Aiims Hospital: ದೆಹಲಿ ಏಮ್ಸ್ ನಲ್ಲಿ ನೂರು ಕೋಟಿ ಲಸಿಕೆ ಹಾಕಿದ ಸಂಭ್ರಮ

Aiims Hospital: ರಾಷ್ಟ್ರ ರಾಜಧಾನಿಯ ಏಮ್ಸ್ ಆಸ್ಪತ್ರೆ 100 ಕೋಟಿ ಲಸಿಕೆ ಮೈಲಿಗಲ್ಲನ್ನು ತಲುಪಿದ ಹಿನ್ನೆಲೆ ಸಂಭ್ರಮದಲ್ಲಿ ತೊಡಗಿತ್ತು. ಆಸ್ಪತ್ರೆಯ ಮುಖ್ಯ ಬ್ಲಾಕ್ಗಳನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಹೂವಿನ ಮೊಗ್ಗುಗಳೊಂದಿಗೆ 100 ಕೋಟಿ ಲಸಿಕೆ ವಿತರಿಸಿದ ಹಿನ್ನೆಲೆ ದೆಹಲಿ ಏಮ್ಸ್ ನಲ್ಲಿ ವೈದ್ಯರು ಮತ್ತು ಸಿಬ್ಬಂದಿ ಪರಸ್ಪರ ಶುಭಾಶಯ ಕೋರಿದರು.

ನವದೆಹಲಿ (Aiims Hospital): ರಾಷ್ಟ್ರ ರಾಜಧಾನಿಯ ಏಮ್ಸ್ ಆಸ್ಪತ್ರೆ 100 ಕೋಟಿ ಲಸಿಕೆ ಮೈಲಿಗಲ್ಲನ್ನು ತಲುಪಿದ ಹಿನ್ನೆಲೆ ಸಂಭ್ರಮದಲ್ಲಿ ತೊಡಗಿತ್ತು. ಆಸ್ಪತ್ರೆಯ ಮುಖ್ಯ ಬ್ಲಾಕ್ಗಳನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಹೂವಿನ ಮೊಗ್ಗುಗಳೊಂದಿಗೆ 100 ಕೋಟಿ ಲಸಿಕೆ ವಿತರಿಸಿದ ಹಿನ್ನೆಲೆ ದೆಹಲಿ ಏಮ್ಸ್ ನಲ್ಲಿ ವೈದ್ಯರು ಮತ್ತು ಸಿಬ್ಬಂದಿ ಪರಸ್ಪರ ಶುಭಾಶಯ ಕೋರಿದರು.

ಭಾರತದಲ್ಲಿ 100 ಕೋಟಿ ಕೋವಿಡ್ -19 ಲಸಿಕೆ ಮೈಲಿಗಲ್ಲನ್ನು ಸಾಧಿಸುವಲ್ಲಿ ಕೋವಿನ್ ಆಪ್ ಪಾತ್ರವನ್ನು ಡಾ. ಆರ್ ಎಸ್ ಶರ್ಮಾ ಶ್ಲಾಘಿಸಿದ್ದಾರೆ.

ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನವು ಈ ವರ್ಷ ಜನವರಿ 16 ರಂದು ಆರಂಭವಾಯಿತು. ಗುರುವಾರಕ್ಕೆ ದೇಶದ ಜನರಿಗೆ ನೂರು ಕೋಟಿ ಲಸಿಕೆಗಳನ್ನು ನೀಡಲಾಗಿದೆ. ಈ ಐತಿಹಾಸಿಕ ವಿಷಯವನ್ನು ಜಗತ್ತಿಗೆ ಹರಡಲು ಕೇಂದ್ರ ಸರ್ಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ವಿಶೇಷ ಗೀತೆಯನ್ನು ಅನಾವರಣಗೊಳಿಸಿದೆ. ಹಾಗೆಯೇ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ, ರೈಲ್ವೇ ನಿಲ್ದಾಣಗಳಲ್ಲಿ, ರೈಲುಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನೂರು ಕೋಟಿ ಲಸಿಕೆ ಪೂರೈಸಿದ ಬಗ್ಗೆ ಘೋಷಣೆಗಳನ್ನು ಮಾಡಲಾಗಿದೆ.