ಇಂದು ನಾಮಪತ್ರ ಸಲ್ಲಿಸಲಿರುವ ಎಐಸಿಸಿ ಅಧ್ಯಕ್ಷ ರಾಹುಲ್

AICC president Rahul Gandhi will file his nomination today

ಇಂದು ನಾಮಪತ್ರ ಸಲ್ಲಿಸಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ – AICC president Rahul Gandhi will file his nomination today

ಕೇರಳ : ಕೇರಳದ ವಯನಾಡು ಕ್ಷೇತ್ರದಲ್ಲಿ ಸ್ಪರ್ಧೆ ಹಿನ್ನೆಲೆಯಲ್ಲಿ ಇಂದು ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಲಿದ್ದಾರೆ, ಇಂದು ಹೆಲಿಕಾಪ್ಟರ್ ಮೂಲಕ ಕಲ್ ಪೆಟ್ಟಾಗ ಭೇಟಿ ನೀಡಲಿರುವ ರಾಹುಲ್ ಗಾಂಧಿ, ರೋಡ್ ಷೋ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ರೋಡ್ ಷೋ ಬಳಿಕ, ಡಿಸಿ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ರಾಹುಲ್ ರವರ ಆಗಮನದ ಹಿನ್ನೆಲೆ ಅದಾಗಲೇ ಸಂಚಾರ ವ್ಯಸ್ಥೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಬಸ್ ನಿಲ್ದಾಣದಿಂದ ಡಿ.ಸಿ ಕಚೇರಿಯ ವರೆಗೂ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು , ಯಾವುದೇ ಖಾಸಗಿ ವಾಹನಗಳಿಗೆ ಸಂಚಾರ ಇರುವುದಿಲ್ಲ.

ರಾಹುಲ್ ಗಾಂದಿರವರಿಗೆ ಪ್ರಿಯಾಂಕಾ ಗಾಂಧಿ ಸಹ ಸಾಥ್ ನೀಡಲಿದ್ದಾರೆ. ಕಾಲ್ ಪೆಟ್ಟಾ ಡಿ.ಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಬಳಿಕ, ಕಾಂಗ್ರೆಸ್ ಕಚೇರಿಗೆ ತೆರಳಿ ರಾಜಕೀಯ ಮುಖಂಡರುಗಳ ಜೊತೆ ಚರ್ಚೆ ನಡೆಸಲಿದ್ದಾರೆ.

ಹಾಗೆಯೇ ಹೆಲಿಪ್ಯಾಡ್ ನಲ್ಲಿ ಯುಡಿಎಫ್ ನಾಯಕರ ಜೊತೆಯೂ ಸಹ ಸಂವಾದ ನಡೆಸಲು ಸಿದ್ಧತೆ ಮಾಡಲಾಗಿದೆ.

ಕೇರಳದಲ್ಲೂ ಸಹ ಈ ಬಾರಿ ಜಿದ್ದಾ ಜಿದ್ದಿ ರಾಜಕೀಯ ಹೋರಾಟದ ನಿರೀಕ್ಷೆ ಇದೆ. ಕಳೆದ ಬಾರಿ ಕಾಂಗ್ರೆಸ್ ಜಯಗಳಿಸಿದ್ದಾರೂ ಸಹ ಗೆಲುವಿನ ಅಂತರ ಬಹಳವೇ ಕಡಿಮೆ ಇತ್ತು. ಸಧ್ಯ ರಾಹುಲ್ ಗಾಂಧಿಯವರ ಆಗಮನಕ್ಕೆ ಕೈ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿದೆ.