ ಸಾಂಖ್ಯೆಗಳನ್ನು ನೀಡುತ್ತಾನೆ.

ಪೊಲೀಸರು ವಿಚಾರಣೆ ನಡೆಸಿ, ಮನೆ ಕೆಲಸದಾಕೆ ಬಳಿಯಿದ್ದ ನೋಟುಗಳ ಸಂಖ್ಯೆ ಹಾಗೂ ಮನೆ ಯಜಮಾನ ನೀಡಿದ ಸಂಖ್ಯೆ ಹೋಲಿಕೆ ಮಾಡಿ ನೋಡಿದರೆ, ಅಲ್ಲಿ ನಿಜವಾದ ಕಳ್ಳಿ ಸಿಕ್ಕಿಬಿದ್ದಿದ್ದಳು. ನಂತರ ಪೊಲೀಸರ ಬಳಿ “ಅಖಿಲ” ತಾನೇ ಕದ್ದಿದ್ದಾಗಿ ಒಪ್ಪಿಕೊಂಡಿದ್ದಾಳೆ. ಪೊಲೀಸರು ಒಟ್ಟಾರೆ ಅವಳಿಂದ 16,500 ರೂ ವಶಪಡಿಸಿಕೊಂಡು, ಪ್ರಕರಣ ದಾಖಲಿಸಿದ್ದಾರೆ. ////

Web Title : A super trick made by a homeowner to catch a thief