ಎಎಪಿ ಶಾಸಕರ ಮೇಲೆ ಗುಂಡಿನ ದಾಳಿ, ದೆಹಲಿಯಲ್ಲಿ ಗಲಭೆ, ಓರ್ವ ಸಾವು

Attack on AAP MLA Naresh Yadav, Aam Aadmi Party worker died in Delhi

ಕನ್ನಡ ನ್ಯೂಸ್ ಟುಡೇIndia News 

ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಗಳಿಸಿದ ವಿಚಾರ ನಮಗೆಲ್ಲಾ ತಿಳಿದೇ ಇದೆ.. ಈ ವಿಜಯದಿಂದಾಗಿ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಎಲ್ಲರೂ ಸಂತೋಷದಲ್ಲಿ ಮಗ್ನರಾಗಿದ್ದರು. ಈ ಸಮಯದಲ್ಲಿ ತಮ್ಮ ವಿಜಯೋತ್ಸವ ರ್ಯಾಲಿಯಲ್ಲಿ ಭಾಗವಹಿಸಿದ್ದ ಎಎಪಿ ಶಾಸಕನ ಮೇಲೆ ಅಪರಿಚಿತ ವ್ಯಕ್ತಿ ಗುಂಡು ಹಾರಿಸಿದ್ದಾನೆ. ಈ ಘಟನೆ ಮೆಹ್ರೌಲಿ ಕ್ಷೇತ್ರದಲ್ಲಿ ವರದಿಯಾಗಿದೆ. 

ಫಲಿತಾಂಶಗಳನ್ನು ಬಹಿರಂಗಪಡಿಸಿದ ನಂತರ, ಎಎಪಿ ಶಾಸಕ ನರೇಶ್ ಯಾದವ್ ದೈವಿಕ ಭೇಟಿಗಾಗಿ ದೇವಸ್ಥಾನಕ್ಕೆ ತೆರಳಿದ್ದರು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಸಹ ಉಪಸ್ಥಿತರಿದ್ದರು. ದೇವಸ್ಥಾನದಿಂದ ಹಿಂದಿರುಗುವ ವೇಳೆ ಅಪರಿಚಿತ ವ್ಯಕ್ತಿ ಗುಂಡು ಹಾರಿಸಿದ್ದಾನೆ.

ಈ ಘಟನೆಯಿಂದ, ಉಪಸ್ಥಿತರಿದ್ದ ಜನರು ಒಮ್ಮೆಲೇ ಆಘಾತಕ್ಕೊಳಗಾಗಿದ್ದಾರೆ. ಘಟನೆಯಿಂದ ಅಶೋಕ್ ಮನ್ ಎಂಬ ಕಾರ್ಯಕರ್ತ ಮೃತಪಟ್ಟಿದ್ದಾನೆ. ಸಧ್ಯ ಶಾಸಕರು ಸುರಕ್ಷಿತವಾಗಿದ್ದಾರೆ. ಈ ಕುರಿತು, ಎಎಪಿ ಪ್ರತಿಕ್ರಿಹಿಸಿದ್ದು ಫಲಿತಾಂಶಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲದ ಜನ ಈ ಕೃತ್ಯ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತನ ಸಾವಿನ ಬಗ್ಗೆ ಎಎಪಿ ವಿಷಾದ ವ್ಯಕ್ತಪಡಿಸಿದೆ.

Web Title : Attack on AAP MLA Naresh Yadav, Aam Aadmi Party worker died in Delhi
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ  Facebook  | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.