ಪಾಕಿಸ್ತಾನ ಐಎಸ್‌ಐ ಮಹಿಳಾ ಅಧಿಕಾರಿ ಜೊತೆ ಭಾರತ ಸೈನಿಕ ನಂಟು!

ಭಾರತೀಯ ಸೇನಾ ಯೋಧನೊಬ್ಬ ಅಧಿಕೃತ ರಹಸ್ಯ ದಾಖಲೆಗಳನ್ನು ಪಾಕಿಸ್ತಾನದ ಮಹಿಳೆಗೆ ಕಳುಹಿಸುತ್ತಿದ್ದ ಹಿನ್ನೆಲೆ ಆತನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಸೇನಾ ಯೋಧ ಫಿರೋಜ್‌ಪುರ ಕಂಟೋನ್ಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಅಮೃತಸರ: ಭಾರತೀಯ ಸೇನಾ ಯೋಧನೊಬ್ಬ ಅಧಿಕೃತ ರಹಸ್ಯ ದಾಖಲೆಗಳನ್ನು ಪಾಕಿಸ್ತಾನದ ಮಹಿಳೆಗೆ ಕಳುಹಿಸುತ್ತಿದ್ದ ಹಿನ್ನೆಲೆ ಆತನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಸೇನಾ ಯೋಧ ಫಿರೋಜ್‌ಪುರ ಕಂಟೋನ್ಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಮಹಿಳಾ ಅಧಿಕಾರಿಯೊಬ್ಬರು ಭಾರತೀಯ ಸೇನೆಯ ಸೈನಿಕನನ್ನು ಹನಿಟ್ರ್ಯಾಪ್‌ಗೆ ಬೀಳಿಸಿದ್ದಾರೆ. ಆ ಮೂಲಕ ಆತನಿಂದ ಅಧಿಕೃತ ಗೌಪ್ಯ ಮಾಹಿತಿಯನ್ನು ಪಡೆಯುವುದು ಆಕೆಯ ಕೆಲಸ.

ಫಿರೋಜ್‌ಪುರ್ ಕಂಟೋನ್ಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕನನ್ನು ಪಾಕಿಸ್ತಾನ ಮಹಿಳಾ ಗುಪ್ತಚರ ಅಧಿಕಾರಿ (ಪಿಐಒ) ಸಿದ್ರಾ ಖಾನ್ ಅವರು 2020 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭೇಟಿಯಾದರು.

ಇಬ್ಬರೂ ಸ್ನೇಹಿತರಾದರು ಮತ್ತು ಕ್ರಮೇಣ ಚಾಟ್ ಮಾಡುವುದು, ಹರಟೆ ಹೊಡೆಯುವುದು ಶುರುವಾಯಿತು. ನಂತರ ಆಕೆಯ ಕೋರಿಕೆಯಂತೆ ಆತ ಭಾರತದ ಮಿಲಿಟರಿ ದಾಖಲೆಗಳನ್ನು ಕಳುಹಿಸುತ್ತಿದ್ದಾನೆ. ಪಂಜಾಬ್ ಪೊಲೀಸರ ರಾಜ್ಯ ವಿಶೇಷ ಕಾರ್ಯಾಚರಣೆ ಕೋಶ (ಎಸ್‌ಎಸ್‌ಒಸಿ), ಆತನ ವರ್ತನೆಯ ಬಗ್ಗೆ ಸಂಶಯ ಹೊಂದಿದ್ದು, ಆತನ ದಿನಚರಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಆತ ಪಾಕಿಸ್ತಾನದ ಅಧಿಕಾರಿಗೆ ರಹಸ್ಯ ಮಾಹಿತಿಯನ್ನು ರವಾನಿಸುತ್ತಿರುವುದು ದೃಡಪಟ್ಟ ನಂತರ ಶನಿವಾರ ಬಂಧಿಸಲಾಯಿತು.

ಬಂಧಿತ ಸೈನಿಕನ ಹೆಸರು ಕೃನಾಲ್ ಕುಮಾರ್ ಬರಿಯಾ. ಆತ ಗುಜರಾತಿನ ಪಂಚಮಹಲ್ ಜಿಲ್ಲೆಯ ದಮನೋಡ್ ಹಳ್ಳಿಯ ನಿವಾಸಿ. ಕಳೆದ ಒಂದೂವರೆ ವರ್ಷದಿಂದ ಆತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಸಿದ್ರಾ ಖಾನ್‌ಗೆ ರಹಸ್ಯ ಮಾಹಿತಿಯನ್ನು ನೀಡುತ್ತಿದ್ದ.

ಎಸ್‌ಎಸ್‌ಒಸಿ ಮೂಲಗಳ ಪ್ರಕಾರ, ಕೃನಾಲ್ ಅವರು ಫೇಸ್‌ಬುಕ್, ವಾಟ್ಸಾಪ್ ಮತ್ತು ಇತರ ಸಾಮಾಜಿಕ ತಾಣಗಳ ಮೂಲಕ ಪಾಕಿಸ್ತಾನಿ ಗುಪ್ತಚರ ಏಜೆನ್ಸಿಗಳ ಏಜೆಂಟ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.

ಆತ ಗೌಪ್ಯ ಮಾಹಿತಿಯ ಬದಲಾಗಿ ಭಾರೀ ಮೊತ್ತದ ಹಣ ಪಡೆಯುತ್ತಿದ್ದದ್ದು ಕಂಡುಬಂದಿದೆ. ಎಸ್‌ಎಸ್‌ಒಸಿ ತಂಡ ಕೃನಾಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.