ಕಳ್ಳನ ಬೆನ್ನಟ್ಟಿದ, ತಾಯಿ ಮಗಳ ದುರ್ಮರಣ !

A woman and her daughter were crushed to death on rail tracks while chasing a thief

ಕಳ್ಳನ ಬೆನ್ನಟ್ಟಿದ, ತಾಯಿ ಮಗಳ ದುರ್ಮರಣ ! – A woman and her daughter were crushed to death on rail tracks while chasing a thief

ಕಳ್ಳನ ಬೆನ್ನಟ್ಟಿದ, ತಾಯಿ ಮಗಳ ದುರ್ಮರಣ !

ಕನ್ನಡ ನ್ಯೂಸ್ ಟುಡೇ : ಆಗ್ರಾ : ರೈಲಿನಲ್ಲಿ ತಮ್ಮ ಬ್ಯಾಗ್ ಕದ್ದು ಓಡುತ್ತಿದ್ದ ವ್ಯಕ್ತಿಯನ್ನು ಬೆನ್ನಟ್ಟಿದ ತಾಯಿ ಮಗಳು ರೈಲಿಗೆ ಸಿಲುಕಿ ಧಾರುಣ ಸಾವನ್ನಪ್ಪಿರುವ ಘಟನೆ “ಮಧುರ” ದಲ್ಲಿ ನಡೆದಿದೆ.

ಪೊಲೀಸ್ ಮತ್ತು ಪ್ರತ್ಯಕ್ಷದರ್ಶಿಗಳ ಮಾಹಿತಿಯ ಪ್ರಕಾರ, ಉತ್ತರ ಪ್ರದೇಶದ ಮೀನಾ ದೇವಿ (45) ಮತ್ತು ಮನೀಶಾ (21) ಹಜರತ್ ನಿಜಾಮುದ್ದೀನ್ ರೈಲಿನಲ್ಲಿ ದೆಹಲಿಯಿಂದ ರಾಜಸ್ಥಾನಕ್ಕೆ ಪ್ರಯಾಣಿಸುತ್ತಿದ್ದರು.

ಮುಂಜಾನೆ 4 ಗಂಟೆ ಸುಮಾರಿಗೆ ವೃಂದಾವನ್ ರಸ್ತೆ ಸ್ಟೇಷನ್ ನಿಲ್ದಾಣದ ಬಳಿ ಕಳ್ಳ ರೈಲಿನ ತುರ್ತು ಸರಪಳಿಯನ್ನು ಎಳೆದಿದ್ದಾನೆ. ಅಷ್ಟರಲ್ಲಿ ನಿದ್ದೆಯಿಂದ ಎಚ್ಚರಗೊಂಡ ತಾಯಿ,ಮಗಳು ಅವರ ಬ್ಯಾಗ್‌ಗಳು ಕಾಣೆಯಾಗಿರುವುದನ್ನು ಗಮನಿಸಿ, ಇಬ್ಬರು ಕೂಡಲೇ ಕಳ್ಳನನ್ನು ಬೆನ್ನಟ್ಟಿದ್ದಾರೆ.

ಕಳ್ಳನನ್ನು ಹಿಡಿಯಲು ಹಿಂದೆ ಬಿದ್ದ ಮೀನಾ ದೇವಿ ಮತ್ತು ಮಗಳು ಮನಿಷಾ ಕಾಲು ಜಾರಿ ರೈಲ್ವೆ ಹಳಿ ಮೇಲೆ ಬಿದ್ದಿದ್ದಾರೆ, ಮೀನಾ ದೇವಿ ಸ್ಥಳದಲ್ಲೇ ಮೃತಪಟ್ಟಿದ್ದು, ಮಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.

ಆಗ್ರಾ ಪ್ರಾದೇಶಿಕ ರೈಲ್ವೆ ಎಸ್‌ಪಿ ಜೋಗಿಂದರ್ ಕುಮಾರ್ ಮಾತನಾಡಿ, ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ , ತ್ರಿವೇಂದ್ರ ಎಕ್ಸ್‌ಪ್ರೆಸ್ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೋ ಅಥವಾ ಹತ್ತಿರದ ಟ್ರ್ಯಾಕ್‌ನಲ್ಲಿದ್ದ ಸಂಪರ್ಕ್ ಎಕ್ಸ್‌ಪ್ರೆಸ್ ನ ಅಡಿ ಸಿಲಿಕಿದರೋ ಸ್ಪಷ್ಟವಾದ ಮಾಹಿತಿ ಇಲ್ಲ ಎಂದಿದ್ದಾರೆ.
ಮೃತಪಟ್ಟ ಮೀನಾ ದೇವಿಯ ಮಗ ಆಕಾಶ್ (19) ಕೂಡ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಅಪಘಾತದ ನಂತರ ತನ್ನ ಸಹ ಪ್ರಯಾಣಿಕರು ನಿದ್ದೆಯಲ್ಲಿದ್ದ ಆತನನ್ನು ಎಚ್ಚರಿಸಿದ್ದಾರೆ, ಎಂದು ತಿಳಿದು ಬಂದಿದೆ. ಆಕಾಶ್ ಅವರ ದೂರನ್ನು ದಾಖಲಿಸಲಾಗಿದ್ದು, ಕಳ್ಳನನ್ನು ಪತ್ತೆ ಹಚ್ಚಲು ಬಲೇ ಬೀಸಲಾಗಿದೆ ಎಂದು ತಿಳಿದು ಬಂದಿದೆ.
ತನ್ನ ಅಕ್ಕ ಮನಿಷಾಳನ್ನು ಕೋಟಾದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗೆ ಸೇರಿಸಲು ರೈಲಿನಲ್ಲಿ ಪ್ರಯಾಣಿಸುತ್ತಿದ್ದುದಾಗಿ, ಆ ಸಮಯದಲ್ಲಿ ದುರಂತ ಸಂಭವಿಸಿದೆ ಎಂದು ಆಕಾಶ್ ಕಣ್ಣೀರು ಹಾಕುತ್ತಿದ್ದುದು, ಮನಕಲುಕುವಂತಿತ್ತು.////
Web Title : A woman and her daughter were crushed to death on rail tracks while chasing a thief