Welcome To Kannada News Today

ಪ್ರಧಾನಮಂತ್ರಿ ನರೇಂದ್ರ ಮೋದಿ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿ ಅಮಿತ್​ ಖರೆ ನೇಮಕ

Amit Khare: ಮಾಜಿ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಮತ್ತು ಉನ್ನತ ಶಿಕ್ಷಣದ ಮಾಜಿ ಕಾರ್ಯದರ್ಶಿ ಅಮಿತ್​ ಖರೆ ಅವರನ್ನು ಪ್ರಧಾನಿ ಮೋದಿಯವರ ಸಲಹೆಗಾರರಾಗಿ ನೇಮಿಸಲಾಗಿದೆ.

🌐 Kannada News :

ಮಾಜಿ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಮತ್ತು ಉನ್ನತ ಶಿಕ್ಷಣದ ಮಾಜಿ ಕಾರ್ಯದರ್ಶಿ ಅಮಿತ್​ ಖರೆ ಅವರನ್ನು ಪ್ರಧಾನಿ ಮೋದಿಯವರ ಸಲಹೆಗಾರರಾಗಿ ನೇಮಿಸಲಾಗಿದೆ.

1985 ರ ಬಿಹಾರ-ಜಾರ್ಖಂಡ್ ಕೇಡರ್ ಐಎಎಸ್ ಅಧಿಕಾರಿಯಾಗಿದ್ದ ಅಮಿತ್ ಖರೆ ಕಳೆದ ತಿಂಗಳು ಸೆಪ್ಟೆಂಬರ್​ 30 ರಂದು ಉನ್ನತ ಶಿಕ್ಷಣ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾದರು.  ಸದ್ಯ ಪ್ರಧಾನಿ ನರೇಂದ್ರ ಮೋದಿಯವರ ಸಲಹೆಗಾರರಾಗಿ ನೇಮಕವಾಗಿದ್ದಾರೆ.

ಕೇಂದ್ರ ಸಚಿವ ಸಂಪುಟ ಹೇಳಿಕೆಯಲ್ಲಿ, “ಕ್ಯಾಬಿನೆಟ್ ನೇಮಕಾತಿ ಸಮಿತಿಯು 1985 ರ ಕೇಡರ್ ನ ನಿವೃತ್ತ ಐಎಎಸ್ ಅಧಿಕಾರಿ ಅಮಿತ್ ಖರೆ ಅವರನ್ನು ಪ್ರಧಾನಮಂತ್ರಿಯ ಸಲಹೆಗಾರರನ್ನಾಗಿ ನೇಮಿಸಲು ಅನುಮೋದನೆ ನೀಡಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಕಾರ್ಯದರ್ಶಿಯಾಗಿರುವ ಅಮಿತ್ ಕಾರೆ ಅವರನ್ನು ಎರಡು ವರ್ಷಗಳ ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ.

ಕ್ಯಾಬಿನೆಟ್​​ನ ನೇಮಕಾತಿ ಸಮಿತಿ ಅನುಮೋದನೆ ನೀಡಿದ ಅನ್ವಯ ಇನ್ನುಮುಂದೆ ಅಮಿತ್​ ಖರೆ ಪ್ರಧಾನಿ ಸಲಹೆಗಾರರಾಗಿ ಪ್ರಧಾನಮಂತ್ರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಭಾರತ ಸರ್ಕಾರದ ಕಾರ್ಯದರ್ಶಿಯ ಶ್ರೇಣಿ ಮತ್ತು ಸ್ಕೇಲ್​​ನಲ್ಲಿ, ಗುತ್ತಿಗೆ ಆಧಾರದ ಅನ್ವಯ ಮತ್ತು ಇತರ ಸಾಮಾನ್ಯ ನಿಯಮಗಳಿಗೆ ಅನುಗುಣವಾಗಿ ಅವರ ನೇಮಕಾತಿ ನಡೆದಿದೆ.

ಅಮಿತ್ ಖರೆ ಅವರು ಪ್ರಧಾನಿ ಮೋದಿ ಸಲಹೆಯ ಮೇರೆಗೆ ಕೇಂದ್ರ ಸರ್ಕಾರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮೇಲ್ವಿಚಾರಣೆ ಮಾಡಿ ಅಭಿವೃದ್ಧಿ ಪಡಿಸಿದವರು. ಮಾಹಿತಿ ಮತ್ತು ಪ್ರಸಾರ ಮತ್ತು ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ವಿವಿಧ ಸುಧಾರಣೆಗಳು ಮತ್ತು ನಿಯಮಗಳನ್ನು ಪರಿಚಯಿಸಿದ ಕೀರ್ತಿಯೂ ಅಮಿತ್ ಖರೆಗೆ ಸಲ್ಲುತ್ತದೆ.

ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಬಿಕೆ ಸಿನ್ಹಾ ಮತ್ತು ಮಾಜಿ ಕಾರ್ಯದರ್ಶಿ ಅಮರ್ಜಿತ್ ಸಿನ್ಹಾ ಅವರು ಪ್ರಧಾನಿ ಮೋದಿಯ ಸಲಹೆಗಾರರಾಗಿ ನಿವೃತ್ತರಾಗಿದ್ದಾರೆ. ನಿರ್ಧಾರ ತೆಗೆದುಕೊಳ್ಳುವಲ್ಲಿ ಪಾರದರ್ಶಕವಾಗಿರುವ ಅಮಿತ್ ಖರೆ, ಪ್ರಧಾನಿ ಮೋದಿ ಅವರ ಅಡಿಯಲ್ಲಿ ಕೆಲಸ ಮಾಡುವ ಕಾರ್ಯದರ್ಶಿಗಳಲ್ಲೊಬ್ಬರು. ಕಾರ್ಯದರ್ಶಿ ಶ್ರೇಣಿಗೆ ಅನ್ವಯ ಆಗುವ ಎಲ್ಲ ಷರತ್ತುಗಳೂ ಅನ್ವಯ ಆಗುತ್ತವೆ. ಎರಡು ವರ್ಷಗಳ ಅವಧಿಗೆ ಸದ್ಯ ನೇಮಕ ಮಾಡಲಾಗಿದ್ದು, ಮುಂದಿನ ಆದೇಶದವರೆಗೂ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಲಾಗಿದೆ.

📣 ಇನ್ನಷ್ಟು ಕನ್ನಡ ಇಂಡಿಯಾ ನ್ಯೂಸ್ ಗಳಿಗಾಗಿ India News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today