Breaking News, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಬಂಧನ

After High Drama, CBI Arrests Former Union Minister P Chidambaram

Breaking News, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಬಂಧನ – After High Drama, CBI Arrests Former Union Minister P Chidambaram

Breaking News, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಬಂಧನ

ಕನ್ನಡ ನ್ಯೂಸ್ ಟುಡೇ : ಚಿದಂಬರಂ ನಿವಾಸದಲ್ಲಿ ಹೈಡ್ರಾಮಾ ಸೃಷ್ಟಿಯಾಗಿತ್ತು. ಚಿದಂಬರಂ ಕಾಂಗ್ರೆಸ್ ಕಚೇರಿಯಿಂದ ಮನೆಗೆ ಬರುತ್ತಿದ್ದಂತೆ, ಚಿದಂಬರಂ ಅವರ ಮನೆಗೆ ಸಿಬಿಐ ಮತ್ತು ಇಡಿ ತಂಡಗಳು ಭೇಟಿ ನೀಡಿವೆ. ಆದರೆ, ಸಿಬ್ಬಂದಿ ಅವರಿಗೆ ಒಳ ಪ್ರವೇಶಿಸಲು ಅವಕಾಶ ನೀಡದೆ ಗೇಟ್ ದ್ವಾರಗಳನ್ನು ಮುಚ್ಚಲಾಯಿತು. ಈ ಹಿನ್ನೆಲೆಯಲ್ಲಿ ಸಿಬಿಐ ಮತ್ತು ಇಡಿ ಅಧಿಕಾರಿಗಳು ಗೇಟ್‌  ದ್ವಾರಗಳನ್ನು ಹಾರಿ  ಒಳ ನುಗ್ಗಿದ್ದಾರೆ.

ಕೆಲವು ಅಧಿಕಾರಿಗಳು ಮುಂಭಾಗದ ಗೇಟ್‌ನಿಂದ ಹಾರಿ ಒಳಗೆ ಹೋದರೆ, ಮತ್ತೆ ಕೆಲವರು ಹಿಂದಿನಿಂದ ಚಿದಂಬರಂ ಅವರ ನಿವಾಸಕ್ಕೆ ಹೋಗಿದ್ದಾರೆ. ಸಿಬಿಐ ಪ್ರವೇಶದಿಂದ ಚಿದಂಬರಂ ಅವರ ನಿವಾಸವು ಗೊಂದಲಗೊಂದಲಕ್ಕೊಳಗಾಗಿತ್ತು. ಒಂದು ಕಡೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಇನ್ನೊಂದು ಕಡೆ ಸಿಬಿಐ ಮತ್ತು ಇಡಿ ಅಧಿಕಾರಿಗಳೊಂದಿಗೆ ಹೈಡ್ರಾಮಾ ನಡೆಯಿತು.

ಚಿದಂಬರಂ ಅವರ ನಿವಾಸದ ಸುತ್ತ ಪೊಲೀಸ್ ಪಡೆಗಳನ್ನು ನಿಯೋಜಿಸಲಾಯಿತು. ಸಿಬಿಐ ಮತ್ತು ಇಡಿ ಅಧಿಕಾರಿಗಳು ಚಿದಂಬರಂ ಅವರ ನಿವಾಸಕ್ಕೆ ಪ್ರವೇಶಿಸಿ, ಹಲವು ಹೈ ಡ್ರಾಮಾ ನಂತರ ಸಿಬಿಐ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರನ್ನು ಬಂಧಿಸಿದೆ.

ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ತನ್ನ ಜಾಮೀನು ಅರ್ಜಿಯನ್ನು ವಜಾಗೊಳಿಸಿದಾಗ ಚಿದಂಬರಂ ಗೆ ದೊಡ್ಡ ಹಿನ್ನಡೆ ಆಗಿತ್ತು.

ಇಂದು ಅವರ ವಕೀಲರು ಜಾಮೀನು ವಿಚಾರವಾಗಿ ಪದೇ ಪದೇ ಪ್ರಯತ್ನಿಸಿದರೂ ಈ ವಿಷಯವನ್ನು ಸುಪ್ರೀಂ ಕೋರ್ಟ್ ನ್ಯಾಯಾಲಯವು ಆಲಿಸಲಿಲ್ಲ.

ಕೇಂದ್ರದ ಬಿಜೆಪಿ ಸರಕಾರ ಉದ್ದೇಶಪೂರ್ವಕವಾಗಿ ದ್ವೇಷದ ರಾಜಕಾರಣ ಮಾಡುತ್ತಿದೆ. ಇದಕ್ಕಾಗಿ ಸಿಬಿಐಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಎಐಸಿಸಿ ಮುಖಂಡರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಆರೋಪಿಸಿದ್ದಾರೆ.////

Web Title : After High Drama, CBI Arrests Former Union Minister P Chidambaram