ಇಂದು ಬಿಪಿನ್ ರಾವತ್ ಅಂತ್ಯಕ್ರಿಯೆ

ರಾವತ್ ದಂಪತಿಯ ಅಂತ್ಯಕ್ರಿಯೆ ಶುಕ್ರವಾರ ಬ್ರಾರ್ ಸ್ಕ್ವೇರ್ ಸ್ಮಶಾನದಲ್ಲಿ ನಡೆಯಲಿದೆ. ಪಾರ್ಥಿವ ಶರೀರವನ್ನು ಬೆಳಿಗ್ಗೆ 11 ಗಂಟೆಯಿಂದ ಜನರ ದರ್ಶನಕ್ಕೆ ಇಡುತ್ತಾರೆ. ಮಧ್ಯಾಹ್ನ 12.30ರ ನಂತರ ಅಧಿಕಾರಿಗಳಿಗೆ ಅವಕಾಶ ನೀಡಲಾಗುವುದು.

ನವದೆಹಲಿ: ಬಿಪಿನ್ ರಾವತ್, ಪತ್ನಿ ಮಧುಲಿಕಾ ಸೇರಿದಂತೆ 11 ಮಂದಿಯ ಮೃತದೇಹಗಳನ್ನು ಗುರುವಾರ ರಾತ್ರಿ ದೆಹಲಿಯ ಪಾಲಂ ವಾಯುನೆಲೆಗೆ ರವಾನಿಸಲಾಗಿದೆ.

ರಾವತ್ ದಂಪತಿಯ ಅಂತ್ಯಕ್ರಿಯೆ ಶುಕ್ರವಾರ ಬ್ರಾರ್ ಸ್ಕ್ವೇರ್ ಸ್ಮಶಾನದಲ್ಲಿ ನಡೆಯಲಿದೆ. ಪಾರ್ಥಿವ ಶರೀರವನ್ನು ಬೆಳಿಗ್ಗೆ 11 ಗಂಟೆಯಿಂದ ಜನರ ದರ್ಶನಕ್ಕೆ ಇಡುತ್ತಾರೆ. ಮಧ್ಯಾಹ್ನ 12.30ರ ನಂತರ ಅಧಿಕಾರಿಗಳಿಗೆ ಅವಕಾಶ ನೀಡಲಾಗುವುದು.

ಮಧ್ಯಾಹ್ನ 2 ಗಂಟೆಗೆ ಕಾಮರಾಜ ಮಾರ್ಗದ ಬಂಗಲೆ ನಂ.3ರಿಂದ ರಾವತ್ ದಂಪತಿಯ ಅಂತಿಮ ಯಾತ್ರೆ ಆರಂಭವಾಗಲಿದೆ. ಸಂಪೂರ್ಣ ಸೇನಾ ವಿಧಿವಿಧಾನಗಳೊಂದಿಗೆ ರಾವತ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ರಾಜನಾಥ್ ಸಂಸತ್ತಿನಲ್ಲಿ ಘೋಷಿಸಿದರು.

Stay updated with us for all News in Kannada at Facebook | Twitter
Scroll Down To More News Today