Welcome To Kannada News Today

Breaking, ಹತ್ರಾಸ್ ಪ್ರಕರಣ : ಆರೋಪಿಗಳ ವಿಷಯದಲ್ಲಿ ಮತ್ತೊಂದು ಟ್ವಿಸ್ಟ್

ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣ, ಘಟನೆಯ ಸಮಯದಲ್ಲಿ ಘಟನಾ ಸ್ಥಳದಲ್ಲಿ ರಾಮು ಇರಲಿಲ್ಲ

🌐 Kannada News :

( Kannada News ) ಲಕ್ನೋ : ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣ ಮುಂದುವರೆದಂತೆ, ರೋಮಾಂಚಕ ಸಂಗತಿಗಳು ಮುನ್ನೆಲೆಗೆ ಬರುತ್ತಿವೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳಿದ್ದು, ಅವರಲ್ಲಿ ಒಬ್ಬರು, ಘಟನೆಯ ಸಮಯದಲ್ಲಿ ಘಟನಾ ಸ್ಥಳದಲ್ಲಿ ಇರಲಿಲ್ಲ ಮತ್ತು ಅವರು ಉದ್ಯೋಗದಲ್ಲಿದ್ದ ಕಂಪನಿಯಲ್ಲಿ ಕರ್ತವ್ಯದಲ್ಲಿದ್ದನು, ಎಂಬ ವಿಚಾರ ಬೆಳಕಿಗೆ ಬಂದಿದೆ..

ರಾಷ್ಟ್ರೀಯ ಚಾನೆಲ್ ಪ್ರಕಾರ, ಹತ್ರಾಸ್ ಪ್ರಕರಣದ ಆರೋಪಿ ರಾಮು ಆ ಸಮಯದಲ್ಲಿ ಕೆಲಸ ಮಾಡುತ್ತಿದ್ದನಂತೆ. ಆತ ಮೂರು ತಿಂಗಳಿಂದ ಡಬಲ್ ಶಿಫ್ಟ್ ಕೆಲಸ ಮಾಡುತ್ತಿದ್ದು , ಸಾಮೂಹಿಕ ಅತ್ಯಾಚಾರ ನಡೆದ ದಿನ ಸಹ ಘಟನೆ ನಡೆದ ಗ್ರಾಮದಲ್ಲಿ ಇರಲಿಲ್ಲ ಎಂದು ಸ್ವತಃ ಅವನು ಕೆಲಸ ಮಾಡುವ ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.

ಇದನ್ನೂ : ಹತ್ರಾಸ್ ಪ್ರಕರಣ : ಕುಟುಂಬ ಮತ್ತು ಆರೋಪಿಗಳಿಗೆ ಲೈ ಡಿಟೆಕ್ಟರ್ ಪರೀಕ್ಷೆ ಸಾಧ್ಯತೆ

ಘಟನೆ ನಡೆದ ದಿನ ರಾಮು ಅವರು ತಮ್ಮ ಕಾರ್ಖಾನೆಯಲ್ಲಿಯೇ ಕೆಲಸ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ. ಅವನ ಜೊತೆಗೆ, 25 ಕ್ಕೂ ಹೆಚ್ಚು ಸಿಬ್ಬಂದಿ ಇದ್ದರು,  ತಿಳಿಸಿದ್ದಾರೆ. ಹಾಗೂ ಘಟನೆಯ ದಿನ ರಾಮು ಕೆಲಸಕ್ಕೆ ಬಂದಿದ್ದು, ಆತ ಕೆಲಸ ಮಾಡುವುದನ್ನು ಇತರರು ಸೆಪ್ಟೆಂಬರ್ 14 ರಂದು ನೋಡಿದ್ದಾರೆ.

ಇದನ್ನೂ ಓದಿ : ಅತ್ಯಾಚಾರ ಸಂತ್ರಸ್ತೆಯಿಂದ ಪ್ರಧಾನಿ ಮೋದಿಗೆ ಪತ್ರ

ರಾಮು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಾರೆ, ಒಂದು ಶಿಫ್ಟ್ ಬೆಳಿಗ್ಗೆ 8 ರಿಂದ 11.30 ರವರೆಗೆ ಮತ್ತು ಎರಡನೇ ಶಿಫ್ಟ್ ಸಂಜೆ 5 ರಿಂದ ರಾತ್ರಿ 9.30 ರವರೆಗೆ. ಹಾಗೂ ಅವನ ನಡವಳಿಕೆ ಉತ್ತಮವಾಗಿದೆ ಎಂದು ಹೇಳಲಾಗುತ್ತಿದೆ. ಹತ್ರಾಸ್ ಸಂತ್ರಸ್ತೆಯನ್ನು ಸೆಪ್ಟೆಂಬರ್ 14 ರಂದು ಮೇಲ್ಜಾತಿಯ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಸೆಪ್ಟೆಂಬರ್ 29 ರಂದು ಆಕೆ ದೆಹಲಿ ಆಸ್ಪತ್ರೆಯಲ್ಲಿ ಮೃತಪಟ್ಟಳು. ದೇಶದಾದ್ಯಂತ ಆಕೆಗೆ ನ್ಯಾಯಕ್ಕಾಗಿ ಪ್ರತಿಭಟನೆಗಳು ನಡೆಯುತ್ತಿವೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile