ದೆಹಲಿ-ಗಾಜಿಪುರ ಗಡಿಯನ್ನು ತೊರೆದ ರೈತರು..
ಕೇಂದ್ರ ಸರ್ಕಾರವು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಿದೆ ಮತ್ತು ರೈತರ ಎಲ್ಲಾ ಇತರ ಬೇಡಿಕೆಗಳನ್ನು ಪೂರೈಸುವ ಭರವಸೆ ನೀಡಿತು. ಹೀಗಾಗಿ ಹೋರಾಟವನ್ನು ಕೊನೆಗೊಳಿಸಿದ ರೈತರು ದೆಹಲಿಯ ಗಡಿಯಿಂದ ಮನೆಗೆ ಮರಳಿದರು.
ನವದೆಹಲಿ : ಕೇಂದ್ರ ಸರ್ಕಾರವು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಿದೆ ಮತ್ತು ರೈತರ ಎಲ್ಲಾ ಇತರ ಬೇಡಿಕೆಗಳನ್ನು ಪೂರೈಸುವ ಭರವಸೆ ನೀಡಿತು. ಹೀಗಾಗಿ ಹೋರಾಟವನ್ನು ಕೊನೆಗೊಳಿಸಿದ ರೈತರು ದೆಹಲಿಯ ಗಡಿಯಿಂದ ಮನೆಗೆ ಮರಳಿದರು.
ಹೀಗಾಗಿ ಗಾಜಿಪುರ ಗಡಿಯಲ್ಲಿ ಮೊಕ್ಕಾಂ ಹೂಡಿದ್ದ ರೈತರ ಕೊನೆಯ ಗುಂಪು ನಿನ್ನೆ ಮನೆಗೆ ಮರಳಿದೆ. ಅಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಕೂಡ ಗುಂಪಿನೊಂದಿಗೆ ತಮ್ಮ ಊರಿಗೆ ಮರಳಿದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಂದು ನಾನು ತುಂಬಾ ಭಾವುಕನಾಗಿದ್ದೇನೆ. ಕಳೆದ 13 ತಿಂಗಳಿನಿಂದ ಈ ಸ್ಥಳ ನಮ್ಮ ಮನೆಯಾಗಿದೆ. ರೈತರ ಹಕ್ಕುಗಳ ಹೋರಾಟ ಎಂದಿಗೂ ನಿಲ್ಲುವುದಿಲ್ಲ. ಹೋರಾಟ ಸ್ಥಗಿತಗೊಳಿಸಿದ್ದೇವೆ. ನಮಗೆ ನೀಡಿದ ಭರವಸೆಯಂತೆ ಕನಿಷ್ಠ ಬೆಂಬಲ ಬೆಲೆ ಕಾನೂನನ್ನು ಜಾರಿಗೊಳಿಸದಿದ್ದರೆ ಮತ್ತೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಎಲ್ಲ ರೈತರು ತಮ್ಮ ಮನೆಗಳಿಗೆ ಮರಳಿದ ಹಿನ್ನೆಲೆಯಲ್ಲಿ ಗಾಜಿಪುರ ಗಡಿಯಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಅಲ್ಲಿಗೆ ಸಂಚಾರ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow Us on : Google News | Facebook | Twitter | YouTube