Welcome To Kannada News Today

ಬೆಂಗಳೂರು ಪಾದರಾಯನಪುರ ಗಲಾಟೆ ಪ್ರಕರಣ, ಪಕ್ಕಾ ಪ್ಲಾನ್ , 54 ಜನರ ಬಂಧನ

ಬೆಂಗಳೂರು ಪಾದರಾಯನಪುರದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 54 ಜನರ ಬಂಧನವಾಗಿದೆ, ಪಾದರಾಯನಪುರ ಗಲಾಟೆಗೆ ಮಹಿಳೆ ಕಾರಣ ಎಂಬುದು ತಳಿದು ಬಂದಿದೆ. ನೆನ್ನೆ ಬೆಂಗಳೂರು ಪಾದರಾಯನಪುರ ದಲ್ಲಿ ನಡೆದ ಘಟನೆ.

🌐 Kannada News :

ಬೆಂಗಳೂರು ಪಾದರಾಯನಪುರ ಗಲಾಟೆ ಪ್ರಕರಣ – Bangalore Padarayanapura Violence case

ಬೆಂಗಳೂರು: ಕರೋನ ಹಾಟ್‌ಸ್ಪಾಟ್‌ ಆಗಿರುವ ಬೆಂಗಳೂರಿನ ಪಾದರಾಯನಪುರದಲ್ಲಿ ಕ್ವಾರಂಟೈನ್ ಆದವರ ಪರಿಶೀಲನೆಗೆ ಪೊಲೀಸ್ ಹಾಗೂ ಅರೋಗ್ಯ ಸಿಬ್ಬಂದಿ ಹೋದಾಗ ಕಿಡಿಗೇಡಿಗಳು ಅವರ ಮೇಲೆ ದಾಂಧಲೆ ನಡೆಸಲು ಮುಂದಾಗಿದ್ದರು.

ಪಾದರಾಯನಪುರದಲ್ಲಿ ಕೊರೋನಾ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಗೆ ಕಳುಹಿಸಲು ಮುಂದಾಗಿದ್ದ ಪೊಲೀಸರು, ವೈದ್ಯಕೀಯ, ಬಿಬಿಎಂಪಿ ಸಿಬ್ಬಂದಿಗಳ ಮೇಲೆ ಉದ್ರಿಕ್ತ ಗುಂಪು ಹಲ್ಲೆ ನಡೆಸಲು ಈ ಮೊದಲೇ ಪೂರ್ವನಿಯೋಚಿತ ಪ್ಲಾನ್ ಮಾಡಿದ್ದರು ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಪಾದರಾಯನಪುರದಲ್ಲಿ ಗಲಾಟೆ ಪ್ರಕರಣ, ಪಕ್ಕಾ ಪ್ಲಾನ್. ನಾಲ್ಕು ತಂಡಗಳಾಗಿ ದಾಳಿ

ಭಾನುವಾರ ರಾತ್ರಿ ವಾಹನಗಳ ಸಹಿತ ಏಕಾಏಕಿ ಗುಂಪುಕಟ್ಟಿಕೊಂಡು ಬಂದ ಈ ಕಿಡಿಗೇಡಿಗಳು ಚೆಕ್‌ಪೋಸ್ಟ್ ಪುಡಿ ಮಾಡಿ ದಾಂಧಲೆ ಎಸಗಿದ್ದಾರೆ. ಒಮ್ಮೆಲೇ ಅಷ್ಟೊಂದು ಜನರು ಒಟ್ಟುಗೂಡುವುದರ ಹಿಂದೆ ಪೂರ್ವನಿಯೋಜಿತ ಪಕ್ಕಾ ಪ್ಲಾನ್ ಮಾಡಿ ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಈ ಸಂಬಂಧ ಇಬ್ಬರನ್ನು ರಾತ್ರಿಯೇ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಸದ್ಯ ಸಿಸಿಟಿವಿ ವಿಡಿಯೋ ತುಣಿಕುಗಳನ್ನು ಆಧರಿಸಿ ೫೪ ಜನರನ್ನು ಬಂಧಿಸಲಾಗಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಪಾದರಾಯನಪುರದಲ್ಲಿ ಗಲಾಟೆಗೆ ಕುಮ್ಮಕ್ಕು ಕೊಟ್ಟಿದ್ದು ಮಹಿಳೆ !

ಕಿಡಿಗೇಡಿಗಳ ದಾಳಿಯ ವಿಡಿಯೋ ತುಣಿಕಿನಲ್ಲಿ ಮಹಿಳೆಯೊಬ್ಬಳು ಸೇರಿದ್ದು, ಆ ಮಹಿಳೆಯೇ ಈ ಕೃತ್ಯದ ಪ್ರಮುಖ ಪಾತ್ರದಾರಿ ಎಂದು ಹೇಳಲಾಗುತ್ತಿದೆ, ಹಾಗೂ ವಿಡಿಯೋ ತುಣಿಕಿನಲ್ಲಿ ಆ ಮಹಿಳೆ ಯುವಕರಿಗೆ ನಿರ್ದೇಶನ ನೀಡುತ್ತಿರುವುದು ಕಾಣುತ್ತದೆ. ಹಾಗೂ ಮಹಿಳೆಯನ್ನು ಪರಿಜಾ ಎಂದು ಗುರುತಿಸಲಾಗಿದ್ದು ಪೊಲೀಸರು ಆಕೆಯನ್ನು ಸಹ ವಶಕ್ಕೆ ಪಡೆದಿದ್ದಾರೆ. ಹಾಗೂ ಆ ಮಹಿಳೆ ಗಾಂಜಾ ಮಾರಾಟಗಾರ್ತಿ ಎಂದು ತಿಳಿದು ಬಂದಿದ್ದು ಕೃತ್ಯಕ್ಕೆ ಗಾಂಜಾ ಸೇವನೆ ಕಾರಣವೇ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಾಗಿದೆ.

ಈ ಸಂಬಂಧ ಆರೋಗ್ಯ ಅಧಿಕಾರಿಗಳು ಒಂದು ಪ್ರಕರಣ ದಾಖಲಿಸಿದ್ದಾರೆ, ಮತ್ತು ಪೊಲೀಸರು ನಾಲ್ಕು ಪ್ರಕರಣ ದಾಖಲಿಸಿದ್ದಾರೆ, ಮತ್ತು ಈಗಾಗಲೇ ೫೪ ಜನರನ್ನು ಬಂಧಿಸಿರುವ ಪೊಲೀಸರು, ಇನ್ನಷ್ಟು ಕಿಡಿಗೇಡಿಗಳ ಪತ್ತೆ ಹಚ್ಚುತ್ತಿದ್ದಾರೆ, ಮೊಬೈಲ್ ಕಾಂಟಾಕ್ಟ್ ಲಿಸ್ಟ್ , ಮತ್ತು ಕರೆಗಳ ಟ್ರೇಸ್ ಮಾಡುತ್ತಿರುವ ಪೊಲೀಸರು ಈಗಾಗಲೇ ಬಂಧಿಸಿರುವ ಕಿಡಿಗೇಡಿಗಳನ್ನು ತೀವ್ರ ವಿಚಾರಣೆ ನಡೆಸಿದ್ದಾರೆ.

WebTitle : Bangalore Padarayanapura Violence case, 54 people arrested

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.