ಬಿಹಾರ: ಗಾಳಿ ಮಳೆಗೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿದೆ
ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ನಿರ್ಮಾಣ ಹಂತದ ಸೇತುವೆ ಕುಸಿದಿದೆ
ಬಿಹಾರ: ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ನಿರ್ಮಾಣ ಹಂತದ ಸೇತುವೆ ಕುಸಿದಿದೆ. ಭಾರೀ ಗಾಳಿ ಮಳೆಗೆ ನಿರ್ಮಾಣ ಹಂತದ ಸೇತುವೆ ಕುಸಿದು ಬಿದ್ದ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಖಗಾರಿಯಾ ಮತ್ತು ಭಾಗಲ್ಪುರ ಜಿಲ್ಲೆಗಳನ್ನು ಸಂಪರ್ಕಿಸುವ ನಾಲ್ಕು ಪಥದ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಸಿಎಂ ನಿತೀಶ್ ಕುಮಾರ್ ಸರ್ಕಾರ ಅಗುವಾನಿ-ಸುಲ್ತಂಗಂಜ್ ಸೇತುವೆಯ ನಿರ್ಮಾಣವನ್ನು ಮಹತ್ವಾಕಾಂಕ್ಷೆಯ ಯೋಜನೆ ಎಂದು ಪರಿಗಣಿಸಿದೆ.
ಶುಕ್ರವಾರ (ಏಪ್ರಿಲ್ 29,2022) ಮಧ್ಯರಾತ್ರಿಯ ನಂತರ ಗುಡುಗು ಸಹಿತ ಮಳೆಯಿಂದಾಗಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಭಾಗವು ಕುಸಿದಿದೆ.
2014ರ ಫೆ.23ರಂದು ಸಿಎಂ ನಿತೀಶ್ ಕುಮಾರ್ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಂದಿನಿಂದ ಅದರ ನಿಧಾನಗತಿಯ ನಿರ್ಮಾಣದ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ರಾಷ್ಟ್ರೀಯ ಹೆದ್ದಾರಿ 31 ಮತ್ತು 107ಕ್ಕೆ ಸಂಪರ್ಕ ಕಲ್ಪಿಸುವ 3,160 ಮೀಟರ್ ಉದ್ದದ ಸೇತುವೆಯನ್ನು ಅಂದಾಜು 1,710 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ಟೋಲ್ ಪ್ಲಾಜಾ ಮತ್ತು ಡಾಲ್ಫಿನ್ ವ್ಯೂ ಪಾಯಿಂಟ್ನೊಂದಿಗೆ ನಿರ್ಮಿಸಲಾಗುತ್ತಿರುವ ಸೇತುವೆಯು ಸುಲ್ತಂಗಂಜ್, ಖಗರಿಯಾ, ಸಹರ್ಸಾ, ಸುಪಾಲ್, ಮಾಧೇಪುರ ಮತ್ತು ಇತರ ಜಿಲ್ಲೆಗಳ ನಡುವಿನ ಅಂತರವನ್ನು ಬಹಳವಾಗಿ ಕಡಿಮೆ ಮಾಡುತ್ತದೆ.
Bihar Potion Of Under Construction Bridge Collapses Due To Thunderstorm In Bhagalpur
Bihar | Portion of under-construction bridge collapses due to thunderstorm in Sultanganj in Bhagalpur dist last night
We've informed the CM & investigation will be initiated. It seems degraded quality of material was used for construction: Sultanganj JDU MLA Lalit Narayan Mandal pic.twitter.com/B1vKvINNBU
— ANI (@ANI) April 30, 2022
Follow Us on : Google News | Facebook | Twitter | YouTube