ಬಿಜೆಪಿ ಸಂಸದರ ಕಾರಿನ ಮೇಲೆ ರೈತರ ದಾಳಿ

ಬಿಜೆಪಿ ಸಂಸದ ರಾಮ್ ಚಂದರ್ ಜಾಂಗ್ರಾ ಅವರ ಕಾರಿನ ಮೇಲೆ ರೈತರು ದೊಣ್ಣೆಗಳಿಂದ ದಾಳಿ ಮಾಡಿದ್ದಾರೆ. ಸಂಸದ ರಾಮ್ ಚಂದರ್ ಶುಕ್ರವಾರ ಹರಿಯಾಣದ ಹಿಸಾರ್ ಜಿಲ್ಲೆಗೆ ತೆರಳುತ್ತಿದ್ದಾಗ ಕೆಲವು ರೈತರು ಅವರ ವಾಹನವನ್ನು ತಡೆದು ಪ್ರತಿಭಟಿಸಿದರು.

ನವದೆಹಲಿ: ಬಿಜೆಪಿ ಸಂಸದ ರಾಮ್ ಚಂದರ್ ಜಾಂಗ್ರಾ ಅವರ ಕಾರಿನ ಮೇಲೆ ರೈತರು ದೊಣ್ಣೆಗಳಿಂದ ದಾಳಿ ಮಾಡಿದ್ದಾರೆ. ಸಂಸದ ರಾಮ್ ಚಂದರ್ ಶುಕ್ರವಾರ ಹರಿಯಾಣದ ಹಿಸಾರ್ ಜಿಲ್ಲೆಗೆ ತೆರಳುತ್ತಿದ್ದಾಗ ಕೆಲವು ರೈತರು ಅವರ ವಾಹನವನ್ನು ತಡೆದು ಪ್ರತಿಭಟಿಸಿದರು.

ಕೇಂದ್ರ ತಂದಿರುವ ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕು ಎಂದು ರೈತರು ಆಗ್ರಹಿಸಿದರು. ಈ ವೇಳೆ ಸಂಸದರ ಕಾರಿಗೆ ರೈತರು ಹಾನಿಗೋಳಿಸಿದ್ದಾರೆ. ನಂತರ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಘರ್ಷಣೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಈ ವೇಳೆ ಮಾತನಾಡಿದ ಸಂಸದ ರಾಮ್ ಚಂದರ್ ಅವರ ಮೇಲೆ ಕೊಲೆ ಯತ್ನ ನಡೆದಿದೆ… ಅವರು ತಮ್ಮ ಕಾರ್ಯಕ್ರಮವನ್ನು ಮುಗಿಸುತ್ತಿದ್ದಂತೆ, ಕೆಲವು ಪುಂಡರು ಅವರ ವಾಹನವನ್ನು ತಡೆದಿದ್ದಾರೆ.. ನಂತರ ಅವರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ… ದಾಳಿಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ… ತಮ್ಮ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹರ್ಯಾಣ ಡಿಜಿಪಿಗೆ ದೂರು ನೀಡಿದ್ದೇನೆ ಎಂದರು.

Stay updated with us for all News in Kannada at Facebook | Twitter
Scroll Down To More News Today