ಗ್ರೀನ್ ಇಂಡಿಯಾ ಚಾಲೆಂಜ್, ಸಸಿ ನೆಟ್ಟ ಸಿದ್ಧಾರ್ಥ್ ಮಲ್ಹೋತ್ರಾ

ಟಿಆರ್‌ಎಸ್ ಪಕ್ಷದ ಹಿರಿಯ ನಾಯಕರು ಮತ್ತು ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ ಅವರು ಆರಂಭಿಸಿರುವ ಗ್ರೀನ್ ಇಂಡಿಯಾ ಚಾಲೆಂಜ್ ಕಾರ್ಯಕ್ರಮದಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಭಾಗವಹಿಸಿದ್ದಾರೆ. 

ಮುಂಬೈ: ಟಿಆರ್‌ಎಸ್ ಪಕ್ಷದ ಹಿರಿಯ ನಾಯಕರು ಮತ್ತು ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ ಅವರು ಆರಂಭಿಸಿರುವ ಗ್ರೀನ್ ಇಂಡಿಯಾ ಚಾಲೆಂಜ್ ಕಾರ್ಯಕ್ರಮದಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಭಾಗವಹಿಸಿದ್ದಾರೆ.

ಮುಂಬೈನ ಅಂಧೇರಿಯಲ್ಲಿರುವ ವೆಸ್ಟ್ ಚಿತ್ರಕೂಟ ಸ್ಟುಡಿಯೋದಲ್ಲಿ ಸಿದ್ಧಾರ್ಥ್ ಗಿಡಗಳನ್ನು ನೆಟ್ಟರು. ಸಿದ್ಧಾರ್ಥ್, ಚಿತ್ರ ನಿರ್ದೇಶಕರಾದ ಸಾಗರ್ ಅಂಬ್ರೆ ಮತ್ತು ಪುಷ್ಕರ್ ಓಜಾ ಅವರೊಂದಿಗೆ ಸಸಿಗಳನ್ನು ನೆಟ್ಟರು.

ಈ ವೇಳೆ ಮಾತನಾಡಿದ ಸಿದ್ಧಾರ್ಥ್, ಗ್ರೀನ್ ಇಂಡಿಯಾ ಚಾಲೆಂಜ್ ನಲ್ಲಿ ಭಾಗವಹಿಸಿ ಸಸಿಗಳನ್ನು ನೆಡಲು ಸಂತಸವಾಗುತ್ತಿದೆ. ಈ ಕಾರ್ಯಕ್ರಮವನ್ನು ಆಂದೋಲನವಾಗಿ ಮುನ್ನಡೆಸುತ್ತಿರುವ ರಾಜ್ಯಸಭಾ ಸದಸ್ಯರು ಜೋಗಿನಿಪಲ್ಲಿ ಸಂತೋಷ್ ಕುಮಾರ್ ಅವರ ಕಾರ್ಯವನ್ನು ಮನಃಪೂರ್ವಕವಾಗಿ ಶ್ಲಾಘಿಸಿದ್ದಾರೆ.

ಗ್ರೀನ್ ಇಂಡಿಯಾ ಚಾಲೆಂಜ್ ಜಾಗತಿಕ ತಾಪಮಾನವನ್ನು ತಡೆಯಲು ಸಹಾಯ ಮಾಡುತ್ತದೆ. ಭವಿಷ್ಯದ ಪೀಳಿಗೆಗೆ ಬದುಕಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಎಲ್ಲರೂ ಗ್ರೀನ್ ಇಂಡಿಯಾ ಚಾಲೆಂಜ್ ನಲ್ಲಿ ಪಾಲ್ಗೊಂಡು ಜವಾಬ್ದಾರಿಯಿಂದ ಸಸಿಗಳನ್ನು ನೆಡಬೇಕು ಎಂದು ಸಿದ್ಧಾರ್ಥ್ ಕರೆ ನೀಡಿದರು.

Stay updated with us for all News in Kannada at Facebook | Twitter
Scroll Down To More News Today