Welcome To Kannada News Today

Arjun Singh: ಬಿಜೆಪಿ ಸಂಸದರ ಮನೆ ಬಳಿ ಬಾಂಬ್ ದಾಳಿ

BJP MP Arjun Singh: ಉಪಚುನಾವಣೆ ವೇಳಾಪಟ್ಟಿ ಬಿಡುಗಡೆಯಾದ ನಂತರ ಪಶ್ಚಿಮ ಬಂಗಾಳದಲ್ಲಿ ರಾಜಕೀಯದ ಬಿಸಿ ಹೆಚ್ಚಾಗಿದೆ. ಈ ಅನುಕ್ರಮದಲ್ಲಿ ಕೆಲವು ಪುಂಡರು ಬಿಜೆಪಿ ಸಂಸದನ ಮನೆ ಸಮೀಪ ಬಾಂಬ್ ದಾಳಿ ನಡೆಸಿದ್ದಾರೆ

🌐 Kannada News :

bombs hurled outside BJP MP Arjun Singh house: ಕೋಲ್ಕತಾದಿಂದ 100 ಕಿ.ಮೀ ದೂರದಲ್ಲಿರುವ ಜಗತ್ದಾಲ್ ಪ್ರದೇಶದಲ್ಲಿರುವ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಮನೆ ಸಮೀಪ ಬಾಂಬ್ ದಾಳಿ ನಡೆದಿದೆ.

ಉಪಚುನಾವಣೆ ವೇಳಾಪಟ್ಟಿ ಬಿಡುಗಡೆಯಾದ ನಂತರ ಪಶ್ಚಿಮ ಬಂಗಾಳದಲ್ಲಿ ರಾಜಕೀಯದ ಬಿಸಿ ಹೆಚ್ಚಾಗಿದೆ. ಈ ಅನುಕ್ರಮದಲ್ಲಿ ಕೆಲವು ಪುಂಡರು ಬಿಜೆಪಿ ಸಂಸದನ ಮನೆ ಸಮೀಪ ಬಾಂಬ್ ದಾಳಿ ನಡೆಸಿದ್ದಾರೆ. ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮನೆ ಸಮೀಪವೇ 3 ಕಚ್ಚಾ ಬಾಂಬ್ ಎಸೆದು ಪರಾರಿಯಾಗಿದ್ದಾರೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಾರಕ್ ಪುರ ಪಟ್ಟಣದಲ್ಲಿರುವ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ನಿವಾಸದ ಮೇಲೆ ಬುಧವಾರ ಬೆಳಗ್ಗೆ ಕೆಲವು ಪುಂಡರು ಬಾಂಬ್ ದಾಳಿ ನಡೆಸಿದ್ದಾರೆ.

ಮನೆಯ ಮುಖ್ಯದ್ವಾರದ ಬಳಿ ದುಷ್ಕರ್ಮಿಗಳು ಮೂರು ಗ್ರೆನೇಡ್ ಗಳನ್ನು ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಅರ್ಜುನ್ ಸಿಂಗ್ ಕುಟುಂಬದ ಯಾವುದೇ ಸದಸ್ಯರು ಗಾಯಗೊಂಡಿಲ್ಲ ಎಂಬುದು ತಿಳಿದು ಬಂದಿದೆ.

ಘಟನೆ ಬಳಿಕ, ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ (Jagdeep Dhankhar) ಪ್ರತಿಕ್ರಿಯಿಸಿ, ಟ್ವೀಟ್ ಮಾಡಿದ್ದಾರೆ.

ಸಂಸದ ಅರ್ಜುನ್ ಸಿಂಗ್ ಅವರ ಮನೆಯ ಬಳಿ ಬಾಂಬ್ ಸ್ಫೋಟ ಸಂಭವಿಸಿದ್ದು, ಇದು ಕಳವಳಕಾರಿ ಸಂಗತಿಯಾಗಿದೆ ಎಂದು ರಾಜ್ಯಪಾಲರು ಟ್ವೀಟ್ ಮಾಡಿದ್ದಾರೆ. ಬಾಂಬ್ ಸ್ಫೋಟಗಳು ಭದ್ರತೆಯ ಬಗ್ಗೆ ಆತಂಕವನ್ನು ಹೆಚ್ಚಿಸಿವೆ. ಪಶ್ಚಿಮ ಬಂಗಾಳ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುತ್ತಾರೆ ಎಂದು ಆಶಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇನ್ನು ಘಟನೆ ನಡೆದ ಸಂದರ್ಭದಲ್ಲಿ ಅರ್ಜುನ್ ಸಿಂಗ್ ಅವರು ಮನೆಯಲ್ಲಿರಲಿಲ್ಲ. ಆದರೆ ಅವರ ಕುಟುಂಬ ಸದಸ್ಯರು ಮಾತ್ರ ಮನೆಯೊಳಗೆ ಇದ್ದರು. ಸಿಂಗ್ ನಿವಾಸದ ಹೊರಗೆ ಪೊಲೀಸ್ ಕಾವಲಿದ್ದರೂ ಈ ಘಟನೆ ನಡೆದಿದೆ ಎಂದು ತಿಳದುಬಂದಿದೆ.

ಬಾಂಬ್ ದಾಳಿಯ ವಿಷಯ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ದೆಹಲಿಯಲ್ಲಿರುವ  ಸಂಸದ ಅರ್ಜುನ್ ಸಿಂಗ್(Arjun Singh) ಅವರು ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

web Title : bombs hurled outside BJP MP Arjun Singh house

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.