ನವೆಂಬರ್‌ ತಿಂಗಳು 17 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ!

ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ. ನವೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ಸರಣಿ ರಜೆ ಇರುತ್ತದೆ.

ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ, ನವೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ಸರಣಿ ರಜೆ ಇರುತ್ತದೆ. ಆರ್‌ಬಿಐ ಪಟ್ಟಿಯ ಪ್ರಕಾರ, ಪ್ರಮುಖ ಹಬ್ಬಗಳು ಮತ್ತು ಸಾರ್ವಜನಿಕ ರಜಾದಿನಗಳು ಸೇರಿದಂತೆ ಒಟ್ಟು 17 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಇದು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಸುದ್ದಿ. ಆದಾಗ್ಯೂ ಇದು ಸಂಪೂರ್ಣವಾಗಿ ನಿಜವಲ್ಲ. ಏಕೆಂದರೆ ಆ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸುವುದಿಲ್ಲ.

ಪಟ್ಟಿಯಲ್ಲಿ ರಾಜ್ಯಗಳು ಬದಲಾಗುತ್ತವೆ. ಸ್ಥಳೀಯ ಹಬ್ಬದ ದಿನಗಳಲ್ಲಿ ಆಯಾ ರಾಜ್ಯಗಳಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ಬ್ಯಾಂಕ್‌ಗಳಿಗೆ ನವೆಂಬರ್‌ನಲ್ಲಿ 17 ರಜೆಗಳಿವೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ 17 ದಿನಗಳ ಕಾಲ ಬ್ಯಾಂಕ್ ಸಂಪೂರ್ಣ ಕೆಲಸ ಮಾಡುವುದಿಲ್ಲ ಎಂಬ ಪ್ರಚಾರ ನಡೆಯುತ್ತಿದೆ.

ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಕೆಲವು ರಾಜ್ಯಗಳಲ್ಲಿ, ದೀಪಾವಳಿ, ಗುರುನಾನಕ್ ಜಯಂತಿ ಮತ್ತು ಕಾರ್ತಿಕ ಪೂರ್ಣಿಮೆಯ ಸಂದರ್ಭದಲ್ಲಿ ಬ್ಯಾಂಕುಗಳಿಗೆ ಎರಡು ದಿನಗಳ ರಜೆ ಇರುತ್ತದೆ.

ಸಾಮಾನ್ಯ ರಜಾ ದಿನಗಳು, ಶನಿವಾರ ಮತ್ತು ಭಾನುವಾರ ಸೇರಿದಂತೆ ಒಟ್ಟು 8 ದಿನಗಳ ಕಾಲ ಬ್ಯಾಂಕ್ ಗಳು ಮುಚ್ಚಿರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಅಪಪ್ರಚಾರವನ್ನು ನಂಬಬೇಡಿ ಎಂದು ಬ್ಯಾಂಕ್ ಅಧಿಕಾರಿಗಳು ಗ್ರಾಹಕರಿಗೆ ಸೂಚಿಸಿದ್ದಾರೆ.