Welcome To Kannada News Today

ಬಿಹಾರ ಚುನಾವಣೆ : ಕಾಂಗ್ರೆಸ್ ಸ್ಟಾರ್ ಪ್ರಚಾರಕರು ಯಾರು ? ಪಟ್ಟಿ ಇಲ್ಲಿದೆ

Bihar elections - Congress star campaigners : ಕಾಂಗ್ರೆಸ್ ಘೋಷಿಸಿದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ 30 ಹೆಸರುಗಳಿವೆ.

🌐 Kannada News :

( Kannada News ) : ಪಾಟ್ನಾ: ಒಂದು ಕಡೆ ಬಿಹಾರದಲ್ಲಿ ಚುನಾವಣೆ ನಡೆಯಲಿದ್ದು, ಮತ್ತೊಂದೆಡೆ ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಎಲ್ಲಾ ಪಕ್ಷಗಳು ಚುನಾವಣಾ ಭರಾಟೆಯಲ್ಲಿ ಮುಳುಗಿವೆ. ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಪರ ಶತ್ರುಘನ್ ಸಿನ್ಹಾ, ರಾಜ್ ಬಬ್ಬರ್ ಮತ್ತು ಇತರ ಪ್ರಸಿದ್ಧ ವ್ಯಕ್ತಿಗಳನ್ನು ಸ್ಟಾರ್ ಪ್ರಚಾರಕರಾಗಿ ಕಣಕ್ಕಿಳಿಸಲಿದೆ.

ಕಾಂಗ್ರೆಸ್ ಘೋಷಿಸಿದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ 30 ಹೆಸರುಗಳಿವೆ. ಕಾಂಗ್ರೆಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಿದೆ.

bihar-elections-who-are-the-congress-star-campaigners
Bihar elections who are the congress star campaigners

ಅವರಲ್ಲಿ ಪಕ್ಷದ ಮುಖಂಡರಾದ ಗುಲಾಮ್ ನಬಿ ಆಜಾದ್, ಸಚಿನ್ ಪೈಲಟ್ ಮತ್ತು ಸಂಜಯ್ ನಿರುಪಮ್ ಸಹ ಇದ್ದಾರೆ. ಅವರು ಮೂರು ಹಂತಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಈ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಇದ್ದಾರೆ. ಈ ಪಟ್ಟಿಯಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಹೆಸರುಗಳೂ ಸೇರಿವೆ.

ಕೊರೊನಾ ಭಯದಿಂದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಚುನಾವಣಾ ಪ್ರಚಾರದಿಂದ ದೂರವಿರವು ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಆದರೆ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಎರಡು ಸಾರ್ವಜನಿಕ ಸಭೆಗಳು ಮತ್ತು ಆರು ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ಕೂಡ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಬಹುದು ಎನ್ನಲಾಗುತ್ತಿದೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile