ದೇಶದಲ್ಲಿ ಹಕ್ಕಿ ಜ್ವರದ ಭೀತಿ: ರಾಜ್ಯಗಳಿಗೆ ಕೇಂದ್ರದ ಸೂಚನೆ

ದೇಶದಲ್ಲಿ ಹಕ್ಕಿ ಜ್ವರ ಪರಿಸ್ಥಿತಿ ಕುರಿತಂತೆ ಸಭೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ.

ದೇಶದಲ್ಲಿ ಹಕ್ಕಿ ಜ್ವರದ ಭೀತಿ: ರಾಜ್ಯಗಳಿಗೆ ಕೇಂದ್ರದ ಸೂಚನೆ

(Kannada News) : ನವದೆಹಲಿ : ದೇಶದಲ್ಲಿ ಹಕ್ಕಿ ಜ್ವರ ಪರಿಸ್ಥಿತಿ ಕುರಿತಂತೆ ಸಭೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ.

ಕೇರಳ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಕೋಳಿ, ಕಾಗೆಗಳು ಮತ್ತು ವಲಸೆ ಹಕ್ಕಿಗಳ ಅಸಹಜ ಸಾವಿನ ಹಿನ್ನೆಲೆಯಲ್ಲಿ ಕೇಂದ್ರ ಪಶುಸಂಗೋಪನೆ ಮತ್ತು ಡೈರಿ ಸಚಿವಾಲಯದ ಅಡಿಯಲ್ಲಿ ಇತ್ತೀಚೆಗೆ ಉನ್ನತ ಮಟ್ಟದ ಸಭೆ ನಡೆಸಲಾಯಿತು.

ಹಕ್ಕಿ ಜ್ವರದ ಸ್ಥಿತಿಗತಿ ಅಧ್ಯಯನ ಅಧ್ಯಯನ, ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕುರಿತು ಸರಿಯಾದ ನಿರ್ದೇಶನ ನೀಡಲು ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗಿದೆ.

ರೈತರು ಅಥವಾ ಕೋಳಿ ಸಾಕಾಣಿಕೆಗಾರರು ಮತ್ತು ಸಾರ್ವಜನಿಕರಿಗೆ (ಮೊಟ್ಟೆ ಮತ್ತು ಕೋಳಿ ಗ್ರಾಹಕರು) ರೋಗದ ಅರಿವು ಬಹಳ ಮುಖ್ಯ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Web Title : Bird flu situation in the country

Scroll Down To More News Today