Welcome To Kannada News Today

ಲಾಕ್ ಡೌನ್ ಬಳಿಕ ಮುಂದೇನು ? ಮೇ 3ರ ನಂತರವೂ ವಿಸ್ತರಣೆಯೇ ? ಈ ವಾರಾಂತ್ಯದಲ್ಲಿ ನಿರ್ಧಾರ

All Eyes on PM Modi’s Meeting With Chief Ministers

🌐 Kannada News :

ಮೇ 3ರಂದು ದೇಶದಲ್ಲಿ ಲಾಕ್‌ಡೌನ್ 2.0 ಅಂತ್ಯವಾಗುವ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಸಿಎಂಗಳ ಜತೆ ಮಹತ್ವದ ಚರ್ಚೆ ನಡೆಸಿದ್ದಾರೆ.ದೇಶವ್ಯಾಪಿ ಲಾಕ್​ಡೌನ್ ಮೇ 3ರಂದು ಅಂತ್ಯಗೊಳ್ಳಲಿದೆ. ಕೆಲ ಜಿಲ್ಲೆಗಳಲ್ಲಿ ಕೆಲ ಸಡಿಲಿಕೆಗಳೊಂದಿಗೆ ಲಾಕ್ ಡೌನ್ ಮುಂದುವರಿಸುವುದು ಖಚಿತವೆನ್ನಲಾಗಿದೆ.

ಆದರೆ ಯಾವುದು ಸಡಿಲಿಕೆ, ಯಾವುದು ವಿನಾಯತಿ, ಯಾವ ಯಾವ ಜಿಲ್ಲೆಗಳಲ್ಲಿ ಸಿಸ್ತರಣೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈ ವಾರಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಲಾಕ್ ಡೌನ್ ಸಡಿಲಿಕೆ ಸಂಬಂಧ ನಿರ್ಧಾರ ಪ್ರಕಟಿಸಲಿದ್ದಾರೆ. ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾಡಲಿರುವ ನಾಲ್ಕನೇ ಭಾಷಣ ಇದಾಗಿದೆ.

ಇವತ್ತು, ಪ್ರಧಾನಿ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸುತ್ತಿರುವ ವಿಡಿಯೋ ಕಾನ್ಫೆರೆನ್ಸಿಂಗ್​ನಲ್ಲಿ ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ. ಎಲ್ಲರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಲಾಕ್ ಡೌನ್ ಸಡಿಲಿಕೆ ಬಗ್ಗೆ ಪ್ರಧಾನಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ಧಾರೆ.

ಕೊರೊನಾ ವಿರುದ್ಧ ಸಮರ ಸಾರಿರುವ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಮೋದಿಯ 4ನೆಯ ಬಾರಿಗೆ ಮಾಡುವ ಭಾಷಣ ಇದಾಗಿದ್ದು, ದೇಶದ ಜನತೆಯ ಕಣ್ಣು ಇದೀಗ ಮೋದಿ ಏನು ಹೇಳಬಹುದೆಂಬ ಕುತೂಹಲದ ಮೇಲಿದೆ.

ಮಾರ್ಚ್ 20 ರಂದು, ಪ್ರಧಾನಮಂತ್ರಿಗಳು ಸಿಎಂಗಳೊಂದಿಗೆ ಮೊದಲ ಸಭೆ ನಡೆಸಿದಾಗ, ಎಂಟು ರಾಜ್ಯಗಳು COVID-19 ತಡೆಯುವಿಕೆ, ಕೈಗೊಂಡಿರುವ ಕ್ರಮಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದವು. ಏಪ್ರಿಲ್ 2 ರಂದು, ಎರಡನೇ ಸಭೆಯಲ್ಲಿ, ಎಂಟು ರಾಜ್ಯಗಳು ಲಾಕ್‌ಡೌನ್ ತೆರವಿನ ತಂತ್ರದ ಬಗ್ಗೆ ಚರ್ಚಿಸಿದ್ದವು.

ಏಪ್ರಿಲ್ 11 ರಂದು ನಡೆದ ಮೂರನೇ ಸಭೆಯಲ್ಲಿ, 21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ನಿರ್ಧಾರವನ್ನು ಬೆಂಬಲಿಸಿದ್ದಕ್ಕಾಗಿ ಪ್ರಧಾನಿ ರಾಜ್ಯಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು

📣 ಇನ್ನಷ್ಟು ಕನ್ನಡ ಇಂಡಿಯಾ ನ್ಯೂಸ್ ಗಳಿಗಾಗಿ India News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today