ನಟಿ ಸುಧಾಚಂದ್ರನ್‌ಗೆ ಕ್ಷಮೆಯಾಚಿಸಿದ ಸಿಐಎಸ್‌ಎಫ್

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ನಟಿ ಮತ್ತು ನೃತ್ಯಗಾರ್ತಿ ಸುಧಾಚಂದ್ರನ್ ಅವರ ಕ್ಷಮೆ ಕೇಳಿದೆ. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಸುಧಾಚಂದ್ರನ್ ಅವರಿಗೆ ಅವಮಾನ ಮಾಡಲಾಗಿದೆ ಎನ್ನಲಾಗಿದೆ.

🌐 Kannada News :

ನವದೆಹಲಿ : ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ನಟಿ ಮತ್ತು ನೃತ್ಯಗಾರ್ತಿ ಸುಧಾಚಂದ್ರನ್ ಅವರ ಕ್ಷಮೆ ಕೇಳಿದೆ. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಸುಧಾಚಂದ್ರನ್ ಅವರಿಗೆ ಅವಮಾನ ಮಾಡಲಾಗಿದೆ ಎನ್ನಲಾಗಿದೆ. ಭದ್ರತಾ ಕರ್ತವ್ಯದಲ್ಲಿರುವ ಸಿಐಎಸ್‌ಎಫ್ ಅಧಿಕಾರಿಯೊಬ್ಬರು ನಟಿ ಸುಧಾಚಂದ್ರನ್ ಅವರಿಗೆ ಕೃತಕ ಕಾಲನ್ನು ತೋರಿಸುವಂತೆ ಕೇಳಿದ್ದರು. ಘಟನೆಯಿಂದ ಅಸಮಾಧಾನಗೊಂಡಿದ್ದ ಸುಧಚಂದ್ರನ್ ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿಯನ್ನು ಪ್ರಶ್ನಿಸಿ ವಿಡಿಯೋ ಪೋಸ್ಟ್ ಮಾಡಿದ್ದರು.

ಈ ಘಟನೆ ಬಗ್ಗೆ ಸುಧಾಚಂದ್ರನ್ ಕ್ರಮ ಖಂಡಿಸಿ ವಿಡಿಯೋ ಹರಿಬಿಟ್ಟಿದ್ದರು, ಮಹಿಳೆಯರನ್ನು ಗೌರವಿಸುವ ರೀತಿ ಸರಿಯೇ… ನಾನು ನೃತ್ಯದ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದೇನೆ ಏನ ಮೂಲಕ ವಿಡಿಯೋ ದಲ್ಲಿ ಅಸಮಾಧಾನ ವ್ಯಕ್ತ ಪಡಿಸಿದ್ದರು.

ಈ ವಿಡಿಯೋಗೆ ಸಿಐಎಸ್‌ಎಫ್ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದೆ. “ನಿಮಗೆ ಉಂಟಾದ ಅನಾನುಕೂಲತೆಗಾಗಿ ನಮ್ಮನ್ನು ಕ್ಷಮಿಸಿ. ಪ್ರೋಟೋಕಾಲ್ ಪ್ರಕಾರ, ಕೃತಕ ಅಂಗಗಳನ್ನು ತೆಗೆದು ಭದ್ರತೆಗಾಗಿ ಪರಿಶೀಲಿಸಬೇಕಾಗುತ್ತದೆ. ಆದರೆ ಪ್ರಯಾಣಿಕರನ್ನು ಅವಮಾನಿಸುವ ಉದ್ದೇಶವಿಲ್ಲ ಎಂದು ಸಿಐಎಸ್ಎಫ್ ಟ್ವೀಟ್ ಮಾಡಿದೆ.

ನಟಿ ಸುಧಾಚಂದ್ರನ್ ಈ ಹಿಂದೆ ರಸ್ತೆ ಅಪಘಾತದಲ್ಲಿ ತನ್ನ ಕಾಲು ಕಳೆದುಕೊಂಡಿದ್ದರು.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today