ಕರ್ನಾಟಕದ ನಂತರ ಮಧ್ಯಪ್ರದೇಶದ ಮೇಲೆ ಬಿಜೆಪಿ ಕಣ್ಣು

BJP eyes over Madhya Pradesh after Karnataka

ಕರ್ನಾಟಕದ ನಂತರ ಮಧ್ಯಪ್ರದೇಶದ ಮೇಲೆ ಬಿಜೆಪಿ ಕಣ್ಣು- BJP eyes over Madhya Pradesh after Karnataka

ಕರ್ನಾಟಕದ ನಂತರ ಮಧ್ಯಪ್ರದೇಶದ ಮೇಲೆ ಬಿಜೆಪಿ ಕಣ್ಣು

ಭೋಪಾಲ್ : ಹದಿನಾಲ್ಕು ತಿಂಗಳ ಕರ್ನಾಟಕ ಸಮ್ಮಿಶ್ರ ಸರ್ಕಾರ ಪತನದ ನಂತರ ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಮತ್ತೊಂದು ರಾಜ್ಯವಾದ ಮಧ್ಯಪ್ರದೇಶದ ಮೇಲೆ ಕಣ್ಣು ಬಿದ್ದಿದೆ ? ಎಂದು ಮಧ್ಯಪ್ರದೇಶ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಜೀತು ಪಟ್ವಾರಿ ಹೇಳಿಕೆ ನೀಡಿದ್ದಾರೆ.

ವಿಶ್ವಾಸಾರ್ಹ ಪರೀಕ್ಷೆಯಲ್ಲಿ ಕರ್ನಾಟಕ ಸರ್ಕಾರ ಪತನದ ನಂತರ, ಮಧ್ಯಪ್ರದೇಶದ ಮೇಲೆ ನಿಯಂತ್ರಣ ಹೇರಲು ಮುಂದಾಗಿದೆ, ಬಿಜೆಪಿ ಅದಾಗಲೇ ಕರ್ನಾಟಕದಂತೆ ಇಲ್ಲಿಯೂ ಸಹ ಯಾವ ರೀತಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಮಾಡಬೇಕೆಂಬುದರ ಮೇಲೆ ಬಾರಿ ಸಂಚನ್ನು ರೂಪಿಸಿದೆ, ಸರ್ಕಾರಕ್ಕೆ ಎಲ್ಲಾ ರೀತಿಯ ಸಿಲುಕುಗಳನ್ನು ನೀಡುತ್ತಲೇ ಇದೆ ಎಂದು ಪಟ್ವಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ, ಇಂತಹ ಸಂಚುಗಳು ಕರ್ನಾಟಕ ಎದುರಿಸದೆ ಇರಬಹುದು, ಆದರೆ ಇಲ್ಲಿ ಇರುವುದು ಕಮಲನಾಥ್ ಸರ್ಕಾರ, ಕುಮಾರಸ್ವಾಮಿಯ ಸರ್ಕಾರವಲ್ಲ ಎಂದು ಜವಾಬು ನೀಡಿದ್ದಾರೆ. ಯಾವುದೇ ಕುತಂತ್ರಗಳಿಗೆ ಜಗ್ಗದ ಸರ್ಕಾರವಿದು, ಬಿಜೆಪಿಯ ಆಟ ಸಾಗಲು ನಾವು ಬಿಡುವುದಿಲ್ಲ ಎಂದಿದ್ದಾರೆ.

ಏತನ್ಮಧ್ಯೆ, ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ರಾಜ್ಯ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದ್ದಾರೆ. “ಸರ್ಕಾರ ಕುಸಿದರೆ, ನಾವು ಅದಕ್ಕೆ ಜವಾಬ್ದಾರರಾಗಿರುವುದಿಲ್ಲ. ಸರ್ಕಾರಗಳು ಬಿದ್ದರೆ, ಅದು ಕಾಂಗ್ರೆಸ್ ನ ದೌರ್ಬಲ್ಯವೋ ಹೊರತು ಬಿಜೆಪಿ ಕಾರಣವಲ್ಲ ಎಂದಿದ್ದಾರೆ. ಅಲ್ಲದೆ ಕಾಂಗ್ರೆಸ್‌ನಲ್ಲಿ ಇರುವ ಆಂತರಿಕ ವ್ಯತ್ಯಾಸಗಳಿಗೆ ಅವರ ಪಕ್ಷ ತತ್ತ ಬೆಲೆ ತೆರಬೇಕಾಗಿದೆ, ಯಾವುದೇ ಆಂತರಿಕ ಸಂಘರ್ಷವಿದ್ದರೆ, ಅದನ್ನು ಸರಿಪಡಿಸುವುದು, ಹಾಗೂ ಹೊಸ ಸರ್ಕಾರಕ್ಕೆ ಮುನ್ನುಡಿ ಬರೆಯುವುದು ನಮ್ಮ ಜವಾಬ್ದಾರಿಯಾಗಿದೆ, ”ಎಂದು ಚೌಹಾಣ್ ಹೇಳಿದ್ದಾರೆ.////

Web Title : BJP eyes over Madhya Pradesh after Karnataka
Get latest news from India and the world, National, International News in Kannada News Today